ಚಾಮರಾಜನಗರ : ಎಲ್ಲದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾಶ್ರೇಷ್ಠದಾನವಾಗಿದ್ದು, ಆರೋಗ್ಯವಂತ ಯುವಕರು, ರೈತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು, ವಿಶ್ವ ರೈತ ಸಂಘದ ಸದಸ್ಯ ಹೆಗ್ಗವಾಡಿಪುರ ಮಹೇಶ್ ಕುಮಾರ್ ಸಲಹೆ ನೀಡಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಿಮ್ಸ್ ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿ ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯವೂ ಪ್ರತಿಕ್ಷಣದಲ್ಲೂ ನಾನಾ ಕಾರಣಗಳಿಂದ ರಕ್ತಹೀನತೆ ಉಂಟಾದಾಗ ಅಂತಹ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳಿಗೆ ರಕ್ತನೀಡಿ ಬದುಕಿಸಲು ಅವಶ್ಯಕವಾಗಿ ರಕ್ತಬೇಕಾಗುತ್ತದೆ. ಆರೋಗ್ಯವಂತ ಯುವಕರು, ಉತ್ತರ ಆಹಾರ ಪದಾರ್ಥಗಳನ್ನು ಕೊಡುವ ಜೊತೆಗೆ ರಕ್ತದಾನವನ್ನು ರೈತರು ದೇಶ ರಕ್ಷಣೆ ಮಾಡುವ ಯೋಧರಿಗೆ, ರಕ್ತಹೀನತೆಯುಳ್ಳ ಅಂತಹವರನ್ನು ಸಮಾಜದಲ್ಲಿ ಬದುಕಿಸಿಕೊಳ್ಳಲು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸಲು ಮುಂದಾಗಬೇಕು ಎಂದರು.
ನಾನೂ ಕೂಡಾ ಸುಮಾರು 45ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ. ಅಲ್ಲದೆ ನೇತ್ರ, ದೇಹದಾನಕ್ಕೆ ನೋಂದಾಯಿಸಿಕೊಂಡಿದ್ದೇನೆ. ನನ್ನ ಮಗ ಅಜಯ್ ಕೂಡ 53 ಬಾರಿ ರಕ್ತದಾನ ಮಾಡಿದ್ದಾನೆ. ಅಮೂಲ್ಯ ಜೀವ ಉಳಿಸುವ ರಕ್ತದಾನ ಶ್ರೇಷ್ಠ ದಾನವಾಗಿ ಎಂದರು.
