ಶೌರ್ಯ ಮತ್ತು ಸಾಹಸದ ಪ್ರತೀಕ ಮದಕರಿ ನಾಯಕ : ಬುಲೆಟ್ ಚಂದ್ರು

  • ಚಾಮರಾಜನಗರದಲ್ಲಿ ರಾಜಾವೀರ ಮದಕರಿನಾಯಕ ಪುಣ್ಯಸ್ಮರಣೆ

 ಚಾಮರಾಜನಗರ: ರಾಜಾವೀರ ಮದಕರಿನಾಯಕರು ಒಬ್ಬ ದಕ್ಷ ಆಡಳಿತಗಾರಾಗಿದ್ದು, ಸ್ವಾಭಿಮಾನಿ, ಶೌರ್ಯ ಮತ್ತು ಸಾಹಸದ ಪ್ರತೀಕ ಎಂದು ನಾಯಕ ಸಮುದಾಯದ ಯುವ ಮುಖಂಡ ಬುಲೆಟ್ ಚಂದ್ರು ಹೇಳಿದರು.
ನಗರದ ಶ್ರೀ ವಾಲ್ಮೀಕಿ ಆಟೋ ನಿಲ್ದಾಣದಲ್ಲಿ ನಾಯಕ ಸಮುದಾಯದ ವತಿಯಿಂದ ನಡೆದ ರಾಜಾವೀರ ಮದಕರಿನಾಯಕ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
ಮದಕರಿ ನಾಯಕರ  ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲಾ ಹರಡಲು ಕಾರಣವಾಯಿತು.

ಅವರ ಆಳ್ವಿಕೆಯಿಂದಾಗಿಯೆ ಚಿತ್ರದುರ್ಗ ಸಂಸ್ಥಾನವು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು. ಮುಖ್ಯವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಮದಕರಿ ನಾಯಕರು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ-ಸಾಹಸಗಳನ್ನು ಪ್ರತಿನಿಧಿಸುತ್ತವೆ ಎಂದರು.


ಬದುಕಿನ ಬಹುಕಾಲ ಯುದ್ಧೋತ್ಸವಗಳಲ್ಲೆ ಭಾಗಿಯಾಗುತ್ತಿದ್ದ ಮದಕರಿನಾಯಕರು ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭೀಕ್ಷೆಯಿಂದ ಇಟ್ಟುಕೊಳ್ಳುವಲ್ಲಿ ವಹಿಸುತ್ತಿದ್ದ ಪಾತ್ರ ವಿಶೇಷವಾದುದು. ಅವರ ತತ್ವಾದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು, ಆಟೋಮಂಜು, ಸುಬ್ರಹ್ಮಣ್ಯ, ಮಹದೇವನಾಯಕ, ಲಕ್ಷ್ಮಣ, ಮಹೇಶ್ ನಾಯಕ, ಶ್ರೀನಿವಾಸ, ಬಂಗಾರನಾಯಕ, ರಂಗಸ್ವಾಮಿ, ಎಸ್ ಎಂಬಿಟಿ ಸಿದ್ದರಾಜು, ರಾಜಣ್ಣ, ಚಂದ್ರು, ಸಂತು, ನಾಗೇಶ್, ಮಣಿ, ಗುರು, ಸಿದ್ದರಾಜು, ರಾಘು, ಶ್ರೀನಿವಾಸ, ಚೇತನ್, ಕಿರಣ್, ಮನು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *