ದಯಾಮಯ ದೇವರು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ: ಜೋಸೆಫ್ ರಾಜು

  • ರಾಮಸಮುದ್ರ ಕ್ರಿಸ್ತರಾಜ ಬಾಲರ ಪಟ್ಟಣ ಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ


ಚಾಮರಾಜನಗರ:  ನಗರದ ರಾಮಸಮುದ್ರ ಕ್ರಿಸ್ತರಾಜ ಬಾಲರಪಟ್ಟಣ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
23 ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯು ಭಾವ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು.
1993-2003ನೇ ಸಾಲಿನ ಸಾಲಿನ  ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮದಲ್ಲಿ ಮಿಂದೆದ್ದರು.
ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿತ ಅಂದಿನ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇಂದು ಸಮ್ಮಿಲನಗೊಂಡಿದ್ದರು. ವಿವಿಧ ವಿಷಯಗಳ ಶಿಕ್ಷಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೇ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಶಾಲಾ ಜೀವನದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.
ಗುರುಗಳಿಗೆ ಗೌರವ ಸಮರ್ಪಣೆ:  ನಿವೃತ್ತ ಮುಖ್ಯ ಶಿಕ್ಷಕರಾದ ಸುಜಯ್ ಕುಮಾರ್, ಜೋಸೆಫ್ ರಾಜ್,
ಸಹ ಶಿಕ್ಷಕರಾದ ಎನ್.ಎಸ್.ಪುಟ್ಟೀರಪ್ಪ, ಆರ್.ಪಿ.ನಿರಂಜನ್, ನಿರ್ಮಲಮೇರಿ, ಸರ್ವಮಂಗಳ, ಎಲಿಜಬೆತ್ ಮರ್ಸಿ, ಪ್ರಾನ್ಸಿಸ್ ಬಾಬು, ನರಸಿಂಹಯ್ಯ,  ಫಿಲೋಮಿನ, ಚಿನ್ನಯ್ಯ,
ಯೋಸೆಫ್, ಮೂರ್ತಿ, ಲಕ್ಷ್ಮಣ,, ಸ್ಟೆಲ್ಲಾ
ಮೇರಿ, ಶಾಂತಿ, ಮೇರಿ,  ಸಿಬ್ಬಂದಿ ಗಳಾದ. ಡ್ಯಾನಿಯಲ್,  ಜಾನ್ ಪೀಟರ್ ,
ದೊರೆ  ಅವರಿಗೆ ಗುರುವಂದನೆ  ಸಲ್ಲಿಸಲಾಯಿತು.
ಬ್ರದರ್ ಜಾನ್ ಪೀಟರ್, ಬ್ರದರ್ ಚಾಲ್ಸ್  ಅವರು ಕಾರ್ಯಕ್ರಮ ಉದ್ಘಾಟಿಸಿ ಎಲ್ಲಾ ವಿದ್ಯಾರ್ಥಿಗಳು ಶುಭ ಕೋರಿದರು.
ನಿವೃತ್ತ ಮುಖ್ಯ ಶಿಕ್ಷಕ ಜೋಸೆಫ್ ರಾಜು ಮಾತನಾಡಿ, ಗುರುವಂದನಾ ಕಾರ್ಯ ಕ್ರಮದಿಂದ  ಗುರು-ಶಿಷ್ಯರ ಸಂಬಂಧವನ್ನು ಬಲಪಡಿಸುತ್ತವೆ. ನೀವು ನಮಗೆ ಪ್ರೀತಿ, ಗೌರವ ಇಟ್ಟು ನಮಗೆ ಗೌರವಿಸಿರುವುದು ತುಂಬಾ ಸಂತಸ ದಾಯಕವಾಗಿದೆ. ಮಾನವೀಯ ಮೌಲ್ಯಗಳ ಗಣಿಗಳಾಗಿ ನೀವು ಬೆಳೆದಿದ್ದೀರಿ.ದಯಾಮಯ ದೇವರು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ ಎಂದು ಶುಭ ಕೋರಿದರು.
  ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್‌ ಮಾತನಾಡಿ, ನೀವು ಪರಿಚಯ ಮಾಡಿಕೊಳ್ಳುವಾಗ ನಿಮ್ಮ ಕ್ಷೇತ್ರಗಳಲ್ಲಿ ಛಾಪುಮೂಡಿಸುವ ಮಟ್ಟಕ್ಕೆ ನೀವು ಇದ್ದೀರಿ. ಜವಾಬ್ದಾರಿಯುತ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ.ನೀವು ನಮ್ಮ ಮಾತಿಗೆ ಬೆಲೆ ಕೊಟ್ಟಿದ್ದೀರಿ. ಅದನ್ನು ನಿಮ್ಮ ಮನಸ್ಸುಗಳಿಗೆ ತೆಗೆದುಕೊಂಡಿದ್ದೀರಿ.ಕಾರ್ಯಪ್ರವೃತ್ತರಾಗಿದ್ದೀರಿ. ಅದರಲ್ಲಿ ಯಶಸ್ಸು ಕಂಡಿದ್ದೀರಿ ಎನ್ನುವುದರಲ್ಲಿ ಯಾವುದೇ ಸಂದೇಶ ಇಲ್ಲ.ನಿಮ್ಮ ನೋಡಿ ತುಂಬಾ ಸಂತಸವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *