ಜನ್ ಭಾಗೀದಾರಿ ಸಬ್ಸೆ-ಡೋರ್ ಸಬ್ಸೆ ಪೆಹಲೆ ಅಭಿಯಾನಕ್ಕೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಚಾಲನೆ

ಚಾಮರಾಜನಗರ: ಬುಡಕಟ್ಟು ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವ ಸಂಬಂಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಮಟ್ಟದಲ್ಲಿ ಅರಿವು ಹಾಗೂ ಸೌಲಭ್ಯ ಕುರಿತ ಶಿಬಿರಗಳ ಆಯೋಜನೆ ಹಾಗೂ ಪಿಎಂ ಜನ್ ಮನ್ ಹಾಗೂ ದರ್ತಿ ಅಬಾ ಜನ್ ಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ ಯೋಜನೆಯಡಿ ಜನ್ ಭಾಗೀದಾರಿ ಸಬ್ಸೆ-ಡೋರ್ ಸಬ್ಸೆ ಪೆಹಲೆ ಅಭಿಯಾನಕ್ಕೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಇಂದು ಚಾಲನೆ ನೀಡಿದರು. 

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಇತರೆ ಗಣ್ಯರು ದರ್ತಿ ಅಬಾ ಯೋಜನೆಗಳ ಮಾಹಿತಿಯನ್ನೊಳಗೊಂಡ ಪೋಸ್ಟರ್ ಅನ್ನು ಪ್ರದರ್ಶಿಸಿದರು. ಇದೇ ವೇಳೆ ಹಾಸ್ಟೆಲ್ ಮಕ್ಕಳಿಗೆ ಜನನ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

  ಕಾರ್ಯಕ್ರಮದಲ್ಲಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಇತರರು ಇದ್ದರು. 

  ಜಿಲ್ಲೆಯಲ್ಲಿ ಶೇ. 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದ ಜನರು ವಾಸಿಸುವ ಚಾಮರಾಜನಗರ ತಾಲೂಕಿನ ಬೆಡಗುಳಿ, ಕಣ್ಣೇಗಾಲ, ಯಾನಗಹಳ್ಳಿ, ಮೇಲ್ ಮಾಳ, ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ, ಸೋಮನಪುರ, ಮದ್ದೂರು, ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ, ಬಿ. ಕಂದಹಳ್ಳಿ, ಕೊಳ್ಳೇಗಾಲ ತಾಲೂಕಿನ ಪಾಳ್ಯ ಯೋಜನೆಗೆ ಆಯ್ಕೆಯಾಗಿದೆ.

Leave a Reply

Your email address will not be published. Required fields are marked *