ಚಾಮರಾಜನಗರ : ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾದ ಉಪಾಧ್ಯಕ್ಷ ಬುಲೆಟ್ ಚಂದ್ರು ಅವರ
ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಜೋಡಿರಸ್ತೆಯಲ್ಲಿರುವ ಮೂಡಲಧ್ವನಿ ವೃದ್ದಾಶ್ರಮದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಯಿತು.
ಅಭಿಮಾನಿ ಬಳಗದ ಆಟೋ ಮಂಜುನಾಥ್ ಮಾತನಾಡಿ,ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾದ ಉಪಾಧ್ಯಕ್ಷ ಬುಲೆಟ್ ಚಂದ್ರು ಅವರ
ಹುಟ್ಟುಹಬ್ಬದ ಅಂಗವಾಗಿ ಗೆಳೆಯರ ಬಳಗದ ವತಿಯಿಂದ ನಗರದ ಜೋಡಿರಸ್ತೆಯಲ್ಲಿರುವ ಮೂಡಲಧ್ವನಿ ವೃದ್ದಾಶ್ರಮದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಯಿತು. ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಮಾನ ದೊರಕಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಬುಲೆಟ್ ಚಂದ್ರು ಅಭಿಮಾನಿ ಬಳಗದ ರಮೇಶ್ ನಾಯಕ, ಆಟೋ ಸಿದ್ದು, ನಾಗೇಂದ್ರ, ಕುಮಾರ್, ಪ್ರಜ್ವಲ್, ಮಹದೇವು, ಎಸ್.ಕಿರಣ್, ವಿಶ್ವ,ನಂದೀಶ್, ಮನೋಜ್, ಸಾಮ್ರಾಟ್ ಹಾಜರಿದ್ದರು.