ಪಿರಿಯಾಪಟ್ಟಣ : ಸಾವಯವ ಗೊಬ್ಬರದ ಮೂಲಕ ಅಧಿಕ ಇಳುವರಿ ಮತ್ತು ಉತ್ತಮ ಬೇಸಾಯ ಮಾಡಲು ಸಾಧ್ಯ ಎಂದು ಸಂಸ್ಥೆಯ ಮುಖ್ಯಸ್ಥ ಹರವೆ ರವಿ ಕುಮಾರ್ ಕರೆ ನೀಡಿದರು.
ಪಟ್ಟಣದ ರಾಂಪುರ ಕಾಲೋನಿಯಲ್ಲಿರುವ ಭೀಮ ಭವನದಲ್ಲಿ ಹರವೆ ವೆಂಚರ್ಸ್ ಪ್ರೈ.ಲಿ. ವತಿಯಿಂದ ರೈತರಿಗೆ ಹಮ್ಮಿಕೊಂಡಿದ್ದ ನಮ್ಮ ನಡಿಗೆ ಕೃಷಿಕರ ಕಡೆಗೆ ಹಾಗೂ ಮಣ್ಣಿಗೆ ಮರುಜನ್ಮ ರೈತರಿಗೆ ಪುನರ್ಜನ್ಮ ಎಂಬ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಥೆಯು ವಿಷಮುಕ್ತ ಮಣ್ಣು ರೋಗಮುಕ್ತ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ರೈತರ ಸಮಸ್ಯೆಗಳ ಬಗ್ಗೆ ಹಾಗೂ ರೈತನನ್ನು ರೈತ ಉದ್ಯಮಿಯನ್ನಾಗಿ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಪ್ರಾರಂಭಿಸಿದ್ದು,ಈ ಅಭಿಯಾನದಲ್ಲಿ ರೈತರಿಗೆ ಕೃಷಿ ತಜ್ಞರಿಂದ ಮಣ್ಣಿನ ಫಲವತ್ತತೆ, ಬೀಜೋಪಚಾರ, ಸಸ್ಯೋಪಚಾರ ಕೀಟ ಮತ್ತು ರೋಗ ನಿಯಂತ್ರಣ ಸೇರಿದಂತ್ತೆ ಮಣ್ಣಿಗೆ ಹಾನಿಯಾಗದ ರೀತಿಯಲ್ಲಿ ಕಳೆ ನಿಯಂತ್ರಣ ಹಾಗೂ ಅಧಿಕ ಇಳುವರಿಯ ಬಗ್ಗೆ ಸಾವಯವ ಕೃಷಿ ಆಧಾರಿತ ಉತ್ಪನ್ನಗಳನ್ನು ಬಳಸುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಾವಯವ ತಜ್ಞ ಬಿ.ವಿ. ಚಂದ್ರಶೇಖರ್ ಮಾತನಾಡಿ, ವ್ಯವಸಾಯ ಮಾಡಲು ಕೃಷಿಕರು ಫಲವತ್ತಾದ ಮಣ್ಣು ಯಾವ ರೀತಿ ಮಾಡಬೇಕು ಎಂದು ಪ್ರವೀ ಣತೆ ರೂಡಿಸಿಕೊಳ್ಳಬೇಕು. ಫಲವತ್ತದೆ ಇದ್ದಾಗ ಮಾತ್ರ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ.ಆದ್ದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಸಾವಯವ ಕೃಷಿಯನ್ನು ಪಾಲಿಸಬೇಕು ಎಂದರು.
ಮನುಷ್ಯನು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು.ಫಲವತ್ತಾದ ಮಣ್ಣಿಗೆ ನೈಸರ್ಗಿಕ ಪೋಷಕಾಂಶ ಸೇರ್ಪಡಿಸಬೇಕು.ಆಗ ಮಾತ್ರ ಮನುಷ್ಯರಿಗೆ ವಿಷಮುಕ್ತ ಆಹಾರ ದೊರೆಯುತ್ತದೆ. ಈ ಭೂಮಿ ನಮ್ಮ ಪೂರ್ವಜರಿಂದ ಬಂದ ಬಳುವಳಿ ಅಲ್ಲ. ನಮ್ಮ ಮುಂದಿನ ಪೀಳಿಗೆಗೆ ಈ ಫಲವತ್ತಾದ ಭೂಮಿಯನ್ನು ಕೊಡುಗೆಯಾಗಿ ನೀಡಬೇಕು. ಹೆತ್ತ ತಾಯಿ ಅಷ್ಟೇ ಪ್ರಾಮುಖ್ಯತೆ, ಪ್ರೀತಿ ಮತ್ತು ವಿಶ್ವಾಸವನ್ನು ಭೂಮಿ ಮೇಲೆ ಇಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ಆರ್.ಕಿರಣ್, ಮಹಾಲಕ್ಸ್ಮಿ, ಅಕ್ಕಮಹಾದೇವಿ, ಪುರಸಭೆ ಮಾಜಿ ಸದಸ್ಯ ಶ್ಯಾಮ್,ಸಂಸ್ಥೆಯ ಕ್ಷೇತ್ರ ಅಧಿಕಾರಿಗಳಾದ ರಾಜು ಸ್ವಾಮಿ, ದೇವೇಂದ್ರ, ಕೃಷ್ಣ, ,ರೈತರಾದ ಜವರಣ್ಣ, ಗೋಪಿ,ಕೀರ್ತಿ,ವೆಂಕಟೇಶ್,ಬಾಬು, ಅರುಣ್, ಈರಾಜ್, ಸುರೇಶ ಸೇರಿದಂತ್ತೆ ಇತರರಿದ್ದರು.