ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗಳ ಸಾನಿಧ್ಯದಲ್ಲಿ ವಹಿಸಲಿದ್ದಾರೆ
ಚಾಮರಾಜನಗರ: ಗುಂಡ್ಲುಪೇಟೆ ರಸ್ತೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಯಡಪುರ ಸರ್ಕಲ್ ಎದುರಿನ ಆವರಣದಲ್ಲಿ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್, ನರ್ಸಿಂಗ್ ಶಾಲೆ, ನರ್ಸಿಂಗ್ ಕಾಲೇಜ್, ಅಲೈಡ್ ಹೆಲ್ತ್ ಸೈನ್ಸ್‌ಸ್ ಕಾಲೇಜ್ ಮತ್ತು ವಿದ್ಯಾರ್ಥಿನಿಲಯಗಳ ನೂತನ ಕಟ್ಟಡಗಳ ಭೂಮಿಪೂಜೆಯು 23 ಏಪ್ರಿಲ್ ರಂದು ಗುರುವಾರ ಬೆಳಗ್ಗೆ 9.00 ಗಂಟೆ ಶ್ರೀ ಶಿವರಾತ್ರಿ ದೇಶಿಕೇಂದ್ರ
ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದು ಜೆಎಸ್ ಎಸ್ ಮಹಾವಿದ್ಯಾಪೀಠ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ. ಆರ್.
ಮಹೇಶ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂದಿಗೆ ಗ್ರಾಮೀಣ ಪ್ರದೇಶವಾಗಿದ್ದ ಚಾಮರಾಜನಗರದಲ್ಲಿ 1958ರಲ್ಲಿ ಮೊದಲಿಗೆ ಪ್ರೌಢಶಾಲೆಯನ್ನು, ತದನಂತರ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. 1967ರಲ್ಲಿ ಪದವಿಪೂರ್ವ ಕಾಲೇಜು, ನಂತರ ಪದವಿ ಕಾಲೇಜು ಪ್ರಾರಂಭವಾಯಿತು. 1981ರಲ್ಲಿ ಕೈಗಾರಿಕ ತರಬೇತಿ ಕೇಂದ್ರ, 2001ರಲ್ಲಿ ಮರಿಯಾಲದಲ್ಲಿ ರೂರಲ್ ಇನ್‌ಕ್ಯುಬೇಷನ್ ಅಂಡ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (RISDC) ನ್ನು ಪ್ರಾರಂಭಿಸಲಾಯಿತು. ಇದೇ ವರ್ಷದಲ್ಲಿ ಚಾಮರಾಜನಗರದ ಪದವಿ ಮತ್ತು ಪದವಿಪೂರ್ವ ಕಾಲೇಜುಗಳನ್ನು ಮಹಿಳಾ ಕಾಲೇಜುಗಳಾಗಿ ಪರಿವರ್ತಿಸಲಾಯಿತು.
ಚಾಮರಾಜನಗರ ಜಿಲ್ಲೆಯಾದ್ಯಂತ ಹಾಗೂ ತಾಲ್ಲೂಕಿನ ಸಂತೆಮರಹಳ್ಳಿ, ಹಳ್ಳಿಕೆರೆಹುಂಡಿ, ಉಮ್ಮತ್ತೂರು, ಅರಕಲವಾಡಿ, ಉಡಿಗಾಲ ಮುಂತಾದ ಕಡೆಗಳಲ್ಲಿ ಪ್ರೌಢಶಾಲೆಗಳನ್ನು ನಡೆಸಲಾಗುತ್ತಿದೆ. ಚಾಮರಾಜನಗರದಲ್ಲಿ ಪ್ರೌಢಶಾಲೆ, ಬಿಎಡ್ ಕಾಲೇಜು, ಸಂಸ್ಕೃತ ಪಾಠಶಾಲೆ, ವೃತ್ತಿಪರ ವಾಹನ ಚಾಲನೆ ತರಬೇತಿ ಸಂಸ್ಥೆಯನ್ನೂ ಸಹ ನಡೆಸಲಾಗುತ್ತಿದೆ.
ಜಿಲ್ಲೆಗೆ ಹೊಂದಿಕೊಂಡಂತಿರುವ ತಾಳವಾಡಿಯಲ್ಲಿ ಕೈಗಾರಿಕ ತರಬೇತಿ ಕೇಂದ್ರ, ಮೆಟ್ರಿಕ್ಯುಲೇಷನ್ ಶಾಲೆ ನಡೆಸಲಾಗುತ್ತಿದೆ. ಸಮಾಜದ ಶೈಕ್ಷಣಿಕ ಅಭಿವೃದ್ಧಿಯನ್ನು ಮನಗಂಡು ಹೀಗೆ ನಿರಂತರವಾಗಿ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡುತ್ತಲೇ ಬಂದಿದೆ. ಶೈಕ್ಷಣಿಕ ಕ್ಷೇತ್ರದ ಹೆಚ್ಚಿನ ಅಗತ್ಯತೆಯನ್ನು ಮನಗಂಡು గ్రామిణ విద్యాథిF గలగ ಅನುಕೂಲವಾಗುವಂತೆ 2004ರಲ್ಲಿ ನರ್ಸಿಂಗ್ ಶಾಲೆಯನ್ನು ಪ್ರಾರಂಭಿಸಲಾಯಿತು. 2014ರಲ್ಲಿ ಪಬ್ಲಿಕ್ ಶಾಲೆಯನ್ನು ಪ್ರಾರಂಭ ಮಾಡಲಾಯಿತು.
ಚಾಮರಾಜನಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಯನ್ನು 2016ರಲ್ಲಿ ನಿರ್ಮಿಸಿ ಉತ್ತಮ ಸೇವೆ ನೀಡಲಾಗುತ್ತಿದೆ. ನರ್ಸಿಂಗ್ ಕೋರ್ಸ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಒದಗಿಸುವ ದೃಷ್ಟಿಯಿಂದ 2022ರಲ್ಲಿ ಕಾಲೇಜ್ ಆಫ್ ನರ್ಸಿಂಗ್ ಅನ್ನು ಮತ್ತು 2023ರಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಅನ್ನು ಪ್ರಾರಂಭಿಸಲಾಗಿದೆ. ಹೀಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಯು ಚಾಮರಾಜನಗರ ತಾಲೂಕಿನ ಭಾಗದಲ್ಲಿನ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗಿರುತ್ತದೆ.
ಪ್ರಸ್ತುತ ನರ್ಸಿಂಗ್ ಶಾಲೆ ಮತ್ತು ಪಬ್ಲಿಕ್ ಶಾಲೆಯ ಕಟ್ಟಡವು ಮಹಿಳಾ ಕಾಲೇಜಿನ ಸಮುಚ್ಚಯದಲ್ಲಿದೆ. ಕಾಲೇಜ್ ಆಫ್ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಗಳು ಮರಿಯಾಲದ ರುಡ್‌ಸೆಟ್ ಸಂಸ್ಥೆಯ ಆವರಣದಲ್ಲಿವೆ. ಪುರುಷರ ವಿದ್ಯಾರ್ಥಿನಿಲಯವೂ ಸೇರಿದಂತೆ ಈ ಎಲ್ಲಾ ಸಂಸ್ಥೆಗಳ ನೂತನ ಕಟ್ಟಡಗಳನ್ನು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣೆಯ ಯಡಪುರ ಸರ್ಕಲ್ ಎದುರು ಇರುವ ನಿವೇಶನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆಧುನಿಕ ತರಗತಿ ಕೊಠಡಿಗಳು, ಅತ್ಯಾಧುನಿಕ ಬೋಧನಾ ಸೌಲಭ್ಯಗಳು (smart board etc). ಪ್ರಯೋಗಾಲಯಗಳು, ಡಿಜಿಟಲ್ ಗ್ರಂಥಾಲಯಗಳು, ಕಂಪ್ಯೂಟರ್, ಮಲ್ಟಿಮೀಡಿಯಾ ವ್ಯವಸ್ಥೆ, ವ್ಯವಸ್ಥಿತ ಆಟದ ಮೈದಾನ ಇನ್ನೂ ಹಲವಾರು ಸೌಲಭ್ಯಗಳನ್ನು ನೂತನ ಕಟ್ಟಡದಲ್ಲಿ ಅಳವಡಿಸಲಾಗುತ್ತದೆ. ವಿದ್ಯಾರ್ಥಿನಿಲಯ ಕಟ್ಟಡದಲ್ಲಿ ಸುಸಜ್ಜಿತ ಕೊಠಡಿಗಳು, ಉತ್ತಮ ಡೈನಿಂಗ್ ಹಾಲ್ ವ್ಯವಸ್ಥೆ ಮಾಡಲಾಗುವುದು.
ಒಟ್ಟು 49 ಎಕರೆ ಪ್ರದೇಶದಲ್ಲಿ ಜೆಎಸ್‌ಎಸ್ ನರ್ಸಿಂಗ್ ಶಾಲೆ, ನರ್ಸಿಂಗ್ ಕಾಲೇಜು, ಅಲೈಡ್ ಹೆಲ್ತ್ ಸೈನ್ಸ್ ಈ ಕಟ್ಟಡಗಳ ನಿರ್ಮಾಣ ವಿಸ್ತೀರ್ಣ 1,22,897.97 ಚದರಡಿ, ಪಬ್ಲಿಕ್ ಶಾಲೆ ಕಟ್ಟಡ ವಿಸ್ತೀರ್ಣ 92,797.95 ಚದರಡಿ, ಪುರುಷ ವಿದ್ಯಾರ್ಥಿನಿಲಯ ಕಟ್ಟಡದ ವಿಸ್ತೀರ್ಣ 31,139.90 ಚದರಡಿ ಸೇರಿದಂತೆ, ಒಟ್ಟು 2,46,835.82 ಚದರಡಿಗಳ ಬಹುಅಂತಸ್ತುಗಳ ಬೃಹತ್ ಕಟ್ಟಡಗಳ ನಿರ್ಮಾಣವನ್ನು ಅಂದಾಜು 60.00ಕೋಟಿ ರೂ.ಗಳ ವೆಚ್ಚದಲ್ಲಿ ಹಾಗೂ ಪೀಠೋಪಕರಣ, ಪ್ರಯೋಗಾಲಯ ಉಪಕರಣಗಳಿಗೆ ಅಂದಾಜು 10.00 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ. ಚಾಮರಾಜನಗರ ಪ್ರದೇಶದಲ್ಲಿ ಈ ಶೈಕ್ಷಣಿಕ ಸಂಸ್ಥೆಗಳ ಸಮುಚ್ಚಯ ನಿರ್ಮಾಣವು ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ.
ಈ ಸಮಾರಂಭಕ್ಕೆ ಪೂಜ್ಯ ಮಠಾಧೀಶರುಗಳು, ರಾಜಕೀಯ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯಮಾನ್ಯರುಗಳು, ಜೆಎಸ್ಎಸ್ ಅಧಿಕಾರಿವರ್ಗದವರುಗಳು ಆಗಮಿಸಲಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಎಸ್ಎಸ್ ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಸ್ಥಾನಿಕ ಅಭಿಯಂತರಾದ ಎಸ್.ಮಹೇಶ್, ಪಬ್ಲಿಕ್ ಶಾಲೆ ಪ್ರಾಂಶುಪಾಲ ಉಮೇಶ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್, ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ
ಸಂಯೋಜಕ ಶಿವನಾಂಕಾರಪ್ಪ, ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಕೆ.ರವಿಕುಮಾರ್ ಹಾಜರಿದ್ದರು.