ಚಾಮರಾಜನಗರದ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂಕೀರ್ಣವನ್ನು ವಿದ್ಯಾರ್ಥಿ ನಿಲಯದ ಅಧ್ಯಕ್ಷರು, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಾಲ್ಮೀಕಿ ಸಮಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಉದ್ಘಾಟಿಸಿ ಶುಭ ಕೋರಿದರು.
ತಾಲೂಕು ನಾಯಕರ ಸಾರ್ವಜನಿಕ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪು..ಶ್ರೀನಿವಾಸನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಾಜಿ ಸದಸ್ಯ ಚೆಂಗುಮಣಿ, ಕಂಡಕ್ಟರ್ ಚಾ.ಸಿ.ಸೋಮನಾಯಕ, ಬಿಜೆಪಿ ಮಾಜಿ ಅಧ್ಯಕ್ಷ ಆರ್.ಸುಂದರ್, ಯಜಮಾನರಾದ ರಾಜುನಾಯಕ, ಮಹದೇವನಾಯಕ, ವರದನಾಯಕ, ಮುಖಂಡರಾದ ಲಿಂಗರಾಜು, ಮಹದೇವು, ರಂಗಸ್ವಾಮಿ ನಾಯಕ ಹಾಗೂ ನಾಯಕರ ಸಾರ್ವಜನಿಕ ವಿದ್ಯಾರ್ಥಿನಿಲಯದ ಸದಸ್ಯರು, ಎಲ್ಲ ಗ್ರಾಮದ ಯಜಮಾನರು, ಮುಖಂಡರು ಭಾಗವಹಿಸಿದ್ದರು.