- ಪವಾಡ ಬಯಲು ತಜ್ಞ ಉಳಿಕಲ್ ನಟರಾಜು ಭಾಗಿ

ಮೈಸೂರು : ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉಚಿತ ವಸತಿ ಸಹಿತ ಬೇಸಿಗೆ ಶಿಬಿರಕ್ಕೆ ಶನಿವಾರ ಪವಾಡ ಬಯಲು ತಜ್ಞ ಡಾ.ಹುಲುಕಲ್ ನಟರಾಜು ಬೇಟೆ ನೀಡಿ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಿದರು.
ಪವಾಡ ರಹಸ್ಯ ಬಯಲು ಮಾಡುವ ಮೂಲಕ ಮಕ್ಕಳಿಗೆ ಪ್ರಜ್ಞಾವಂತಿಕೆಯ ಅರಿವನ್ನು ಮೂಡಿಸಿ ಮಾತನಾಡಿದ ಅವರು, ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಜೊತೆಗೆ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಕಣ್ಣುಕಟ್ಟುವ ಪ್ರದರ್ಶನಗಳನ್ನು ಪವಾಡಗಳೆಂದು ನಂಬುವಂತೆ ಜನರನ್ನು ಮೋಸಗೊಳಿಸುವ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಯಾವುದೇ ದೆವ್ವ, ಭೂತಗಳು ಇಲ್ಲ. ದೆವ್ವ ಹಿಡಿದಿದೆ ಎಂದು ಜನರನ್ನು ಯಾಮಾರಿಸುವ ವರ್ಗವೇ ಇದೆ. ನಾಲಿಗೆ ಮೇಲೆ ಕರ್ಪೂರ ಹಚ್ಚಿಕೊಳ್ಳುವುದು, ಅಕ್ಕಿ ತುಂಬಿದ ಬಿಂದಿಗೆಯಿಂದ ಚಾಕು ಚುಚ್ಚಿ ತೆಗೆಯುವುದು. ಮಡಿಕೆಯುಂದ ನೊರೆ ಬರಿಸುವು, ತೆಂಗಿನ ಕಾಯಿಯಿಂದ ಬೋರ್ ವೆಲ್ ಪಾಯಿಂಟ್ ಗುರುತಿಸುವ ಮೋಸದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಮೂಡ ನಂಬಿಕೆ ನಮ್ಮಲ್ಲಿ ಹಾಸುಹೊಕ್ಕಾಗಿ ಇದೆ. ಇದು ನಗರ ಪ್ರದೇಶಗಳಲ್ಲಿ ಕಡಿಮೆ, ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಷು ಎಂದು ಹೇಳಲು ಬರುವುದಿಲ್ಲ. ಎಲ್ಲೆಡೆಯೂ ಮೂಢ ನಂಬಿಕೆ ಇದೆ. ಆದರೆ ಜಗತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಓಡುತ್ತಿದೆ. ಆದರೆ ನಮ್ಮ ಜನರು ಇನ್ನೂ ಮೂಢನಂಬಿಕೆಗಳಲ್ಲಿ ಇದ್ದಾರೆ ಎಂದರು.
ಮೂಢನಂಬಿಕೆಗಳು ಮಾನವೀಯತೆಯ ಮೇಲೆ ಹಿಡಿತ ಸಾಧಿಸುವ ಉದ್ವಿಗ್ನತೆ ಮತ್ತು ಆತಂಕಗಳ ಅಭಿವ್ಯಕ್ತಿಗಳಾಗಿವೆ. ಅದು ಹುಟ್ಟಿನಿಂದ ಸಾವಿನವರೆಗೆ ಜೀವನದ ಕತ್ತಲೆಯಲ್ಲಿ ಹೋರಾಡುತ್ತ ಶೈಕ್ಷಣಿಕ ಸ್ಥಾನಮಾನ ಮತ್ತು ಸಂಪತ್ತನ್ನು ಲೆಕ್ಕಿಸದೆ ಜನರನ್ನು ಕಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಎಚ್ಚೆತ್ತುಕೊಳ್ಳಬೇಕು. ವೈಜ್ಞಾನಿಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಬಸವಮಾರ್ಗ ಫೌಂಡೇಶನ್ ಅಧ್ಯಕ್ಷ ಎಸ್.ಬಸವರಾಜು ಮಾತನಾಡಿ, ಮಕ್ಕಳಿಗೆ ಮೌಢ್ಯತೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ಪರಿಣಾಮ ದೆವ್ವ, ಭೂತ, ಮಾಟ, ಮಂತ್ರಗಳು ಮಕ್ಕಳನ್ನು ಅಂಧಕಾರವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬೇಸಿಗೆ ಸಿಬಿರದ ಮಕ್ಕಳಿಗೆ ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದಿನ ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಅರಿವು ಮೂಡಿಸಿದೆ ಎಂದರು.
