ಸುವರ್ಣನಗರ, ಬೊಮ್ಮನಹಳ್ಳಿ, ಅರಕರವಾಡಿ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಲು ಚಂದನಗೌಡ ಒತ್ತಾಯ

  • ರೈತರ ಸಮಸ್ಯೆ ನಿವಾರಿಸಲು ಕರ್ನಾಟಕ ರಾಜ್ಯ ರೈತ ಕಲ್ಯಾಣ  ಸಂಘ ಸದಾ ನಿಮ್ಮೊಂದಿಗೆ .

ಚಾಮರಾಜನಗರ : ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿನ ಸುವರ್ಣನಗರ, ಬೊಮ್ಮನಹಳ್ಳಿ, ಅರಕರವಾಡಿ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಯಪುತ್ರ ಚಂದನಗೌಡ ಒತ್ತಾಯಿಸಿದರು.
   ಜಿಲ್ಲೆಯ ಬೊಮ್ಮನಹಳ್ಳಿ ಕೆರೆ ಸಮೀಪದಲ್ಲಿ ಗುಂಡ್ಲುಪೇಟೆ ತಾಲೂಕು ಹಾಗೂ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸಿರುವ ನೀರು ವಿಭಜನೆ ಗೇಟ್ ಬಳಿ ಅವರು ಭೇಟಿ ನೀಡಿ ವೀಕ್ಷಿಸಿ ಯರಗನಹಳ್ಳಿ ಕೆರೆ ಸುವರ್ಣನಗರ ಕೆರೆ, ಬೊಮ್ಮನಹಳ್ಳಿ ಕೆರೆ ಅರಕರವಾಡಿ ಕೆರೆಗೆ ರೈತರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು ಮಾತನಾಡಿದರು.
   ಈಗಾಗಲೇ ಜಿಲ್ಲಾಧಿಕಾರಿಗಳು, ಸಂಬಂಧ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಅವರೊಂದಿಗೆ
ಮಾತನಾಡಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.
   ರಾಜ್ಯಾದ್ಯಂತ ಜ್ವಲಂತ ಸಮಸ್ಯೆ ಎದುರಾಗಿದೆ. ಕರುನಾಡಿನ ಇತಿಹಾಸ ಪುಟಗಳನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಂಡಂಹ ಸಂದರ್ಭದಲ್ಲಿ ಭಾಗಶ ಮನುಕುಲ, ಇಂದಿನ ಬೇಸಿಗೆ ಕಾಲಮಾನವನ್ನು ಎದುರಿಸುವ ನಿಟ್ಟಿನಲ್ಲಿ ಮನುಕುಲ ಜೊತೆಗೆ ಪ್ರಾಣಿಸಂಕುಲ ಸಂಕಷ್ಟದಲ್ಲಿ ಸಿಲುಕಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲಿ ಜೀವಜಲಕ್ಕೂ ಸಂಕಟ ಎದುರಾಗಿದ್ದು, ಅನ್ನದಾತರು, ಪ್ರಾಣಿಸಂಕುಲ ಬೇಸಿಗೆ ಪರಿಸ್ಥಿತಿ ಎದುರಿಸಿದೆ.  ಈ ಭಾಗದ ಜನತೆ ನಮ್ಮೊಂದಿಗೆ ನೋವುವನ್ನು ಹೇಳಿಕೊಂಡ ಹಿನ್ನಲೆಯಲ್ಲಿ ರೈತ ಕಲ್ಯಾಣ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ರೈತರ ಆಹವಾಲು ಆಲಿಸಲಾಗಿದೆ. ಸರ್ಕಾರ, ಕಾಡಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲೂಕಿನ ಸುವರ್ಣನಗರ ಕೆರೆ, ಬೊಮ್ಮನಹಳ್ಳಿ ಕೆರೆ ಅರಕರವಾಡಿ ಕೆರೆಗೆ ಶಾಶ್ವತವಾಗಿ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.
ದೇಶದಲ್ಲಿ ಸ್ವಾತಂತ್ರ್ಯ ಬಂದು 80 ವರ್ಷವಾದರೂ ಕೂಡ ರಾಜಕೀಯವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಕೂಡಲೇ ಸರ್ಕಾರ, ನೀರಾವರಿ ಇಲಾಖೆ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದರು. ರೈತರ ಸಮಸ್ಯೆ ನಿವಾರಿಸಲು ರೈತ ಕಲ್ಯಾಣ ಸದಾ ನಿಮ್ಮೊಂದಿಗೆ ಇರುತ್ತದೆ. ಎಂದರು.
  ಅರಕಲವಾಡಿ ಮಹೇಶ್ ಮಾತನಾಡಿ, 4ನೇ ಹಂತದಲ್ಲಿ ಯರಗನಹಳ್ಳಿ ಕೆರೆ ಸುವರ್ಣನಗರ ಕೆರೆ, ಅರಕಲವಾಡಿ ಕೆರೆ, ಬೊಮ್ಮನಹಳ್ಳಿ ಕೆರೆಯ ಭಾಗದ ರೈತರು ಇಲ್ಲಿ ಸೇರಿದ್ದೇವೆ. ಎಲ್ಲ ಕೆರೆಗಳಿಗೂ ನೀರು ತುಂಬಿಸಲಿ ನಮ್ಮದು ಯಾವುದೇ ಅಭ್ಯಂತರ ಇಲ್ಲ. ಎಲ್ಲ ಕೆರೆಗೂ ಸ್ವಲ್ಪ ಸ್ವಲ್ಪ ನೀರು ಬಿಟ್ಟಿರುವುದರಿಂದ ಯಾವುದೇ ಕೆರೆ ಸಂಪೂರ್ಣವಾಗಿ ತುಂಬಿಲ್ಲ 3ನೇ ಹಂತದಲ್ಲಿ ಒಂದು ಕೆರೆ ಇದೆ ತುಂಬಿಸಿಬಿಟ್ಟು 4ನೇ ಹಂತ ಆರಂಭಿಸಿದ ಮೇಲೆ ಯಾವುದೇ ಕಾರಣಕ್ಕೂ ಸುವರ್ಣನಗರ ಕೆರೆ, ಬೊಮ್ಮನಹಳ್ಳಿ, ಅರಕರವಾಡಿ ಕೆರೆ ಭರ್ತಿಯಾಗುವ ತನಕ ಮೋಟಾರ್ ಆಫ್ ಮಾಡಬಾರದು ಎಂದು ಒತ್ತಾಯಿಸಿದರು.
2023 ಫೆ. 15 ರಂದು ನೀರು ನಿಲ್ಲಿ ಸಲಾಗಿದೆ. ಕಳೆದ 2.5 ವರ್ಷಗಳಿಂದ ಒಂದು ತೊಟ್ಟು ನೀರು ಬಿಟ್ಟಿಲ್ಲ. ಈ ವರ್ಷ ಸುವರ್ಣನಗರ ಕೆರೆ, ಬೊಮ್ಮನಹಳ್ಳಿ, ಅರಕರವಾಡಿ ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗುವ ತನಕ ಮೋಟಾರ್ ಆಫ್ ಮಾಡಬಾರದು ಒಂದು ವೇಳೆ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
  ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಜಯ್ ಅರಕಲವಾಡಿ, ಹರೀಶ್ ಸರಗೂರು,  ಅರಕಲವಾಡಿ ಮಹೇಶ್, ಅರಕಲವಾಡಿ ಗುರುಸ್ವಾಮಿ, ರವಿಕುಮಾರ್, ಯರಗನಹಳ್ಳಿ ಬಸವಣ್ಣ, ರವಿ, ವಿವಿಧ ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *