ಪುಕ್ಕಟೆಯಾಗಿಸಿಗುವಯಾವವಸ್ತುವಿಗೂನಮ್ಮಲ್ಲಿಬೆಲೆಯಾಗಲಿ, ಮನ್ನಣೆಯಾಗಲಿಇಲ್ಲ. ಸಮಯವೆನ್ನುವುದು ಯಾವುದೇ ಹಣ ನೀಡದೆ ಉಚಿತವಾಗಿ ದೊರಕುವ ಪ್ರತಿ ದಿನದ ಅಗತ್ಯ ಹಾಗೂ ಅನಿವಾರ್ಯವೂಆಗಿಇರುವಅಮೂಲ್ಯವಾದಅನರ್ಘ್ಯರತ್ನ. ಕಾಲದ ಮಹತ್ವವು ಮಾನವ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಕಾಲವನ್ನು ಸರಿಯಾಗಿ ಉಪಯೋಗಿಸುವವನು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ; ಅದನ್ನು ನಿರ್ಲಕ್ಷಿಸುವವನು ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಮಹನೀಯರು ತಮ್ಮ ಜೀವನದ ಮೂಲಕ ಕಾಲದ ಮೌಲ್ಯವನ್ನು ನಮಗೆ ಸ್ಪಷ್ಟವಾಗಿ ತೋರಿಸಿದ್ದಾರೆ. ಅವರು ಪ್ರತಿಯೊಂದು ಕ್ಷಣವನ್ನೂ ಅತ್ಯಂತ ನಿಯಮಬದ್ಧವಾಗಿ ಬಳಸಿಕೊಂಡು ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ.
ಕಾಲವು ಯಾರಿಗೂ ಕಾಯುವುದಿಲ್ಲ; ಅದು ನದಿಯಂತೆ ನಿರಂತರವಾಗಿ ಹರಿಯುತ್ತದೆ. ಕೈಚೆಲ್ಲಿದ ಕ್ಷಣ ಮತ್ತೆ ಮರಳುವುದಿಲ್ಲ ಎಂಬುದು ಕಾಲದ ಅಚಲ ಸತ್ಯ. ಮನುಷ್ಯನ ಜೀವನದಲ್ಲಿ ಸಂಪತ್ತು, ಸ್ಥಾನಮಾನ, ಆರೋಗ್ಯ ಎಲ್ಲವೂ ಕಾಲದ ಬಳಕೆಯ ಮೇಲೆ ಅವಲಂಬಿತವಾಗಿವೆ. ಆದರೂ ನಾವು ಅನೇಕ ಬಾರಿ ಅಲಕ್ಷ್ಯದಿಂದ, ನಿರ್ಲಕ್ಷ್ಯದಿಂದ ಕಾಲವನ್ನು ಕಾಲು ಕಸದಂತೆತುಳಿದುಬಿಡುತ್ತೇವೆ. ಕ್ಷಣಗಳ ಮೌಲ್ಯವನ್ನು ಅರಿಯದೆ, ?ನಾಳೆ ಮಾಡೋಣ? ಎಂಬ ಸೋಮಾರಿತನದಮಂತ್ರದಲ್ಲಿ ಬದುಕನ್ನು ಕಳೆದುಕೊಳ್ಳುತ್ತೇವೆ.
ಕಾಲವನ್ನು ಗೌರವಿಸಿದವನು ಜೀವನವನ್ನು ಗೌರವಿಸಿದವನಾಗುತ್ತಾನೆ; ಕಾಲವನ್ನು ವ್ಯರ್ಥ ಮಾಡಿದವನು ತನ್ನ ಭವಿಷ್ಯವನ್ನೇಹಾಳುಮಾಡಿಕೊಳ್ಳುತ್ತಾನೆ. ಆದ್ದರಿಂದ ?ಕಾಲವನ್ನು ಕಾಲು ಕಸ ಮಾಡಬಾರದು? ಎಂಬ ಸಂದೇಶವು ಕೇವಲ ಉಪದೇಶವಲ್ಲ, ಬದುಕಿನ ಯಶಸ್ಸಿನ ಮೂಲಮಂತ್ರವಾಗಿದೆ. ಈ ಲೇಖನವು ಕಾಲದ ಮಹತ್ವ, ಅದರ ಸದುಪಯೋಗ ಮತ್ತು ನಿರ್ಲಕ್ಷ್ಯದಪರಿಣಾಮಗಳನ್ನು ವಿವರಿಸಿ, ಜವಾಬ್ದಾರಿಯುತಬದುಕಿನತ್ತ ನಮ್ಮನ್ನು ಕರೆದೊಯ್ಯುತ್ತದೆ.
ಕಾಲವೆಂಬುದುನಿತ್ಯವೂನಮಗಾಗಿಹಣನೀಡದೆಲಭ್ಯವಾಗುವಪ್ರತಿದಿನದಹಗಲು-ರಾತ್ರಿಗಳರೂಪದಒಟ್ಟುಮೊತ್ತವಾಗಿದೆ. ಕಲಾಕೌತುಕದಲ್ಲಿಸದಾನಮ್ಮನ್ನುಕಾಡುವಎರಡುವಿಶಿಷ್ಠವಾದಪದಕಮಲಗಳುಒಂದುಸಮಯಮತ್ತೊಂದುಸಾವು. ಸಾವುಕೊನೆಯಸತ್ಯವಾದರೆಸಮಯಮಾತ್ರಅಗೋಚರ-ಅಮೂರ್ತ-ನಿರಾಕಾರ-ನಿರ್ಗುಣ. ಸಮಯ ಎಂಬ ಮೂರಕ್ಷರದ ಪದ ಇಡೀ ಜಗತ್ತನ್ನು ತನ್ನ ಕಪಿಮುಷ್ಟಿಯಲ್ಲಿಸೆರೆಹಿಡಿದುಬಂಧಿಸಿದೆ. ಗಾಳಿಯೊಂದಿಗೆ ಪೈಪೋಟಿ ಒಡ್ಡುವ, ಮನದೊಂದಿಗೆ ಸ್ಪರ್ಧೆಗೆ ಇಳಿಯುವ ಸಮರಸಿಂಹವೇಕಾಲ. ಈ ಕಾಲ ತನ್ನ ನೀಳಕಾಲನ್ನುನಿಡುದಾಗಿ ಹಾಸಿ ಅರಿವಿಲ್ಲದಂತೆ, ಖರ್ಚಾಗುತ್ತಿದ್ದರೆವ್ಯರ್ಥವಾಗಿನಡೆದಾಡುತ್ತಿದ್ದರೆ ಲೆಕ್ಕಕ್ಕೆ ಸಿಗದಂತೆಸವೆದು ಹೋಗುತ್ತದೆ.
ಯಾರಾದರೂ ಮೋಸ ಮಾಡಬಹುದು-ತಾರತಮ್ಯಮಾಡಬಹುದು ಆದರೆ ಸಮಯ ಮತ್ತು ಸಾವುಮೋಸಮಾಡದೆತರತಮಭಾವದಿಂದಕಾಣದೆಎಲ್ಲರಿಗೂ ಸರಿ ಸಮಾನವಾಗಿ ಹಂಚಿಕೆಯಾಗಿದೆ. ರಾಷ್ಟ್ರದ ಅತ್ಯುನ್ನತಸ್ಥಾನದಲ್ಲಿರಲಿಅವರಿಗೂ ಇಪ್ಪತ್ತ ನಾಲ್ಕು ಗಂಟೆಯಿರುವಂತೆ ಸಾಮಾನ್ಯ ವ್ಯಕ್ತಿಗೂಇಪ್ಪತ್ತ ನಾಲ್ಕು ಗಂಟೆಗಳೇ ಅಂತೆಯೇ ಅಪಾರ ಸಿರಿತನ-ಹಣವನ್ನು ಹೊಂದಿದ್ದೇನೆ ತನಗೆ ಸ್ವಲ್ಪ ಅಧಿಕ ತನಗೆ ಮೀಸಲಾಗಿರಬೇಕು ಎಂದು ಬಯಸಿದರೆಲಭ್ಯವಾಗದು ಹಾಗೆಯೇ ಆತ ಬಡವ-ನಿರ್ಗತಿಕ ಅವನಿಗೇತಕೆ ಇಪ್ಪತ್ತನಾಲ್ಕು ಗಂಟೆ ಸ್ವಲ್ಪ ತಗ್ಗಿಸೋಣ ಇಲ್ಲವೇ ಕುಗ್ಗಿಸಿಬಿಡೋಣ ಎಂದು ತೀರ್ಮಾನಗೈದರೆ ಅದೂ ಸಾಧ್ಯವಾಗದು. ಸಾವಿನವಿಚಾರವುಅಷ್ಟೇಬಡವನಾಗಲಿಸಿರಿವಂತನಾಗಲಿಸಾವಿಗೆಒಳಗಾಗುತ್ತಾರೆ. ಈ ಸಮಯ ನಿಲ್ಲದೆ ನಿರಂತರತೆಯಲ್ಲಿಚಲಿಸುತ್ತಾಅನಾಯಾಸವಾಗಿ ಸರಿದು ಹೋಗುತ್ತಲೇ ಇರುತ್ತದೆ. ಸಂಚರಿಸುವ ಇಂತಹ ಸಂಚಾರಿಯೊಂದಿಗೆ ಸಾಗುತ್ತಲೇ ಹೆಜ್ಜೆ ಹಾಕುವುದು ನಮ್ಮ ಕೆಲಸವಷ್ಟೇ. ವಿನಂತಿಗಾಗಲಿಕೋರಿಕೆಗಾಗಲಿಮನಸೋಲದೆವಿಚಲಿತವಾಗದೆ ತನ್ನ ಕಾಯಕ ನಿಷ್ಠೆಯಲ್ಲಿತೊಡಗುವ ಅಲ್ಲದೇ ಅರಿತವರ ಪಾಲಿಗೆ ಬೆರಗಿನ ಬೆಳಕು ಅರಿಯದವರ ಪಾಲಿಗೆ ಕತ್ತಲ ಗಾಢಾಂಧಕಾರದ ಗಹ್ವರ. ಈ ಸಮಯವು ಸರಿದು ಹೋಗುತ್ತದೆ ಎಂಬ ಮಾತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲಕಷ್ಟವಾಗಲಿ-ಸುಖವಾಗಲಿ ಕ್ಷಣಿಕ ಮಾತ್ರವಾಗಿದೆ. ಕೆಲವು ಸಮಯದಲ್ಲಿ ಎದುರಾಗುವಸಮಸ್ಯೆಗಳು ಸಮಯದ ಮೇಲೆ ಕತ್ತಿ ಮಸೆಯುತ್ತಿರುತ್ತದೆ, ಆಗ ಆ ಸಮಯ ಎದುರುಗೊಂಡಸಮಸ್ಯೆಗಳನ್ನುಒದ್ದುಪರಿಹಾರಗಳನ್ನು ಒತ್ತು ತಂದು ನಿಲ್ಲಿಸುತ್ತದೆ ಆ ಪರಿಹಾರಗಳುಶಾಶ್ವತವೇ ಅವು ನೀರ ಮೇಲಣ ಗುಳ್ಳೆ ಎದ್ದ ನೀರ ಪರದೆಯಲ್ಲಿ ಅಂತರ್ಧಾನ. ಈಗಿರುವಲ್ಲಿ ಬದುಕುತ್ತಿರುವ ಜೀವರಾಶಿಗಳನ್ನುಕಟ್ಟಿಹಾಕಿ ಹಾರುತ್ತಿರುವ ಸ್ವಚ್ಚ – ಸ್ವತಂತ್ರ ಹಕ್ಕಿಯರೆಕ್ಕೆಗಳನ್ನು ಕಡಿದು ಹಾಕುವಂತೆ ಸಾವಿನ ಕರೆಯೋಲೆ ಸಮಯಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸಿದೆ.ಗಡಿಯಾರದ ಮುಳ್ಳುಗಳಾಗಲಿಕಾಲಚಕ್ರದನಡಿಗೆ ಎಂದಿಗೂ ಹಿಮ್ಮುಖವಾಗಿರದೆಯೋ ಹಿಂದೆ ಹಿಂದೆಯಾಗಿರದೆ ಮುಂದೆ ಸಾಗುವ ಚಲನಶೀಲತೆಯನ್ನುಒಳಗೊಂಡಿದೆ. ಅದು ಸಾಗುತ್ತಿರಲಾಗಿ ಮುಂದಿನ ಹೆಜ್ಜೆಯನ್ನುತಿಳಿಯಲಾಗದೆಕಾಲದೊಂದಿಗೆ ಕೆಲವು ವೇಳೆ ಹೊಂದಾಣಿಕೆ ಮಾಡಿಕೊಂಡು ಇನ್ನೂ ಕೆಲವು ವೇಳೆ ಸಮರಕ್ಕೆ ನಿಂತು ತಾನೇ ಸೋತಾಗ ಒಪ್ಪಂದ ಮಾಡಿಕೊಂಡು ಬದುಕಿನ ಗಾಲಿಯನ್ನುಮುನ್ನಡೆಸಬೇಕಾಗುತ್ತದೆ.
ಘಟನೆ:ಸರ್‌ಎಂ.ವಿವಿಶ್ವೇಶ್ವರಯ್ಯಅವರುನಾಡುದೇಶಕಂಡಅತ್ಯಂತಶ್ರೇಷ್ಠವ್ಯಕ್ತಿತ್ವದನಾಡಿಮಿಡಿತ, ಅಷ್ಟೇಅಲ್ಲದೆಹೃದಯಬಡಿತವೂಎಂದರೆತಪ್ಪಾಗಲಾರದು. ಅವರಂತೆಉತ್ಸಾಹ-ಶ್ರದ್ದೆ-ಪ್ರಾಮಾಣಿಕತೆ-ಸಮಯನಿಷ್ಠೆಯಿಂದಬದುಕಲುನಮ್ಮಿಂದಸಾಧ್ಯವಿಲ್ಲದೆಇರಬಹುದುಆದರೆಕೊಂಚಮಟ್ಟಿಗಾದರೂನಮ್ಮೊಳಗೆರೂಪಿಸಿಕೊಂಡರೆಸಾರ್ಥಕಬದುಕಿನಸಾಧಕರುಹೇಗೆಸಾಧಕರಾದರುಅವರನಡೆಯಲ್ಲಿನನುಡಿ, ನುಡಿಯಲ್ಲಿನನಡೆಅನುರೂಪವಾದಬಗೆಯನ್ನುಅವರಬದುಕಿನಘಟನೆಯಿಂದಲೇಅರಿಯುವುದುಸೂಕ್ತವೆನಿಸುತ್ತದೆಈನಿಟ್ಟಿನಲ್ಲಿಹಾಗೂಸರ್. ಎಂ. ವಿಶ್ವೇಶ್ವರಯ್ಯನವರು ಸಮಯ ನಿರ್ವಹಣೆಗೆ ತುಂಬಾ ಪ್ರಾಮುಖ್ಯ ಕೊಡುತ್ತಿದ್ದರು. ಅವರ ಜೀವನದ ಒಂದು ಎಂಬುದಕ್ಕೆಪ್ರಸ್ತುತಘಟನೆನಮಗೆದೀಪದಾರಿಯಾಗಿದೆ.
ಒಮ್ಮೆ ಅವರನ್ನು ಭೇಟಿಯಾಗಲುಸಿ.ಕೆ. ವೆಂಕಟರಾಮಯ್ಯನವರು ಬಂದರು. ಇವರು ವಿಶ್ವೇಶ್ವರಯ್ಯನವರನ್ನುಭೇಟಿಯಾಗಲು ನೀಡಿದ ಸಮಯ ಎರಡು ಗಂಟೆ ನಲವತ್ತೈದು ನಿಮಿಷಗಳು!ವೆಂಕಟರಾಮಯ್ಯನವರುತರಾತುರಿಯಲ್ಲಿಎರಡೂವರೆ ಗಂಟೆಗೆ ಬಂದವರು ಬಾಗಿಲು ತಟ್ಟಿದರು. ಬಾಗಿಲು ತೆಗೆದ ಸೇವಕ ತುಟಿಯ ಮೇಲೆ ಬೆರಳಿಟ್ಟು ಮಾತನಾಡದಿರುವಂತೆ ಸೂಚಿಸಿ, ಬೈಟಕ್‌ಖಾನೆಗೆ ಕರೆದುಕೊಂಡು ಹೋಗಿ “ಸ್ವಾಮಿ, ಯಜಮಾನರು ನಿದ್ರೆ ಮಾಡುತ್ತಿದ್ದಾರೆ. ಕುಳಿತುಕೊಳ್ಳಿ” ಎಂದ.ಅ”ಓಹೋ, ನನಗೆ ಭೇಟಿಗೆ ಸಮಯ ನೀಡಿದ್ದು ಮರೆತುಹೋಗಿರಬೇಕು” ಎಂದರಿವರು.
”ಇಲ್ಲ ಸ್ವಾಮಿ, ತಮಗೆ ನೀಡಿದ ಸಮಯ ಎರಡು ಗಂಟೆ ನಲವತ್ತ ಐದು ನಿಮಿಷ. ಈಗಿನ್ನೂ ಎರಡು ಗಂಟೆ ಮೂವತ್ತು ನಿಮಿಷ, ಯಜಮಾನರು ಇನ್ನು ಐದು ನಿಮಿಷದಲ್ಲಿ ಏಳುತ್ತಾರೆ. ಮುಖ ತೊಳೆದು ತಯಾರಾಗಲು ಐದು ನಿಮಿಷ! ಎರಡು ಗಂಟೆ ನಲವತ್ತೈದು ನಿಮಿಷಕ್ಕೆ ಅವರು ನಿಮ್ಮೊಂದಿಗಿರುತ್ತಾರೆ. ನೀವು ಕುಳಿತುಕೊಳ್ಳಿ” ಅಂದ.
ಸಿ.ಕೆ.ವಿ. ಕುಳಿತುಕೊಂಡರು. ಅವರಿಗೆ ಈ ಮಾತುಗಳನ್ನು ಇನ್ನೂ ಅರಗಿಸಿಕೊಳ್ಳಲು ಆಗಿರಲಿಲ್ಲ! ಈ ವಯೋವೃದ್ಧರು ಇಷ್ಟು ಕರಾರುವಾಕ್ಕಾಗಿ ಕಾರ್ಯನಿರ್ವಹಿಸಲು ಸಾಧ್ಯವೇ ?
” ಅಂದರು. ಅವರು ಇನ್ನೂ ಯೋಚನೆಯಲ್ಲಿಇರುವಾಗಲೇ ಕೊಠಡಿಯ ಬಲಭಾಗದ ಬಾಗಿಲು ತೆರೆಯಿತು! ವಿಶ್ವೇಶ್ವರಯ್ಯನವರು ಹೊರಗೆ ಅಡಿ ಇಟ್ಟರು. ಫಳಫಳ ಹೊಳೆವ ಕಪ್ಪು ಶೂಸ್‌ಗಳು! ಗರಿಗರಿಯಾಗಿ ಇಸ್ತ್ರಿ ಮಾಡಿದ ಕಂದು ಬಣ್ಣದ ಸೂಟು, ತಲೆಯ ಮೇಲೆ ಮೈಸೂರು ಪೇಟ! ಇವರನ್ನು ನೋಡಿ “ಗುಡ್ ಮಿಸ್ಟರ್ ವೆಂಕಟರಾಮಯ್ಯ, ಯೂ ಆರ್ ಆನ್ ಟೈಮ್’.ನಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಯಪಾಲನೆ ಅತ್ಯಗತ್ಯ. ಒಂದು ಕಾರ್ಯವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವುದು ವ್ಯಕ್ತಿಯ ಶಿಸ್ತಿನ ಸಂಕೇತ. ಸಮಯಪಾಲನೆಯು ನಮ್ಮ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ವಿದ್ಯಾರ್ಥಿಗಳಾಗಲಿ, ಉದ್ಯೋಗಿಗಳಾಗಲಿ, ಎಲ್ಲರಿಗೂ ಸಮಯದ ಮೌಲ್ಯವನ್ನು ಅರಿತುಕೊಳ್ಳುವುದು ಅಗತ್ಯ. ಯೋಜನೆ ಮಾಡಿ ಕೆಲಸ ಮಾಡುವವರು ಸಮಯವನ್ನುಉತ್ತಮವಾಗಿ ಬಳಸುತ್ತಾರೆ. ಹೀಗೆ ಮಾಡಿದಾಗ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
ಇಂದಿನ ಆಧುನಿಕ ಯುಗದಲ್ಲಿ ಸಮಯದ ದುರುಪಯೋಗ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳು, ಅನಗತ್ಯ ಚಟುವಟಿಕೆಗಳು ನಮ್ಮ ಸಮಯವನ್ನುಹಾಳುಮಾಡುತ್ತಿವೆ. ಆದ್ದರಿಂದ ನಾವು ನಮ್ಮ ದಿನಚರಿಯನ್ನು ಸರಿಯಾಗಿ ರೂಪಿಸಿಕೊಂಡು ಅನಗತ್ಯ ಕಾರ್ಯಗಳನ್ನುತ್ಯಜಿಸಬೇಕು. ಸಮಯವನ್ನುಉಳಿಸುವುದು ಎಂದರೆ ಜೀವನವನ್ನು ಉಳಿಸುವಂತೆಯೇ. ಪ್ರತಿಯೊಂದು ಕ್ಷಣವನ್ನೂಉಪಯುಕ್ತವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಕಾಲವು ಒಬ್ಬ ಮಹಾನ್ ಗುರು. ಅದು ನಮಗೆ ಅನುಭವಗಳ ಮೂಲಕ ಪಾಠಗಳನ್ನು ಕಲಿಸುತ್ತದೆ. ಸಮಯದೊಂದಿಗೆ ನಾವು ಬೆಳೆಯುತ್ತೇವೆ, ಜ್ಞಾನವನ್ನು ಸಂಪಾದಿಸುತ್ತೇವೆ. ಆದರೆ ಸಮಯವನ್ನುನಿರ್ಲಕ್ಷಿಸಿದರೆ ಅದೇ ಕಾಲ ನಮಗೆ ಕಠಿಣ ಪಾಠಗಳನ್ನು ಕಲಿಸುತ್ತದೆ. ಆದ್ದರಿಂದ ಕಾಲದೊಂದಿಗೆ ಹೆಜ್ಜೆ ಹಾಕುವುದು ಜೀವನದ ಸಫಲತೆಯಮಾರ್ಗವಾಗಿದೆ.
ಕಾಲದ ಮಹತ್ವವನ್ನು ಅರಿತುಕೊಂಡು ಅದನ್ನು ಸದುಪಯೋಗ ಮಾಡುವುದು ಜೀವನದ ಯಶಸ್ಸಿನ ಗುಟ್ಟು. ಪ್ರತಿಯೊಬ್ಬರೂ ತಮ್ಮ ಸಮಯವನ್ನುಮೌಲ್ಯಯುತವಾಗಿ ಬಳಸಿಕೊಂಡು ಗುರಿಗಳನ್ನು ಸಾಧಿಸಬೇಕು. ?ಈ ಕ್ಷಣವೇ ನಮ್ಮದು? ಎಂಬ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ನಾವು ಜೀವನದಲ್ಲಿ ಸಾರ್ಥಕತೆ ಕಾಣಬಹುದು.
ಪ್ರತಿಕ್ಷಣದಲ್ಲಿಯೂ ಕಾಲವು ಕಳೆಯುತ್ತಿದ್ದರೂಗೊತ್ತಾಗುವುದಿಲ್ಲ. ಹಸಿಯಾದಮಡಿಕೆಯು ನೀರಿನಲ್ಲಿ ಕರಗುತ್ತಿರುತ್ತದೆ; ಆದರೆ ಅದು ಗೊತ್ತಾಗುವುದಿಲ್ಲ? ಎಂಬ ಸುಭಾಷಿತವು ಮಾನವನ ಜೀವನದ ಸತ್ಯವನ್ನು ಅತ್ಯಂತ ಸುಂದರವಾಗಿ ಚಿತ್ರಿಸುತ್ತದೆ. ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ನಿಧಾನವಾಗಿ ಕರಗುತ್ತಾಹೋಗುತ್ತಿದ್ದರೂ, ಅದರ ಅರಿವು ನಮಗೆ ಬಹುತೇಕ ಸಂದರ್ಭಗಳಲ್ಲಿ ಇರುವುದಿಲ್ಲ. ಇದೇ ಕಾರಣದಿಂದಾಗಿ ನಾವು ಕಾಲದ ಮಹತ್ವವನ್ನು ಅರಿಯದೆ, ಅದನ್ನು ಅಪವ್ಯಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದೇವೆ.
ಕಾಲವು ನಿರಂತರವಾಗಿ ಹರಿಯುವ ನದಿ. ಅದು ಯಾರಿಗಾಗಿ ಕಾಯುವುದಿಲ್ಲ, ಯಾರಿಗಾಗಿಯೂ ಹಿಂದಿರುಗುವುದಿಲ್ಲ. ಒಮ್ಮೆ ಕಳೆಯಲ್ಪಟ್ಟ ಕ್ಷಣವನ್ನು ಪುನಃ ಪಡೆಯುವುದು ಅಸಾಧ್ಯ. ಇದರಿಂದ ತಿಳಿಯುವ ಸತ್ಯ ಏನೆಂದರೆ?ಕಾಲ ಹರಿಯುತ್ತಿದೆಯೆಂದರೆ, ನಮ್ಮ ಜೀವನವೇ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂಬುದು. ಆದರೆ ಈ ಗಂಭೀರ ಸತ್ಯವನ್ನು ನಾವು ಎಷ್ಟು ಮಟ್ಟಿಗೆ ಮನಗಂಡಿದ್ದೇವೆ? ಹಣವನ್ನು ಸಂಪಾದಿಸಲು ನಾವು ಶ್ರಮಿಸುತ್ತೇವೆ; ಅದನ್ನು ಖರ್ಚು ಮಾಡುವಾಗ ಯೋಚಿಸುತ್ತೇವೆ. ಆದರೆ ಕಾಲವನ್ನು ನಾವು ಸಂಪಾದಿಸದೇ ಪಡೆದಿರುವುದರಿಂದ ಅದರ ಬಳಕೆಯಲ್ಲಿ ಎಚ್ಚರಿಕೆ ತೋರುವುದಿಲ್ಲ.
ಹಗಲು?ರಾತ್ರಿ ಕ್ರಮವಾಗಿ ಬದಲಾಯಿಸುತ್ತಿರುವುದು ಕೇವಲ ಪ್ರಕೃತಿಯ ನಿಯಮವಲ್ಲ; ಅದು ನಮ್ಮ ಆಯುಷ್ಯದ ದಿನಗಳು ಒಂದೊಂದಾಗಿ ಕಡಿಮೆಯಾಗುತ್ತಿರುವುದರ ಸೂಚನೆ. ಪ್ರತಿದಿನವೂ ನಮ್ಮ ಜೀವನದ ಒಂದು ಪುಟ ಮುಗಿಯುತ್ತಿದೆ. ಆದರೆ ಈ ಸತ್ಯವನ್ನು ನಾವು ಬಹುಷಃಗಮನಿಸುತ್ತಿಲ್ಲ. ಸುಭಾಷಿತದಲ್ಲಿ ನೀಡಿರುವ ?ಹಸಿಯಾದ ಮಡಿಕೆ ನೀರಿನಲ್ಲಿ ಕರಗುವ? ಹೋಲಿಕೆ, ಕಾಲದ ಸೂಕ್ಷ್ಮ ಹರಿವನ್ನು ಸ್ಪಷ್ಟವಾಗಿ ಮನದಟ್ಟು ಮಾಡುತ್ತದೆ. ಮಡಿಕೆ ನಿಧಾನವಾಗಿ ಕರಗುತ್ತಿದೆಯಾದರೂ, ನಾವು ಅದನ್ನು ತಕ್ಷಣ ಗಮನಿಸದಂತೆ, ಕಾಲವೂ ನಮ್ಮ ಬದುಕಿನಿಂದ ನಿಧಾನವಾಗಿ ಜಾರಿಹೋಗುತ್ತದೆ.ಆದ್ದರಿಂದ, ಜೀವನದ ಪ್ರತಿಯೊಂದು ಕ್ಷಣವನ್ನೂಅಮೂಲ್ಯವೆಂದು ಪರಿಗಣಿಸಿ, ಅದನ್ನು ಸಾರ್ಥಕವಾಗಿಬಳಸಿಕೊಳ್ಳುವುದು ಅತ್ಯಗತ್ಯ. ವ್ಯರ್ಥ ಚಿಂತನೆಗಳು, ನಿರರ್ಥಕ ಕಾರ್ಯಗಳು ಮತ್ತು ಕಾಲಹರಣ ಮಾಡುವ ಅಭ್ಯಾಸಗಳನ್ನು ಬಿಟ್ಟು, ಪ್ರತಿಕ್ಷಣವನ್ನು ಉಪಯುಕ್ತ ಕಾರ್ಯಗಳಲ್ಲಿ ಬಳಸಬೇಕು. ಗುರಿಯುಳ್ಳ ಜೀವನ ನಡೆಸಲು ಸಮಯದ ಯೋಜನೆ ಅತ್ಯವಶ್ಯಕ. ಸಮಯಪಾಲನೆ, ಶಿಸ್ತಿನ ಜೀವನ ಹಾಗೂ ಕಾರ್ಯನಿಷ್ಠೆ ಇವು ಕಾಲದ ಸದುಪಯೋಗಕ್ಕೆಮೂಲಾಧಾರಗಳು.
ಯಾಕೆಕಾರ್ಯಕ್ರಮಇನ್ನೂಪ್ರಾರಂಭವಾಗಿಲ್ಲಎಂದುಯಾರಾದರೂಪ್ರಶ್ನಿಸಿದರೆಅವರಬಾಯಿಂದಬರುವಉತ್ತರಒಂದೇಇಂಡಿಯನ್ಟೈಮ್‌ಅಲ್ಲವೇಸುರುವಾಗೋದುಇನ್ನುಅರ್ಧಇಲ್ಲವೇಒಂದುಗಂಟೆತಡವಾಗಬಹುದುಎಂಬಅಭಿಪ್ರಾಯಒಂದೊಂದುಕಡೆವ್ಯಕ್ತವಾದರೆಮತ್ತೆಕೆಲವುಕಡೆಕಾರ್ಯಕ್ರಮದಮುಖ್ಯಅತಿಥಿಗಳಾದಈರಾಜಕಾರಣಿಗಳುಬಂದಿಲ್ಲಆದ್ದರಿಂದತಡವಾಗ್ತಇದೆಎಂಬಿತ್ಯಾದಿಮಾತುಗಳುತಲೆಎತ್ತಿನಿಲ್ಲುತ್ತವೆ. ಈಕಾರಣದಿಂದಕೆಲವುಕಾರ್ಯಕ್ರಮಗಳುಹೇಳಿದಸಮಯಕ್ಕೆಪ್ರಾರಂಭವಾಗದೆಕಾಲನಕಾಲನ್ನೇಮುರಿದಿರುತ್ತಾರೆ. ಇನ್ನೂಕೆಲವುರಾಜಕಾರಣಿಗಳಿಗೆಸಮಯದಮಹತ್ವವೇತಿಳಿದಂತೆಕಾಲವನ್ನುಕಾಲುಕಸಮಾಡಿರುತ್ತಾರೆ. ಯಾವುದಾದರೂಸರ್ಕಾರಿಕಾರ್ಯಕ್ರಮಗಳುಆಯೋಜನೆಗೊಂಡಿದ್ದರೆಸಾಮಾನ್ಯವಾಗಿಒಂದುಗಂಟೆಎರಡುಗಂಟೆತಡವಾಗಿಬರುವುದುರೂಢಿಯಾಗಿರುತ್ತದೆ. ಕೆಲವುಖಾಸಗಿಕಾರ್ಯಕ್ರಮಗಳುಆಹ್ವಾನಪತ್ರಿಕೆಯಕಾಲಮಿತಿಯನ್ನುಮೀರಿಪ್ರಾರಂಭವಾಗುತ್ತವೆ.ಏನೇಆದರೂನಾವುಸಮಯಕ್ಕೆಬೆಲೆಕೊಡದಹೊರತುನಾವುಜೀವನದಲ್ಲಿಗೌರವವನ್ನುಪಡೆದುಕೊಳ್ಳಲುಸಾಧ್ಯೇಇಲ್ಲ.
ಕಾಲವೇ ಜೀವನ. ಕಾಲವನ್ನು ಗೌರವಿಸುವವನು ಜೀವನವನ್ನು ಗೌರವಿಸುತ್ತಾನೆ. ಕರಗುತ್ತಿರುವಆಯುಷ್ಯದಪ್ರತಿಕ್ಷಣವನ್ನೂಅರ್ಥಪೂರ್ಣವಾಗಿಬಳಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆದ್ದರಿಂದ, ನಾವು ಎಲ್ಲರೂ ಕಾಲದ ಮಹತ್ವವನ್ನು ಅರಿತು, ಪ್ರತಿಕ್ಷಣವನ್ನೂಸದ್ಬಳಕೆ ಮಾಡಿಕೊಂಡು ಜೀವನವನ್ನು ಸಾರ್ಥಕಗೊಳಿಸೋಣ.ಒಟ್ಟಾರೆಯಾಗಿ ಹೇಳುವುದಾದರೆ ಕಾಲವು ಮರುಬರುವುದಿಲ್ಲದ ಅಮೂಲ್ಯ ಸಂಪತ್ತು. ಅದನ್ನು ನಿರ್ಲಕ್ಷ್ಯದಿಂದ ವ್ಯರ್ಥ ಮಾಡಿದರೆ, ಬದುಕಿನ ಅರ್ಥವನ್ನೇಕಳೆದುಕೊಳ್ಳುವ ಅಪಾಯವಿದೆ. ?ಕಾಲವನ್ನು ಕಾಲು ಕಸ ಮಾಡಬಾರದು? ಎಂಬ ಸಂದೇಶವು ನಮಗೆ ಪ್ರತಿಕ್ಷಣವೂ ಜಾಗೃತರಾಗಿರಲುಬೋಧಿಸುತ್ತದೆ. ಸಮಯವನ್ನುಸದ್ಭಳಕೆ ಮಾಡಿದರೆ ವ್ಯಕ್ತಿತ್ವ ವಿಕಸನವಾಗುತ್ತದೆ, ಸಾಧನೆಗಳ ದಾರಿ ತೆರೆದುಕೊಳ್ಳುತ್ತದೆ. ಆದರೆ ಆಲಸ್ಯ, ಅಜಾಗರೂಕತೆ ಮತ್ತು ಮುಂದೂಡಿಕೆಯ ಮೂಲಕ ಕಾಲವನ್ನು ಕಸ ಮಾಡಿದರೆ, ಪಶ್ಚಾತ್ತಾಪವೇ ಉಳಿಯುತ್ತದೆ. ಆದ್ದರಿಂದ ಪ್ರತಿದಿನದ ಪ್ರತಿಕ್ಷಣವನ್ನೂಗುರಿಯೊಂದಿಗೆ, ಶ್ರಮದೊಂದಿಗೆ ಮತ್ತು ಮೌಲ್ಯಬದ್ಧ ಕಾರ್ಯಗಳಿಗೆ ಮೀಸಲಿಟ್ಟುಬದುಕುವುದೇ ನಿಜವಾದ ಜಾಣ್ಮೆ. ಕಾಲದ ಗೌರವವೇ ಬದುಕಿನ ಗೌರವ; ಅದನ್ನು ಅರಿತು ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜು,
ಹವ್ಯಾಸಿ ಬರಹಗಾರ, ಮೈಸೂರು.