- ಸಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕನಕ ಜಯಂತಿ ಆಚರಣೆ
ಚಾಮರಾಜನಗರ: ಭಕ್ತಕನಕದಾಸರು15, 16ನೆಯ ಶತಮಾನದ ಪ್ರಮುಖ ಹರಿದಾಸರು, ಕವಿ, ಕೀರ್ತನಕಾರ ಮತ್ತು ಸಮಾಜ ಸುಧಾರಕರಾಗಿ ಸಾಮಾಜಿಕ ಸಮಾನತೆಯ ಸಂದೇಶ ಸಾರಿದರು ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಭೋದನ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರು ಡಾ. ಆರ್.ಎನ್. ದೇವಕಿ ಹೇಳಿದರು.
ಆಸ್ಪತ್ರೆಯಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
1509ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗೆ ಜನಿಸಿದರು. ಯುವಕನಾಗಿದ್ದಾಗ ದಂಡನಾಯಕರಾಗಿ ಸೇವೆ ಸಲ್ಲಿಸಿದರು. ಯುದ್ಧದಲ್ಲಿ ಗಾಯಗೊಂಡ ನಂತರ ಮತ್ತು ಆಧ್ಯಾತ್ಮಿಕ ಅನುಭವಗಳ ಬಳಿಕ ಲೌಕಿಕ ವ್ಯಾಮೋಹ ತೊರೆದು ಶ್ರೀವ್ಯಾಸರಾಯರ ಶಿಷ್ಯರಾಗಿ ದಾಸಪಂಥ ಸೇರಿದರು ಎಂದರು.
ಕಾಗಿನೆಲೆಯಲ್ಲಿ ಆದಿಕೇಶವ ದೇವಾಲಯ ನಿರ್ಮಿಸಿದ್ದು, ಕೊನೆಯ ದಿನಗಳನ್ನು ಕನಕಗಿರಿಯಲ್ಲಿ ಕಳೆದರು. ಜನ್ಮದಿಂದ ಯಾರೂ ಮೇಲಲ್ಲ, ಕೀಳಲ್ಲ ಎಂಬ ಸಾಮಾಜಿಕ ಸಮಾನತೆಯ ಸಂದೇಶವನ್ನು ಕುಲ ಕುಲ ಕುಲವೆಂದು ಹೊಡದಾಡದಿರಿ ಎಂಬ ಕೀರ್ತನೆಯ ಮೂಲಕ ಸಾರಿದರು.ಬಾಹ್ಯ ಆಡಂಬರ ಮತ್ತು ಕಪಟ ಭಕ್ತಿಗಿಂತ ಶುದ್ಧ ಅಂತಃಕರಣದ ಭಕ್ತಿಯೇ ಮುಖ್ಯವೆಂದು ಪ್ರತಿಪಾದಿಸಿದರು. ಶ್ರಮಜೀವಿಗಳು, ಬಡವರು ಮತ್ತು ಸಾಮಾನ್ಯ ಜನರ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದು ಸಮನ್ವಯ ಹಾಗೂ ಸಹಿಷ್ಣುತೆಯ ಬದುಕನ್ನು ಬೋಧಿಸಿದರು. ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಿನ್ನ ಬೋವಿ,ವೈದ್ಯಕೀಯ ಅಧೀಕ್ಷಕ ಡಾ. ಸಿ.ವಿ ಮಾರುತಿ, ನರ್ಸಿಂಗ್ ಅಧೀಕ್ಷಕಿ ಸಚಿತ ಜಮುನಾ. ಶುಶ್ರೂಷಾ ಕಾಧಿಕಾರಿಗಳಾದ ಜವರನಾಯಕ, ಮಾದೇಶ, ಬಂಗಾರಸ್ವಾಮಿ, ದಡದಹಳ್ಳಿ ಕುಮಾರ. ಎನ್, ಪರಶಿವಮೂರ್ತಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳಾದ ನಾರಾಯಣ್,ಮಂಜು , ಬಿeರೇಗೌಡ, ಮಹದೇವಸ್ವಾಮಿ, ರಮೇಶ್ ಇತರರು ಹಾಜರಿದ್ದರು
