ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ವಿಜಯ ಅಕ್ಷೇಪ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ರಾಷ್ಟ್ರೀಯ ಹೆದ್ದಾರಿ ತಡೆದು ತಮಿಳುನಾಡು ಸರ್ಕಾರ, ಮುಖ್ಯಮಂತ್ರಿ ವಿಜಯ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಶ್ರೀನಿವಾಸಗೌಡ ಮಾತನಾಡಿ, ಮೇಕೆದಾಟು ಯೋಜನೆಗೆ , ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ ತೀವ್ರವಾಗಿ ವಿರೋಧಿಸಿರುವುದು ಅತ್ಯಂತ ಖಂಡನೀಯ. ಮೇಕೆ’ದಾಟು ಯೋಜನೆಗೆ ಸುಪ್ರೀಂಕೋರ್ಟ್ ಕರ್ನಾಟಕ ಪರ ತೀರ್ಪು ನೀಡಿದೆ. ಇನ್ನೇನು ಕಾಮಗಾರಿ ಆರಂಭಿಸುವ. ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಟ್ಟಲು ಬಿಡುವುದಿಲ್ಲ ಇದರ ಬಗ್ಗೆ ಕಾನೂನಾತ್ಮಕ’ ತೀವ್ರ ಹೋರಾಟ ಮಾಡುವುದಾಗಿ ಹೇಳಿರುವುದು ಅತ್ಯಂತ ಖಂಡನೀಯವಾದದ್ದು ಎಂದರು.
ಕರುಣಾನಿಧಿ, ಜಯಲಲಿತಾ ಅವರ ಕಾಲದಲ್ಲೂ ತಮಿಳುನಾಡು, ಕರ್ನಾಟಕ ರಾಜ್ಯಗಳ ನಡುವೆ ತೀವ್ರ ಸಂಘರ್ಷ ನಡೆದಿತ್ತು. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ ಅವರು ಅಕ್ಕಪಕ್ಕದ ರಾಜ್ಯಗಳ ಜೊತೆಯಲ್ಲಿ ಸಾಮರಸ್ಯದಿಂದ ಇರುತ್ತಾರೆ ಎಂದು ಭಾವಿಸಿದ್ದೇವು ಆದರೆ ವಿಜಯ ಅವರು, ಕರುಣಾನಿಧಿ, ಜಯಲಲಿತಾ ಅವರ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಕರ್ನಾಟಕದಲ್ಲಿ ಮೇಕೆದಾಟು ನಿರ್ಮಾಣದಿಂದ ಲಕ್ಷಾಂತರ ಎಕರೆ ಜಮೀನುಗಳಿಗೆ ನೀರಾವರಿ, ಕುಡಿಯುವ ನೀರಿಗೆ, ರೈತರಿಗೆ ಅನುಕೂಲವಾಗುತ್ತದೆ.ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಸೊಪ್ಪು ಹಾಕಬಾರದು ಇಂತಹ ಹೇಳಿಕೆಗಳನ್ನು ತಮಿಳು ನಾಡು ಸರ್ಕಾರದಿಂದ ಬಾರಬಾರದು. ಬಂದರೆ ನಾವು ಕೂಡ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀನಿವಾಸಗೌಡ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಚಾ.ವೆಂ.ರಾಜ್‌ ಗೋಪಾಲ್, ಪಣ್ಯದಹುಂಡಿ ರಾಜು, ಲೋಕೇಶ್ ಹೊಮ್ಮ, ರಾಚಪ್ಪ, ರವಿಚಂದ್ರಪ್ರಸಾದ್ ,
ಮಹೇಶ್‌ಗೌಡ, ಸಿದ್ದಶೆಟ್ಟಿ, ರಂಗಸ್ವಾಮಿ, ಚಂದಕವಾಡಿ ರಾಜಣ್ಣ, ಮಹೇಶ್, ಮುತ್ತುರಾಜು, ಅಮಚವಾಡಿ ರಾಜು, ಆಟೋ ಲಿಂಗರಾಜು, ರಮೇಶ್, ನಾಗರಾಜು, ರವೀಂದ್ರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *