ಚಾಮರಾಜನಗರ: ಕುಲಕುಲಕುಲವೆಂದು ಹೊಡೆದಾಡದಿರಿ-ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ದಂತಹ ಸರಳ, ಸೃಜನಶೀಲ ಕೀರ್ತನೆಗಳ ಮೂಲಕ ಕನಕದಾಸರು ಇಡೀ ಮನುಕುಲಕ್ಕೆ ಸನ್ಮಾರ್ಗದ ಬೆಳಕು ತೋರಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿAದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭಕ್ತಶ್ರೇಷ್ಠ ಕನಕದಾಸ’ರ 539ನೇ ಜಯಂತಿ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ ನಂತರದ 15ನೇ ಶತಮಾನ ದಾಸರ ಯುಗವಾಗಿದೆ. ಕನಕದಾಸರು ಪುರಂದರದಾಸರು ಭಗವಂತನ ಪ್ರಿಯಶಿಷ್ಯರಾಗಿದ್ದರು. ಕನಕದಾಸರು ಜಾತೀಯ ಅಸಮಾನತೆ ಹೋಗಲಾಡಿಸಿ ಸಮಾಜದ ಅಂಕುಡೊAಕು ತಿದ್ದಲು ಇಡೀ ದೇಶ ಪರ್ಯಾಟನೆ ಮಾಡಿ ಜನರಲ್ಲಿ ಸಾಮಾಜಿಕ ಪ್ರಜ್ಞೆ, ಅರಿವು ಮೂಡಿಸಿದರು. ಸರಳ, ಸುಂದರ ಕೀರ್ತನೆ ರಚಿಸಿ ಜನಸಾಮಾನ್ಯರಿಗೆ ಭಕ್ತಿರಸವನ್ನು ಉಣಬಡಿಸಿದವರಲ್ಲಿ ಕನಕದಾಸರು ಅಗ್ರಗಣ್ಯರಾಗಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಕನಕದಾಸರ ಮೌಲ್ಯಯುತ ತತ್ವಗಳು ಅಡಕವಾಗಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಸಮಾನತೆ ದೊರೆಯುವುದು ಕನಕದಾಸರ ಆಶಯವಾಗಿತ್ತು. ಅದನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ, ರಾಜಕೀಯ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತçವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಹಾವೇರಿ ಜಿಲ್ಲೆಯ ಬಾಡಗ ಗ್ರಾಮದಲ್ಲಿ ಜನಿಸಿದ ಕನಕದಾಸರ ಮೊದಲ ಹೆಸರು ತಿಮ್ಮಪ್ಪ, ಕನಕ ಎಂದರೇ ಚಿನ್ನ, ವಜ್ರ ಎಂದರ್ಥ. ಕನಕದಾಸರು ಸಮಾಜ ಸುಧಾರಣೆಗಾಗಿ 316 ಕೀರ್ತನೆಗಳನ್ನು ರಚಿಸಿದರು. ಕನಕದಾಸರಂತಹ ಸಂತರು, ದಾರ್ಶನಿಕರಿಂದ ಈ ನಾಡು ಶಾಂತಿ, ಸಮೃದ್ಧಿಯಿಂದ ಕೂಡಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ.ಕೆ. ರವಿಕುಮಾರ್ ಅವರು ಮಾತನಾಡಿ ಕನಕದಾಸರು ಕವಿ, ದಾಸಶ್ರೇಷ್ಠರು ಮಾತ್ರವಲ್ಲ, ಮಾನವೀಯತೆ, ಸಮಾನತೆಯ ಪ್ರತಿಪಾದಕರು ಆಗಿದ್ದಾರೆ. ಮನುಷ್ಯ ತನ್ನ ವ್ಯಕ್ತಿತ್ವದ ಮೂಲಕ ಸಮಾನತೆಯ ಸಮಾಜ ಕಟ್ಟಬೇಕು. ಕನಕದಾಸರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಿ ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರಲು ಕನಕದಾಸರ ಜೀವನಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದ ಕನಕದಾಸರು ಜಾತೀಯತೆ, ಅಂಧಶ್ರದ್ಧೆ ವಿರುದ್ಧ ಹೋರಾಡಿದರು. ಭಕ್ತಿಮಾರ್ಗದ ಮೂಲಕ ಸಮಾಜವನ್ನು ಆಧ್ಯಾತ್ಮಕತೆಯೆಡೆಗೆ ನಡೆಸಿದ ಕನಕದಾಸರ ಸರಳ ಕೀರ್ತನೆಗಳ ಸಾಹಿತ್ಯವನ್ನು ಇಂದಿನ ಯುವಜನಾಂಗ ಓದಬೇಕು. ಕನಕದಾಸರ ತತ್ವಸಿದ್ದಾಂತಗಳನ್ನು ತಿಳಿದುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಸಲಹೆ ಮಾಡಿದರು.
ಮುಖ್ಯಭಾಷಣ ಮಾಡಿದ ಪ್ರಾಧ್ಯಾಪಕರು ಹಾಗೂ ಮಾರ್ಗದರ್ಶಕರಾದ ಮೈಸೂರಿನ ಡಾ. ರಾಜಶೇಖರ ಜಮದಂಡಿ ಅವರು ಮಾತನಾಡಿ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿರಸ, ಸಮಾನತೆ, ಮಾನವೀಯತೆ ಕಾಣಬಹುದಾಗಿದೆ. ಮನುಷ್ಯನಿಗೆ ಹಣ, ಅಧಿಕಾರ, ಜಾತಿ, ಧರ್ಮಕ್ಕಿಂತ ಮಿಗಿಲಾದುದು ಮಾನವಧರ್ಮವೆಂದು ಸಾರಿದರು. ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಅತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲಿ ಸರಳತೆ ಇರುವುದೋ ಅಲ್ಲಿ ಸಮಗ್ರತೆ, ಎಲ್ಲಿ ಬಾಗುವಿಕೆ ಇರುವುದೋ ಅಲ್ಲಿ ಬೆಳೆಯುವಿಕೆ ಇರಲಿದೆ ಎಂಬುದು ಕನಕದಾಸರ ನೀತಿಬೋಧನೆಯಾಗಿತ್ತು. ಕನಕದಾಸರು ಹರಿಭಕ್ತಸಾರ, ಮೋಹನ ತರಂಗಿಣಿ, ನಳ ಚರಿತ್ರೆ ಸೇರಿದಂತೆ ಐದು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಮುಖಂಡರು ಹಾಗೂ ಸಮಾಜದ ತಾಲೂಕು ಅಧ್ಯಕ್ಷರಾದ ಉಮೇಶ್ ಅವರು ಮಾತನಾಡಿ ಜಿಲ್ಲಾಕೆಂದ್ರದಲ್ಲಿ ಕನಕದಾಸರ ಪ್ರತಿಮೆ ನಿರ್ಮಾಣ ಕಾರ್ಯ ಈಗಾಗಲೇ ವಿಳಂಬವಾಗಿದೆ. ಮುಂದಿನ ಜಯಂತಿಯೊಳಗೆ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಕನಕದಾದರ ಪ್ರತಿಮೆ ನಿಮಾಣವಾಗಬೇಕು ಹಾಗೂ ಸಮಯದಾಯ ಭವನದ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠೇರಾಜೇ ಅರಸ್, ಸಿಮ್ಸ್ ಡೀನ್ ಡಾ. ದೇವಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಮಂಜುನಾಥ್, ಎ.ಪಿ.ಎಂ.ಸಿ ಅಧ್ಯಕ್ಷರಾದ ಗುರುಸ್ವಾಮಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸಮಾಜದ ಜಿಲ್ಲಾಧ್ಯಕ್ಷರಾದ ಬೆಳ್ಳೇಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿAದ ವಿವಿಧ ಅಕರ್ಷಕ ಕಲಾತಂಡಗಳೊAದಿಗೆ ನಡೆದ ಬೆಳ್ಳಿರಥದಲ್ಲಿ ಅಲಂಕೃತ ಕನಕದಾಸರ ಭಾವಚಿತ್ರ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇತರೆ ಗಣ್ಯರೊಂದಿಗೆ ಭಾಗವಹಿಸಿದ್ದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಯಿತು.
