- ಗೋವಿಂದ ರಾವ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಕರೆ
ಮೈಸೂರು: ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜ್ ನಲ್ಲಿ ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಬೃಹತ್ ಗ್ರಂಥಾಲಯಕ್ಕೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪೋಷಕರು ಮತ್ತು ಮಕ್ಕಳು ಭೇಟಿಕೊಟ್ಟಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಮಾತನಾಡುತ್ತಾ ಮಾಲ್ ಸಂಸ್ಕೃತಿಯಿಂದ ಹೊರಬಂದು ಗ್ರಂಥಾಲಯಗಳಿಗೆ ಮಕ್ಕಳನ್ನು ಕೂಡ ಕರೆದುಕೊಂಡು ಹೋಗುವ ಸಂಸ್ಕೃತಿಗೆ ಪೋಷಕರು ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.
ಈ ಬಾರಿ ಬೇಸಿಗೆ ಶಿಬಿರದಲ್ಲಿ ಒಂದು ತಿಂಗಳ ಅವಧಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳು ಸೇರಿದ್ದಾರೆ. ಅವರಿಗೆ ವಸತಿ, ಊಟಾ, ಆಟೋಟಗಳ ಜೊತೆಗೆ ದಿನಾಲು ಮಕ್ಕಳ ಮುಂದಿನ ತರಗತಿಯ ಪಾಠಗಳ ಬಗ್ಗೆ ಪೀಠಿಕೆಯಾಗಿ ತಿಳಿಸಲಾಗುತ್ತಿದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಸಾಮಾನ್ಯ ವಿಷಯದ ಬಗ್ಗೆಯೂ ಕೂಡ ಅರಿವು ಮೂಡಿಸಲಾಗುತ್ತಿದೆ ಎಂದರು.
ಎಲ್ಲೋ ಒಂದು ಕಡೆ ಕಾಳಿಹುಂಡಿ ಶಿವಕುಮಾರ್ ರವರ ಸಂಗ್ರಹಿಸಿರುವ ಪುಸ್ತಕಗಳು ಮಕ್ಕಳ ಓದಿಗೆ ನೆರವಾಗುತ್ತವೆ. ಪೋಷಕರು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಲಿ ಎಂದು ಕರೆ ನೀಡಿದರು.
ಪೋಷಕರಾದ ಶ್ರೀಶೈಲ ರವರು ಮಾತನಾಡುತ್ತಾ ಇವತ್ತಿನ ದಿನಗಳಲ್ಲಿ ಮಕ್ಕಳು ಮನೆಯಲ್ಲಿ ಟಿವಿ ಮತ್ತು ಮೊಬೈಲ್ ವೀಕ್ಷಣೆ ಮಾಡುತ್ತಾ ಸುಮ್ಮನೆ ಕಾಲಹರಣ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರಾದ ನಾವು ಎಚ್ಚರಿಕೆ ವಹಿಸಬೇಕು. ಗ್ರಂಥಾಲಯದಲ್ಲಿ ಪುಸ್ತಕವನ್ನು ನೇರವಾಗಿ ಮಕ್ಕಳು ವೀಕ್ಷಣೆ ಮಾಡಿ, ಓದುವುದರಿಂದ ಆರೋಗ್ಯದ ದೃಷ್ಟಿಯಿಂದ ಅಲ್ಲದೆ ಬೌದ್ಧಿಕವಾಗಿಯೂ ಕೂಡ ಅನುಕೂಲವಾಗುತ್ತದೆ. ಜೊತೆಗೆ ಓದಿನ ಅಭಿವೃಚಿಯೂ ಕೂಡ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮೈಸೂರಿನ ಲೇಖಕ ವಿಮರ್ಶಕ ಸಂಗ್ರಹಕ ಕಾಳಿಹುಂಡಿ ಶಿವಕುಮಾರ್, ಅಭಿನಂದನ್ ಸಿ ಎಸ್, ಶ್ರೀಶೈಲ, ಸಮೃದ್ಧ, ಅದ್ವಿತ್, ನಾಗರಾಜ್, ಮತ್ತು ಧನರಾಜ್ ಹಾಜರಿದ್ದರು.
Like this:
Like Loading...
Related