ಚಂದಕವಾಡಿಯಲ್ಲಿ ಮಳೆ ಬಂದರೆ, ಮನೆಯೊಳಗೆ ನುಗ್ಗುವ ಚರಂಡಿ ನೀರು

  • ಕ್ರಮವಹಿಸದಿದ್ದರೆ ಗ್ರಾ.ಪಂ.ಮುಂದೆ ಪ್ರತಿಭಟನೆ ನಿವಾಸಿಗಳ ಎಚ್ಚರಿಕೆ

ಚಾಮರಾಜನಗರ: ಮಳೆ ಬಂದರೆ, ಮನೆಯೊಳಗೆ ನುಗ್ಗುವ ಚರಂಡಿ ನೀರು, ಗಿಡಗಂಟೆಗಳು ಬೆಳೆದು ಚರಂಡಿ ಕಾಣುತ್ತಿಲ್ಲ ಇದು ತಾಲೂಕಿನ
ಚಂದಕವಾಡಿ ಗ್ರಾಮದ ಹೆಬ್ಬಸೂರು ರಸ್ತೆಯ ಬದಿಯ ನಿವಾಸಿಗಳ ಸ್ಥಿತಿ.
ಇದು ಗ್ರಾಮದ ಮುಖ್ಯ ಚರಂಡಿಯಾಗಿರುವುದರಿಂದ ಇಡೀ ಗ್ರಾಮದ ಚರಂಡಿ ನೀರು ಇಲ್ಲಿಯೇ ಹೊರಹೋಗಬೇಕು. ಚರಂಡಿ ಚಿಕ್ಕದಾಗಿದ್ದು, ಡಕ್ ಚಿಕ್ಕದಾಗಿದ್ದು  ಇಲ್ಲಿ ಕಸಕಡ್ಡಿ ಸಿಕ್ಕಿಕೊಳ್ಳುವುದರಿಂದ  ಕೊಂಚ ಮಳೆ ಬಂದರೆ ಸಾಕು ಮಳೆ ನೀರಷ್ಟೇ ಅಲ್ಲ, ಚರಂಡಿ ನೀರು ಮನೆಯೊಳಗೆ ನುಗ್ಗುತ್ತದೆ. ರಸ್ತೆ ಮೇಲೆ ಹರಿಯುವುದರಿಂದ ತುಂಬಾ ಸಮಸ್ಯೆಯಾಗಿದ್ದು, ಗಬ್ಬುವಾಸನೆ ಬರುತ್ತದೆ. ಮನೆ ಶೀತವಾಗುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಹಳೆಯ ಪಿಡಿಓ, ಈಗಿನ ಪಿಡಿಓಗೂ ಮನವಿ ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದರು.
ಚರಂಡಿ‌ಮೇಲೆ ಬೆಳೆದಿರುವ  ಗಿಡಗಂಟೆಗಳನ್ನು , ಹೂಳು ತೆರವುಗೊಳಿಸಿಲ್ಲ.  ಒಂದು ವರ್ಷಕ್ಕೆ ಒಂದು ಭಾರಿ ಮಾತ್ರ ಮಾಡುತ್ತಾರೆ. ಕೂಡಲೇ ಬೀದಿ ಚರಂಡಿ ಅಗಲೀಕರಣ ಮಾಡಿ ದೊಡ್ಡ ಡಕ್ ನಿರ್ಮಿಸಿ ಮನೆಗೆ, ರಸ್ತೆಯ ಮೇಲೆ ಕೊಳಚೆ ನೀರು ಹರಿಯದಂತೆ ಕ್ರಮವಹಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಾಗಿ ನಿವಾಸಿಗಳಾದ ಚೆನ್ನಂಜನಾಯಕ, ಮಹೇಶ್, ನಾಗಮ್ಮ, ಸಿದ್ದರಾಜು ಎಚ್ಚರಿಸಿದರು.

Leave a Reply

Your email address will not be published. Required fields are marked *