ನಗರದ ಸ್ವಚ್ಛತೆಗೆ ರಸ್ತೆಬದಿ ವ್ಯಾಪಾರಿಗಳು ಸಹಕರಿಸಿ: ಪೌರಾಯುಕ್ತ ಪರಶುರಾಮ ಎಂ. ಛಲವಾದಿ

  • ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸಬೇಡಿ

ಚಾಮರಾಜನಗರ:  ನಗರದ ಸ್ವಚ್ಚತೆಗೆ ರಸ್ತೆಬದಿ ವ್ಯಾಪಾರಿಗಳು ತಳ್ಳುಗಾಡಿ ವ್ಯಾಪಾರಿಗಳು ಸಹಕರಿಸಬೇಕು ಎಂದು ಪೌರಾಯುಕ್ತ  ಪರಶುರಾಮ ಎಂ.ಛಲವಾದಿ ಮನವಿ ಮಾಡಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆಬದಿ, ತಳ್ಳುಗಾಡಿ ವ್ಯಾಪಾರಿಗಳು ಸಭೆಯಲ್ಲಿ ಅವರು ಮಾತನಾಡಿ, ನಗರವನ್ನು ಸ್ಚಚ್ಚ ನಗರವನ್ನಾಗಿ ಸುವ ಗುರಿ ಹೊಂದಲಾಗಿದೆ ಆಗಾಗಿ  ಎಲ್ಲೆಂದರಲ್ಲಿ ಕಸ ಹಾಕದೆ ತಮ್ಮತಮ್ಮ ಅಂಗಡಿ ಮುಂಭಾಗದಲ್ಲಿ ಡಬ್ಬವನ್ನಿಟ್ಟು ಕಸ ಹಾಕುವ ಮೂಲಕ ಸ್ವಚ್ಚವಾಗಿಟ್ಟು ಕೊಳ್ಳಬೇಕು ನಿಷೇಧಿತ ಪ್ಲಾಸ್ಟಿಕ್ ಬಳಸದೆ  ಬಟ್ಟೆ ಬ್ಯಾಗ್ ಬಳಸುವ ಮೂಲಕ ನಗರ ಸ್ವಚ್ಚತೆಗೆ ಸಹಕರಿಸಬೇಕು.ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪರಿಸರ ಅಭಿಯಂತರಾದ ರೂಪ, ಕಂದಾಯಾಧಿಕಾರಿ ಹೇಮಂತ್ ಕುಮಾರ್ , ಆರೋಗ್ಯ ಅಧಿಕಾರಿ ಮಂಜುನಾಥ್, ರಸ್ತೆ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *