- ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ 135ನೇ ಭೀಮೋತ್ಸವ ಸಮಾರಂಭ
ಚಾಮರಾಜನಗರ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಶೀಲವಂತ, ಜ್ಞಾನವಂತ ದೇಶದಲ್ಲಿ ಬೇರೊಬ್ಬರು ಇಲ್ಲ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಭೀಮರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮಾದಿನಾಚರಣೆ ಅಂಗವಾಗಿ ನಡೆದ ಭೀಮೋತ್ಸವ :ರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಜಯಂತಿ ಎಂದಾಕ್ಷಣ ನಮಗೆ ಜ್ಞಾಪಕಕ್ಕೆ ಬರಬೇಕಾದ್ದು ಅಂಬೇಡ್ಕರ್ ಎಂದರೆ ಜ್ಞಾನ, ಅಂಬೇಡ್ಕರ್ ಎಂದರೆ ಶೀಲ, ಅಂಬೇಡ್ಕರ್ ಅವರಂತಹ ಶೀಲವಂತ, ಜ್ಞಾನಿ ಮುಂದೇನೂ ಯಾರು ಹುಟ್ಟಲ್ಲ. ಹಿಂದೇನು ಯಾರು ಹುಟ್ಟಿಲ್ಲ. ಅಂತಹ ದೊಡ್ಡ ಶೀಲವಂತ, ಜ್ಞಾನಿಯಾಗಿದ್ದರು ಎಂದರು.
ದೇವಸ್ಥಾನಗಳು ನಿಮ್ಮ ಕಣ್ಣುಗಳನ್ನು ಮುಚ್ಚಿಸುತ್ತವೆ. ಗ್ರಂಥಾಲಯಗಳು ನಿಮ್ಮ ಕಣ್ಣುಗಳನ್ನು ತೆರೆಸುತ್ತವೆ. ಆಗಾಗಿ ಅಂಬೇಡ್ಕರ್ ಅವರ ರೀತಿಯಲ್ಲಿ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು. ಮನೆಮನೆಗೆ ಅಂಬೇಡ್ಕರ್ ಅರಿವು ಕಾರ್ಯಕ್ರಮ ಹಾಕಿಕೊಳ್ಳಲು ಮೂಲಕ ತಮ್ಮ ಇಡೀ ಸಮಗ್ರ ಕುಟುಂಬವನ್ನೇ ತ್ಯಾಗ ಮಾಡಿ ನಮಗೆಲ್ಲಿ ನೆಮ್ಮದಿ ಬದುಕು ನೀಡಿರುವ ಅಂಬೇಡ್ಕರ್ ಅವರನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿ ಬದುಕನ್ನ ಕಲ್ಪಿಸಿಕೊಟ್ಟಿದ್ದಾರೆ. ಆಗಾಗಿ ಅನೇಕರು ಎಲ್ಲರಂಗದಲ್ಲೂ ಹೊರಹೊಮ್ಮಿರುವುದನ್ನು ನಾವು ಕಾಣುತ್ತೇವೆ ಎಂದರು.
ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರು ರಾಷ್ಟ್ರಪತಿಯಾಗಿದ್ದಾರೆ.. ರಾಜ್ಯಪಾಲರಾಗಿದ್ದಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಆಗಿದ್ದಾರೆ. ದಕ್ಷಿಣ ಭಾರತದಲ್ಲಿ ಇನ್ನೂ ಆಗಬೇಕಾಗಿದೆ. ಆಂಧ್ರ ಹೊರತುಪಡಿಸಿದರೆ. 60ರ ದಶಕದದಲ್ಲಿ ದಾಮೋದರ ಸಂಜೀವಯ್ಯನವರು ಪ್ರಥಮ ದಲಿತ ಮುಖ್ಯಮಂತ್ರಿಯಾಗಿ ಹೊರಹೊಮ್ಮುತಾರೆ. ಅನೇಕರು ಸರ್ವಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ. ರಾಜ್ಯದ ಹೈಕೋರ್ಟ್ ನ್ಯಾಯಾಧೀಶರಾಗಿದ್ದಾರೆ. ಸಮುದಾಯ ಅನೇಕ ಹಿರಿಯರು ಐಪಿಎಸ್, ಐಎಎಸ್, ಫಾರಿನ್ ಸೇವೆಯಲ್ಲೂ ಕೂಡ ಅಂಬೇಡ್ಕರ್ ಅವರು ಕೊಟ್ಟಂತಹ
ಶಿಕ್ಷಣದ ಮುಖಾಂತರ ಹೊರಹೊಮ್ಮಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸೇವೆ ಮಾಡುವ ಮೂಲಕ ರಾಜ್ಯ, ರಾಷ್ಟ್ರವನ್ನು ಆಳುತ್ತಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅವರ ಅನುಯಾಯಿಗಳಾದ ನಾವೆಲ್ಲರೂ ಯಾವ ರೀತಿಯಲ್ಲಿ ಪಾಲನೆ ಮಾಡುತ್ತಿದ್ದೇವೆ ಎಂಬುವುದು ಬಹಳ ಮುಖ್ಯವಾಗಿದೆ ಎಂದರು.
ಪ್ರತಿಭಾ ಪುರಸ್ಕಾರ.: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭೋಗಾಪುರ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮುಖ್ಯಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ. ಮೈಸೂರಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಮಲ್ಲಿಕ್, ನಗರಸಭೆ ಆಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ, ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಮುಖಂಡ ಮಹೇಶ್ ಕುದರ್, ಸಿಮ್ಸ್ ಪ್ರಾಂಶುಪಾಲ ಕೆ.ಟಿ.ಡಾ.ಅಜಯ್, ಮೋಹನಾಂಬ, ಡಾ.ಭೀಮ್ ರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಮಹದೇವಯ್ಯ, ಗೌ, ಅಧ್ಯಕ್ಷ ಕೃಷ್ಣರಾಜು, ಉಪಾಧ್ಯಕ್ಷರಾದ ಶಿವಕುಮಾರ್, ಯಶೋಧರ, ಪ್ರಧಾನ ಕಾರ್ಯದರ್ಶಿ ಆರ್.ಶಿವಮೂರ್ತಿ, ಖಜಾಂಚಿ
ಹೆಚ್.ವಿ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಶಿವನಾಗಯ್ಯ, ಸಂಘಟನಾ ಕಾರ್ಯದರ್ಶಿ ದೊರೆಸ್ವಾಮಿ, ಪತ್ರಿಕಾ ಕಾರ್ಯದರ್ಶಿ ಪವನ್ ಕುಮಾರ್, -ನಿರ್ದೇಶಕರಾದ ಬಿ,ಕೃಷ್ಣ, ಹೆಚ್.ವಿ.ಯತೀಶ್, ಪ್ರತಾಪ್, ರವಿ ಅರಸ್, ಕಲ್ಯಾಣಮ್ಮ, ನಾಗೇಂದ್ರ, ಎಂ.ನಾಗಬಸವಣ್ಣ, ಶೃಂಗಾರ್, ಮಲ್ಲಿ ಕಾರ್ಜುನಸ್ವಾಮಿ, ಪ್ರಕಾಶ್ ಇತರರ ಹಾಜರಿದ್ದರು.