ಚಾಮರಾಜನಗರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ಬೆಂಗಳೂರಿನಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಮೇ.31 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಮಂಜುನಾಥಚಾರಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಧ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಸಾರಥ್ಯದಲ್ಲಿ ವಿಶ್ವಕರ್ಮ ಮಠಾಧೀಶರ ಮತ್ತು ಸ್ವಾಮಿಜೀಗಳ ದಿವ್ಯಸಾನಿಧ್ಯದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರುಗಳ ಮಾರ್ಗದರ್ಶನದಲ್ಲಿ 2025-26ನೇ ಸಾಲಿನ
ಎಸ್ ಎಸ್ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.75 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದ ಸಮುದಾಯದ ಮಕ್ಕಳಿಗೆ ಮಹಾಸಭಾದ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು
ಅಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿರುವ ಪುಟ್ಟಣ್ಣ ಚೆಟ್ಟಿ ಭವನದಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈಗಾಗಲೇ ನಮ್ಮ ಸಮಾಜದ ವಾಟ್ಸಪ್ ಗ್ರೂಪ್ ಗಳಲ್ಲಿ ನೂಂದಣೆ ಅರ್ಜಿಯ ಪ್ರತಿಯನ್ನು ಹಾಕಲಾಗಿದೆ. ಅರ್ಜಿಯನ್ನು ಡೌನ್ ಲೋಡ್ ಮಾಡಿ ತಮ್ಮ-ತಮ್ಮ ಅಂಕಪಟ್ಟಿ,
ಟಿ.ಸಿ ಅಥವಾ ಜಾತಿ ಪ್ರಮಾಣ ಪತ್ರದ ದಾಖಲಾತಿಗಳು ಮತ್ತು ಭರ್ತಿ ಮಾಡಿದ ಪ್ರತಿಭ- ಪುರಸ್ಕಾರ ನೂಂದಣಿ ಅರ್ಜಿ ಫಾರಂನ್ನು ಸಕ್ಯಾನ್ ಮಾಡಿ ಅದರ ಸಕ್ಯಾನ್ ಕಾಪಿಯನ್ನು ಸುಂದರ್ ಜಿ, ಬೆಂಗಳೂರು ಅವರ ಮೊ.ಸಂಖ್ಯೆ 9886423935ಗೆ ವಾಟ್ಸ್ ಆಪ್ ಮುಖಾಂತರ ಕಳಿಹಿಸಿಕೊಡಬೇಕು ಎಂದರು.
ಚಾಮರಾಜನಗರ ಜಿಲ್ಲೆ ಪ್ರತಿಯೊಂದು ತಾಲ್ಲೂಕು, ಹೊಬಳಿ ಮತ್ತು ಗ್ರಾಮಗಳಲ್ಲಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಗಳು ಇದರ ಸದುಪಯೋಗವನ್ನು ಪಡೆದು ಕೂಳ್ಳುಬೇಕು.750 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾತ್ರ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈಗಾಗಲೇ 500 ಅರ್ಜಿಯನ್ನು ಬಂದಿದ್ದು, ಅದ್ದರಿಂದ ಅದಷ್ಟು ಬೇಗ ಚಾಮರಾಜನಗರ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಮಕ್ಕಳು ಕೂಡ ಅರ್ಜಿಯನ್ನು ಹಾಕಬೇಕು. ರಾಜ್ಯದ್ಯಾಂತ ಇರುವ ವಿಶ್ವಕರ್ಮ ಸಮಾಜ ಭಾಂದವರ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
, ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಗೇಂದ್ರ ವಿಶ್ವಕರ್ಮ, ಯುವ ಘಟಕದ ತಾಲೂಕು ಅಧ್ಯಕ್ಷ ವೈ.ಬಿ.ಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ಎ.ಎನ್.ನಾಗರಾಜು, ಚಂದಕವಾಡಿ ಹೋಬಳಿ ಅಧ್ಯಕ್ಷ ಕೆಂಪರಾಜು ಹಾಜರಿದ್ದರು.