ಚಾಮರಾಜನಗರ: ಗೊಜುಕಾನ್ ಕರಾಟೆ ಡು ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ
ನಗರದ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಾಮರಾಜನಗರದ ನಾಗ ಮಾರ್ಷಲ್ ಆರ್ಟ್ಸ್ ಅಕಾಡಮಿ ಕರಾಟೆ ಪಟುಗಳು ಕತಾ ವಿಭಾಗದಲ್ಲಿ ವಿಜಯ್. ಜ್ಞಾಣೇಶ್ ಕುಮಾರ್. ಹರ್ಷವರ್ಧನ್ ಪ್ರಥಮ ಸ್ಥಾನ, ಹೇಮಂತ್. ಪವನ್. ಮನ್ವಿತ್ ದ್ವಿತೀಯ ಸ್ಥಾನ, ಮಂಜುನಾಥ್. ನವನೀತ್. ವಿವೇಕ್ ತೃತೀಯ ಸ್ಥಾನ ಪಡೆದು.
ವಿಜೇತರಾಗಿ ಜಿಲ್ಲೆ ಗೆ ಕೀರ್ತಿ ತಂದಿದ್ದಾರೆ. ಅವರನ್ನು ಮುಖ್ಯ ತರಬೇತುದಾರರು, ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರ ಸೆನ್ಸಾಯ್ ಯೋಗೇಶ್.ಸೆನ್ಸಾಯ್ ರಮೇಶ್.ಸೆನ್ಸಾಯ್ ಶೇಖರ್ ಅಭಿನಂದಿಸಿದ್ದಾರೆ.