ಚಾಮರಾಜನಗರ: ನಗರದ13ನೇ ವಾರ್ಡ್ ನ ಲ್ಲಿ ಅಂಬೇಡ್ಕರ್ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
2025-26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಮುಂದುವರೆದ ಕಾಮಗಾರಿ 20 ಲಕ್ಷ ರೂ. ನೀಡಲಾಗಿದೆ. ಗುಣಮಟ್ಟದಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಮುಖಂಡ ಮಹೇಶ್ ಕುದರ್, ಸಿ.ಕೆ.ಮಂಜುನಾಥ್, ಯಜಮಾನರಾದ ಮಂಜುನಾಥ್ ಕುದರ್, ಮಹದೇವು, ಶಿವಣ್ಣ, ಗುರುಸ್ವಾಮಿ, ನಾಗರಾಜು, ಮಲ್ಲಿಕಾರ್ಜುನ, ನಿರ್ಮಿತಿ ಕೇಂದ್ರ ಇಂಜಿನಿಯರ್ ಆದ ಭೀಮ್ ಸಾಗರ್, ಸೋಮುಶೇಖರ್ ಇತರರು ಹಾಜರಿದ್ದರು.