- ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದ ಮಾಯಾನಂದನ ಮ್ಯೂಸಿಕ್ ಲೆಜೆಂಡ್ಸ್
ಚಾಮರಾಜನಗರ : ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದ್ದು, ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಎಂದು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ನಗರದ ವರವಟ ಡಾ.ರಾಜ್ ಮಾರ್ ರಂಗಮಂದಿರದಲ್ಲಿ ಸುನಿಲ್ ಸಿದ್ಧಾರ್ಥ ಮಾಯಾನ ದನ ಮೆಲೋಡಿಸ್ ಚಾಮರಾಜನಗರ ಅರ್ಪಿಸುವ ಮಾಯಾನಂದನ’ ಮ್ಯೂಸಿಕ್ ಲೆಜೆಂಡ್ಸ್ ಡಾ.ಪಿ.ಬಿ. ಶ್ರೀನಿವಾಸ್, ಡಾ.ಕೆ.ಜೆ. ಯೇಸುದಾಸ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಎಸ್. ಜಾನಕಿ ಹಾಗೂ ಕೆ.ಎಸ್.ಚಿತ್ರ ಅವರ ಕನ್ನಡ ಚಲನಚಿತ್ರ ಗೀತೆಗಳ ಸಂಗೀತ ಕರೋಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ‘ಮಾತನಾಡಿದರು.
ಆಧುವಿಕ ಬದುಕಿನ ಭರಾಟೆಯಲ್ಲಿ ಬಹಳಷ್ಟು ಗ್ರಾಮೀಣ ಸೊಗಡಿನ ಕಲೆಗಳು ನಶಿಸಿ ಹೋಗುತ್ತಿವೆ. ಜಿಲ್ಲೆಯಲ್ಲಿ ಶ್ರೀ ಮಹದೇಶ್ವರ, ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗಸ್ವಾಮಿ ಹಾಡುಗಳು ಪ್ರಸಿದ್ದಿ ಹೊಂದಿವೆ. ಹಿಂದೆ ಮದುವೆ, ಇನ್ನಿತರ ಶಾಸ್ತ್ರ ಕಾರ್ಯಕ್ರಮಗಳಲ್ಲಿ ಶೋಬಾನೆ ಜಾನಪದ ಕೇಳುತ್ತಿದ್ದೇವೆ ಅದು ಇತ್ತೀಚೆಗೆ ಮರೆಯಾಗಿದೆ ಇಂತಹ ಜಾನಪದಗಳಿಗೆ ಅವಕಾಶ ಕೊಟ್ಟು ಜಾನಪದ ಕಲೆಗಳಿಗೆ ಅವಕಾಶ ಮಾಡಿಕೊಟ್ಟು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಪ್ರಕಾರಗಳ ಕಲಾವಿದರು ಇದ್ದು, ವಿಶಿಷ್ಟ ಜಾನಪದ ಕಲೆಗಳನ್ನು ಹೊಂದಿದ್ದು, ಜಿಲ್ಲೆಯ ಕಲಾವಿದರು..ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಹಾಡುಗಳು ಹಾಡಿ ಜಿಲ್ಲೆಯನ್ನು ಕೀರ್ತಿಯನ್ನು ಬೆಳಗಿಸಿದ್ದಾರೆ. ಜಿಲ್ಲೆಯ ವರನಟ ಡಾ.ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಉತ್ತುಂಗಕ್ಕೇರಿ ದೇಶದಲ್ಲಿ ಹೆಸರು ಮಾಡಿದ್ದರು ಅಂತಹ ಮಹಾ. ಕಲಾವಿದನ್ನು ಜಿಲ್ಲೆಯು ಕೊಡುಗೆ ಕೊಟ್ಟಿದೆ ಎಂದರು.
ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ: ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ ಸಂಗೀತ ಮನಸ್ಸಿಗೆ ಅಪಾರವಾದ ಮೌಲ್ಯದ, ನೆಮ್ಮದಿ, ಹೊಸ ಚೈತನ್ಯವನ್ನು ನೀಡುತ್ತದೆ. ಇದು ಕೇವಲ ಮನರಂಜನ’ ಮಾತ್ರವಲ್ಲದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ದಿವ್ಯೌಷಧಿಯಂತೆ ಕೆಲಸ ಮಾಡುತ್ತದೆ ಎಂದರು. ಜಿಲ್ಲೆಯು ಜಾನಪದ ಕವರೂರು ಆಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಪ್ರಕಾರ’ಗಳ ಕಲಾವಿದರು ಹೆಚ್ಚಾಗಿದ್ದಾರೆ. ಸುನಿಲ್ ಸಿದ್ದಾರ್ಥ ಮಾಯಾವಂದನ ಮಲೋಡಿನ್ ಅರ್ಪಿಸುವ ಮಾಯಾನಂದನ ಮ್ಯೂ ಸಿಕ್ ಲ್‌ಜೆಂಡ್ಸ್ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ರೈಲ್ವೆ ಮಂಡಳಿ ಮಾಜಿ ಸದಸ್ಯ ಮಾಂಬಳ್ಳಿ ನಂಜುಂಡಸ್ವಾಮಿ, ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಗಣಿ ಉದ್ಯಮಿ ಮಹದೇವ್ ಬುದ್ಧ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎಂ.ಎನ್.ಶಿವಪ್ರಸಾದ್ ಮಾಯಾನಂದನ ತಂಡದ ಸುನಿಲ್ ಸಿದ್ದಾರ್ಥ, ರವಿ, ವೇಣುಗೋಪಾಲ್, ಅನುಪಮ ಟ್ರಸ್ಟ್ ಅಧ್ಯಕ್ಷ ಡಾ. ಪಿ.ಪ್ರೇಮ ಉಪನ್ಯಾಸಕ ಡಾ.ನಂಜುಂಡಯ್ಯ, ಬಿ.ಹೇಮಂತ್ ಇತರರು ಹಾಜರಿದ್ದರು,
