ಸೇವೆ ಮಾಡುವುದೇ ನಮ್ಮ ಟ್ರಸ್ಟ್ ಗುರಿ: ಹರಿಚರಣ್

  • ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್ ನಿಂದ ಚಾಮರಾಜನಗರ ತಾಲೂಕಿನ ಅರಳೀಕಟ್ಟೆ ಶ್ರೀಗಂಗಾಧರೇಶ್ವರ ಪ್ರೌಢಶಾಲಾ  ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ, ವಾಟರ್ ಬಾಟಲ್ ವಿತರಣೆ

ಚಾಮರಾಜನಗರ: ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಅರಳೀಕಟ್ಟೆ ಗ್ರಾಮದ ಶ್ರೀಗಂಗಾಧರೇಶ್ವರ ಪ್ರೌಢ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ, ವಾಟರ್ ಬಾಟಲ್ ವಿತರಿಸಲಾಯಿತು.
ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಬ್ಯಾಗ್, ನೋಟ್ ಪುಸ್ತಕ ವಿತರಿಸಿದ ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್ ಹರಿಚರಣ್  ಮಾತನಾಡಿ, 2021ರಲ್ಲಿ ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್ ಆರಂಭವಾಯಿತು. ವರ್ಷಕ್ಕೆ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಓದುವ ಮಕ್ಕಳಿಗೆ ಸಹಕಾರ ಕೊಟ್ಟರೆ ಮುಂದೆ ಅವರು ಬೆಳೆದು ಅವರು ಸಾವಿರ ಜನರಿಗೆ ಒಳ್ಳೆಯದು ಮಾಡಬೇಕು. ಅದು ಟ್ರಸ್ಟ್ ಮುಖ್ಯ ಉದ್ದೇಶವಾಗಿದೆ. ಕೋವಿಡ್ ಸಂದರ್ಭದಲ್ಲಿ ಮನೆಮನೆಗೂ ಪುಡ್‌ಕಿಟ್ ವಿತರಿಸಲಾಗಿದೆ. ಬಡಮಕ್ಕಳು, ಅನಾಥಾಶ್ರಮ ಮಕ್ಕಳಿಗೆ ಬಟ್ಟೆ, ಶಾಲಾ ಶುಲ್ಕ ಕಟ್ಟುವುದು, ಚೆನ್ನಾಗಿ ಓದುವ ಮಕ್ಕಳಿಗೆ ನಾವು ಬೆ೦ಬಲವಾಗಿ ನಿಂತು ನೆರವು ನೀಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಚೆನ್ನಾಗಿ ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಸಿ.ಎನ್.ಸಂಪತ್ ಕುಮಾರ್ ಮಾತನಾಡಿ, ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್  ತಾಲೂಕಿನ ಅರಳೀಕಟ್ಟೆ ಶ್ರೀಗಂಗಾಧರೇಶ್ವರ ಪ್ರೌಢ ಶಾಲೆಯನ್ನು ಆಯ್ಕೆ ಮಾಡಿಕೊಂಡು ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ, ವಾಟರ್ ಬಾಟಲ್ ವಿತರಿಸಿರುವುದು ನಿಜಕ್ಕೂ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ.  ವಿದ್ಯಾರ್ಥಿಗಳ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ಓದಿದರೆ ಟ್ರಸ್ಟ್ ನ ಕೊಡುಗೆ ಸಾರ್ಥಕ ವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ  ಶಾಲಾ ಮುಖ್ಯಶಿಕ್ಷಕ  ವೀರಭದ್ರಸ್ವಾಮಿ ಮಾತನಾಡಿ,  ನೆರಳು ಶ್ಯಾಡೋ ಚಾರಿಟಬಲ್ ಟ್ರಸ್ಟ್ ನಮ್ಮ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ, ವಾಟರ್ ಬಾಟಲ್ ವಿತರಿಸಿರುವುದು ತುಂಬಾ ಸಂತಸ ಉಂಟು ಮಾಡಿದೆ.  ಆಗಾಗಿ ಶಾಲಾ ವತಿಯಿಂದ ಟ್ರಸ್ಟ್ ಹರಿಚರಣ್ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯ, ಉದಯ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನವೀನ್ , ಶಿಕ್ಷಕರಾದ ನಾಗರಾಜು,  ಎಸ್. ಶಿವಕುಮಾರ್ ,  ದೈಹಿಕ ಶಿಕ್ಷಕ ಎಂ.ನಾಗರಾಜು, ರಾಜೇಶ್, ಕೆ.ಮಂಜು, ಮಂಜುಳ, ಮನೋಜ್ ಕುಮಾರ್, ಗುರುಸ್ವಾಮಿ, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *