- ಯಾನಗಳ್ಳಿಯಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಚಾಮರಾಜನಗರ: ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ದಿ ಆಗುತ್ತದೆ ಎಂದು ಬಿಜೆಪಿ ಮುಖಂಡ ಬುಲೆಟ್ ಚಂದ್ರು ಹೇಳಿದರು.
ತಾಲೂಕಿನ ಯಾನಗಳ್ಳಿಯಲ್ಲಿ ಕಿಚ್ಚ ಅಭಿಮಾನಿ ಬಳಗದ ವತಿಯಿಂದ ಅಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಬಿಜೆಪಿ ಜಿಲ್ಲಾ ಮುಖಂಡ ಬುಲೆಟ್ ಚಂದ್ರು ಚಾಲನೆ ನೀಡಿದ ಮಾತನಾಡಿದರು.
ಕಿಚ್ಚ ಸುದೀಪ್ ಚಿತ್ರದ ನಾಯಕ ಮಾತ್ರವಲ್ಲ ಅವರು ನಿರ್ದೇಶಕರು ನಿರ್ಮಾಪಕರು ಒಳ್ಳೆ ಚಿತ್ರ ಕಥೆಗಾರರು ಹಾಗೂ ಗಾಯಕರು ಸಹ ಅವರು ಹಿರಿಯರ ಮೇಲೆ ಗೌರವ ಕಿರಿಯರ ಮೇಲೆ ಪ್ರೀತಿಯನ್ನು ಕೊಡುವ ರೀತಿಯನ್ನು ನಾವು ನೋಡಿ ಕಲಿಯಬೇಕು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವಿನ ಸಮಾಧಿಯನ್ನು ಕೋರ್ಟ್ ಆದೇಶದ ಮುಖಾಂತರ ಅದನ್ನು ತೆರವು ಗೊಳಿಸಿದ್ರು ತದನಂತರ ಕಿಚ್ಚ ಸುದೀಪ್ ತಮ್ಮ ಸ್ವಂತ ಹಣದಿಂದ ಕೆಂಗೇರಿಯಲ್ಲಿ ಅರ್ಥ ಎಕರೆ ಜಮೀನನ್ನು ಖರೀದಿ ಮಾಡಿ ದಿವಂಗತ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಿದಲ್ಲಿ ಮುಂದಾಗಿರುವುದು ತುಂಬಾ ಸಂತಸವಾಗಿದೆ ಎಂದರು
ವಾಲ್ಮೀಕಿ ಟ್ರಸ್ಟ್ ಉಪಾಧ್ಯಕ್ಷ ಮಂಜು , ಬಿಜೆಪಿ ಎಸ್ ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಎಸ್.ಕಿರಣ್, ಅಯೋಜಕರಾದ ರಂಗಪ್ಪ ,ರವಿ, ಶಾಹುಲ್ , ಮಂಜುನಾಥ್, ಆಕಾಶ್, ನಂಜುಂಡನಾಯಕ, ಮಹೇಶ್, ನಾರಾಯಣ ಸ್ವಾಮಿ, ದೊರೆಸ್ವಾಮಿ ಹಾಗೂ ಗ್ರಾಮದ ಯಜಮಾನರು, ಕಿಚ್ಚಬಾಯ್ಸ್ ಭಾಗವಹಿಸಿದ್ದರು