ಚಾಮರಾಜನಗರ: ಚಾಮರಾಜನಗರ. ತಾಲೂಕಿನ ಬಿಸಲವಾಡಿ ಗ್ರಾಮದ ಡಾ, ಬಾಬು ಜಗಜೀವನರಾಮ್ ಬಡಾವಣೆಯಲ್ಲಿ 50ಲಕ್ಷ ರೂ, ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ರಸ್ತೆಗಳು ಗ್ರಾಮಗಳ ಅಭಿವೃದ್ದಿಯ ಪೂರಕವಾಗಿವೆ. ಸಂಬAಧಪಟ್ಟ ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಈ ಭಾಗದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕ ಹೋಗುವ ಸಂಪರ್ಕ ರಸ್ತೆಗಳು, ಸಮುದಾಯ ಭವ£,À ಆಶ್ರಯ ಮನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರಕಾರ ಮಂಜೂರು ಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಂದರ್ಭದಲ್ಲಿ ಎ,ಪಿ,ಎಂ,ಸಿ ಮಾಜಿ ಅಧ್ಯಕ್ಷ ಬಿಕೆ,ರವಿಕುಮಾರ್, ಪಿ,ಎಲ್, ಡಿ,ಬ್ಯಾಂಕ್ನಿರ್ದೇಶP ಬಿಸಲವಾಡಿÀರವಿ ಗ್ರಾ,ಪಂಮಾಜಿಅಧ್ಯಕ್ಷ ಮಹದೇವಪ್ಪ, ಕೃಷಿಪತ್ತಿನಸಹಕಾರಸಂಘzನಿರ್ದೇಶಕರಾದ, ಶಿವಸ್ವಾಮಿ, ಉಮೇಶ್ಎಸ್, ನಾಗರಾಜು, ಎಸ್,ಶಿವಕುಮಾರ್,ಮಂಜುನಾಥ್,ಮುಖAಡರಾದ ನಾರಾಯಣ್ನಾಯ್ಕ, ನಾಗರಾಜು, ಚನ್ನಬಸಪ್ಪ, ಮಹದೇವಯ್ಯ, ಬಸವರಾಜು, ಶಿವನಂದ, ಮಲ್ಲಿಕಾರ್ಜುನಪ್ಪ, ಗುರುಮಲ್ಲು, ಸೇರಿದಂತೆ ಆಧಿಜಾಂಬವರ ಬೀದಿಯ ಯಜಮಾನರು, ಗ್ರಾಮದ ಎಲ್ಲಾ ವರ್ಗದ ಸಮುದಯದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.