ಸಂವಿಧಾನದ ಆಶಯದಂತೆ  ಸಿದ್ದರಾಮಯ್ಯ ರಾಜೀನಾಮೆ : ಶಾಸಕ ಹೆಚ್.ಎಂ.ಗಣೇಶ ಪ್ರಸಾದ್

  • ಕೆರೆಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ  ಪುತ್ಥಳಿ ಅನಾವರಣ, 135ನೇ ಜಯಂತೋತ್ಸವ

ಚಾಮರಾಜನಗರ: ಸಂವಿಧಾನದ ಆಶಯದಂತೆ  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನುಡಿದಂತೆ ನಡೆದುಕೊಂಡರು ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶಪ್ರಸಾದ್ ಹೇಳಿದರು.
ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು 135ನೇ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ, ತಾ.ಪಂ, ಜಿ.ಪಂ, ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದು -ಮುಂದು ನೋಡುವ ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಅವರು
ಕಾಂಗ್ರೆಸ್ ಹೈಕಮಾಂಡ್ ಹೇಳಿದ ತಕ್ಷಣವೇ  ಅವರು ಮುಖ್ಯಮಂತ್ರಿ ಸ್ಥಾನಕ್ಕೆ 
 ರಾಜೀನಾಮೆ ನೀಡಿ ಮೇರು ವ್ಯಕ್ತಿತ್ವವನ್ನು ಮೆರೆದರು. ಅವರು ಅಂಬೇಡ್ಕರ್ ವಾದಿಯಾಗಿದ್ದರು. ಅಂಬೇಡ್ಕರ್ ಸಂವಿಧಾನಕ್ಕೆ ಗೌರವ ಕೊಟ್ಟರು ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಮಾಡುವ ಜೊತೆಗೆ ಅವರ ತತ್ವಾದರ್ಶಗಳನ್ನು  ಅಳವಡಿಸಿಕೊಂಡರೆ ಒಂದು ಸಾರ್ಥಕ ಆಗುತ್ತದೆ ಎಂದರು.
ಸಂವಿಧಾನಕ್ಕಿಂತ ದೊಡ್ಡದು ಬೇರೊಂದು ಇಲ್ಲ: ಕಾರ್ಯಕ್ರಮ ಉದ್ಘಾಟಿಸಿದ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರವನಾರಾಯಣ್ ಮಾತನಾಡಿ, ಬಾಬಾ ಸಾಹೇಬ್ ಡಾ. .ಬಿ.ಆರ್.ಅಂಬೇಡ್ಕರ್ ಅವರು  ಸಂವಿಧಾನದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ನೀಡಿದರು. ಅವರ ಆಶಯದಂತೆ ಪ್ರತಿಯೊಬ್ಬರೂ  ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದಾರಿ ತೋರಿಸುವನ್ನು ಕೆಲಸ ಮಾಡಬೇಕು ಎಂದರು. ಸಂವಿಧಾನಕ್ಕಿಂತ ದೊಡ್ಡದು ಬೇರೊಂದು ಇಲ್ಲ ಎಂದರು.
ಕೆರೆಹಳ್ಳಿ ಕೆರೆಯನ್ನು ದಿವಂಗತ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ತಂದೆ ಧ್ರುವ ನಾರಾಯಣ್ ಅವರು ತುಂಬಿಸುವ ಮೂಲಕ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಆಗಾಗಿ ಗುಂಡ್ಲುಪೇಟೆ ಶಾಸಕರಾದ ಗಣೇಶ ಪ್ರಸಾದ್ ಅವರ ಕೈ ಮತ್ತಷ್ಟು ಬಲಿಷ್ಠ ಗೊಳಿಸಬೇಕಿದೆ ಎಂದರು.
ಅಂಬೇಡ್ಕರ್ ಗೆ ಅಗೌರವ ತೋರುವವರು ಭಯೋತ್ಪಾದಕರು: ಸಾನಿಧ್ಯ ವಹಿಸಿದ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವವೇ ಅಂಬೇಡ್ಕರ್ ಅವರತ್ತ ತಿರುಗಿ ನೋಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆರೆಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್  ಕಂಚಿನ ಪುತ್ಥಳಿ ಅನಾವರಣ ಮಾಡಿರುವುದು ತುಂಬಾ ಸಂತಸವಾಗಿದೆ. ಅಂಬೇಡ್ಕರ್ ಪ್ಲೆಕ್ಸ್, ಪುತ್ಥಳಿ ಹಾಕಬೇಡಿ  ಎಂದು ಅವರನ್ನು ಅವಮಾನಿಸುವವರು ಭಯೋತ್ಪಾದಕರು, ದೇಶದ್ರೋಹಿಗಳು ಎಂದರು.
ಅಂಬೇಡ್ಕರ್ ಸೇರಿದಂತೆ ರಾಷ್ಟ್ರದ ಮಹಾನಾಯಕರಿಗೆ ಅಪಮಾನ ಮಾಡುವವರು ದೇಶದಲ್ಲಿರಲು ಅರ್ಹರಲ್ಲ ಆಗಾಗಿ ಅಂತಹ ಕಿಡಿಗೇಡಿಗಳ ಪೌರತ್ವ ರದ್ದುಪಡಿಸಲು ಹೊಸ ಕಾನೂನು ತರುವಂತೆ ಸರ್ಕಾರಗಳನ್ನು ಒತ್ತಾಯ ಮಾಡುತ್ತೇವೆ ಎಂದರು.
ಅಂಬೇಡ್ಕರ್ ಪುತ್ಥಳಿ ಎತ್ತರ ಮಟ್ಟದಲ್ಲಿ ನಿರ್ಮಾಣವಾಗುತ್ತದೆ ಆದರೆ ಅವರ ವಿಚಾರಗಳು, ಆದರ್ಶಗಳು ಕುಸಿಯುತ್ತಿದೆ.  ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯಗಳು ಈಡೇರಬೇಕಾದರೆ ದಲಿತರ ಬೀದಿಯಲ್ಲಿ  
ಜಡ್ಜ್, ಡಿಸಿ,ಎಸ್ಪಿ, ಎಸಿ ಆಗಿ ಕೆಂಪು ಲೈಟ್ ಕಾರು ನಿಲ್ಲಬೇಕು ಆಗ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಂವಿಧಾನ ಜೀವಂತವಾಗಿರುತ್ತದೆ ಎಂದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ,  ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಇಡೀ ವಿಶ್ವದಲ್ಲೇ ಬೆಳಗುತ್ತಿದ್ದಾರೆ. ಅವರಿಗೆ ಕಿಡಿಗೇಡಿಗಳು ಕೆಲವು ಕಡೆಗಳಲ್ಲಿ ಅವಮಾನ ಮಾಡುತ್ತಿದ್ದಾರೆ.  ಇದರಿಂದ ಅವರ ವ್ಯಕ್ತಿತ್ವ ಕಡಿಮೆಯಾಗುವುದಿಲ್ಲ. ಗಾಂಧಿವಾದ ಅನುಸರಿಸೋಣ ಎಂದರು.
ಜಿ.ಪಂ.ಮಾಜಿ ಸದಸ್ಯರಾದ ನವೀನ್ಕೆ ರೆಹಳ್ಳಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಮೀಸಲಾತಿ ಯ ಋಣದಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಅವರಿಗೆ ಗೌರವ ತಂದುಕೊಡುವ ರೀತಿಯಲ್ಲಿ ನಾವೆಲ್ಲರೂ ನೆಡೆದುಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಬೊಮ್ಮಾಯಿ, ರೇವಣ್ಣ,  ತಾ.ಪಂ.ಮಾಜಿ ಸದಸ್ಯ ಎಂ.ಸಿ.ರವಿಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ  ಕೆರೆಹಳ್ಳಿ ರೇವಣ್ಣ,  ಗೋಪಾಲ್ ಹೊರೆಯಾಲ, ನಿವೃತ್ತ ಶಿಕ್ಷಕ ಕೆ.ಎಂ.ಮಹದೇವಯ್ಯ, ಗುತ್ತಿಗೆದಾರ ಕೆ.ರೇವಣ್ಣ,  ಗ್ರಾ.ಪಂ.ಮಾಜಿ ಅಧ್ಯಕ್ಷ ರಾಜಕುಮಾರ,   ಜಿಲ್ಲಾಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಆರ್.ಕೆಂಪರಾಜು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್, ಗುತ್ತಿಗೆದಾರ  ಸುಕುಮಾರ್, ಪಿಎಸಿಸಿ ಬ್ಯಾಂಕ್ ನ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಜೇಂದ್ರ ಕುಮಾರ್, ಡಾ.ನಾಗೇಶ್, ಅಜಯ್ ಶಂಭು, ಕೆರೆಹಳ್ಳಿ ಮಹಾದೇವಸ್ವಾಮಿ,ಯಜಮಾನ ಗುರುಮಲ್ಲೇಗೌಡ, ಮಲ್ಲೇಶ್, ಸಿದ್ದರಾಜು ನಾಯಕ,  ಮಹಾದೇವಸ್ವಾಮಿ, ಮಂಡ್ಯ ಶಿವಣ್ಣ   ಯಜಮಾನರಾದ ಶಿವಣ್ಣ, ರಾಮಚಂದ್ರ, ಪಾಪಣ್ಣ, ಬಸವರಾಜು, ಲಿಂಗರಾಜು, ಗುರುಸಿದ್ದಯ್ಯ, ನಾಗರಾಜು, ಮಹದೇವಸ್ವಾಮಿ, ನಾಗರಾಜು, ಶಂಕರ್, ರವಿಚಂದ್ರ, ಮಂಜುಪ್ರಸಾದ್, ಅಂಬೇಡ್ಕರ್ ಯುವಕರು ಸಂಘದ ಪದಾಧಿಕಾರಿಗಳು  ಹಾಜರಿದ್ದರು.

Leave a Reply

Your email address will not be published. Required fields are marked *