- ಎಸ್ಸಿ, ಎಸ್ಟಿ ಕಲ್ಯಾಣ ಸಂಸ್ಥೆಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಆಚರಣೆ
ಚಾಮರಾಜನಗರ: ನಮ್ಮ ಸುಖ, ಸಂತೋಷ ಮತ್ತು ನೆಮ್ಮದಿಯ ಬದುಕಿಗೆ ಭಾರತದ ಸಂವಿಧಾನದ ಮೂಲಾಶಯಗಳೇ ಭದ್ರಬುನಾದಿಯಾಗಿದೆ ಎಂದು ಭೋಗಾಪುರ ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ದೇವರಾಜು ಹೇಳಿದರು.
ನಗರದ ಚೆಸ್ಕಾಂ ಉಪ ವಿಭಾಗೀಯ ಕಚೇರಿಯ ಆವರಣದಲ್ಲಿ ಎಸ್ಸಿ ಎಸ್ಟಿ ಕಲ್ಯಾಣ ಸಂಸ್ಥೆ ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ನವೆಂಬರ್ 26-1949 ರವರಗೆ ಮಂಡಿಸಿದ ಸಂವಿಧಾನ ಸಮರ್ಪಣಾ ದಿನ ಎಂದು ಕರೆಯುತ್ತಾರೆ. 1950 ಜ 26 ರಂದು ಸಂವಿಧಾನ ಜಾರಿಯಾದ ದಿನ ಇದನ್ನು ಗಣರಾಜ್ಯ ದಿನ ಎಂದು ಆಚರಿಸಲಾಯಿತು. ಈ ಎರಡು ದಿನದಂದೂ ಸಂವಿಧಾನ ಆಶಯ, ಮೂಲಭೂತ ತತ್ವಗಳು, ಸಂವಿಧಾನ ನಿರ್ಮಾತೃಗಳ ಆಶಯ ಸಂವಿಧಾನದಲ್ಲಿದ್ದು, ಇದನ್ನು ಕುರಿತು ಆಲೋಚಿಸುವ ದಿನವಾಗಿದೆ ಎಂದರು.
ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತ. 79 ವರ್ಷಗಳ ಆಡಳಿತ ನಿರ್ವಹಣೆ ಸಂವಿಧಾನದಿಂದ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಅರಿವು ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಆಲೋಚನೆಗಳು ನಡೆಯುತ್ತಿರುವ ಕಾಲದಲ್ಲಿ ನಮ್ಮದೇಶ ಇಂದು ಎದುರಿಸತ್ತಿರುವ ಸವಾಲುಗಳು ಅಂದರೆ ಜಾತಿ, ಧರ್ಮ, ಲಿಂಗತಾರತಮ್ಯದಂತಹ ವಿಷಯಗಳಲ್ಲಿ ಭಾವನಾತ್ಮಕ ವಿಷಯಗಳನ್ನು ಮುಂಚೂಣಿಗೆ ತರುವ ಮೂಲಕ ಸಮಾಜ ಮತ್ತು ಸಮುದಾಯಗಳ ಒಳಗೆ ಉದ್ವಿಗ್ನತೆಗಳು ಸೃಷ್ಟಿಸಲಾಗುತ್ತಿದೆ. ಪ್ರಸ್ತುತ ನಮ್ಮ ಸುಖ, ಸಂತೋಷ, ಅವಕಾಶ, ಮತ್ತು ಸ್ಥಾನಮಾನಗಳು ಯಾವುದೇ ಧರ್ಮ, ಜಾತಿಗಳೆಂಬ ಭಾವನಾತ್ಮಕ ವಿಷಯಗಳಿಂದ ಸೃಷ್ಠಿಯಾದವುಗಳಲ್ಲ. ರಾಷ್ಟ್ರದ 145 ಕೋಟಿ ಜನರ ಬದುಕು ಹೀಗೆ ಉತ್ತಮವಾಗಿರಲು ಸಂವಿಧಾನವೇ ಕಾರಣವಾಗಿದೆ. ಈ ಕಾರಣದಿಂದ ಸಂವಿಧಾನದ ಜಾಗೃತಿ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇಇ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಇಸಿ ಪ್ರಶಾಂತ್ಕುಮಾರ್, ಕಾರ್ಯದರ್ಶಿ ಸೋಮೇಶ್, ಉಪಾಧ್ಯಕ್ಷ ಸಂತೋಷ್, ನಿರ್ದೇಶಕ ರಾದ ಮೋಹನ್, ಜಗದೀಶ್, ಪ್ರಭುಸ್ವಾಮಿ, ಶಿವಪ್ರಸಾದ್, 659 ನ ಸಂಘದ ಅಧ್ಯಕ್ಷ ಮುರಳಿ, ಕಾರ್ಯದರ್ಶಿ ಸಿದ್ದರಾಜಪ್ಪ, ಎಇಇ ಮಹೇಶ್, ಎಇಗಳಾದ ಪಿ.ಸಿದ್ದರಾಜು, ಪ್ರವೀಣ್.ರೇಖಾಮಣಿ, ಎಎಓ ಮಂಗಳಮ್ಮ, ಶಾಖಾಧಿಕಾರಿಗಳು, ನೌಕರರುಗಳು, ಎರಡೂ ಸಂಘಗಳ ಪದಾಧಿಕಾರಿಗಳು, ನೌಕರರು ಭಾಗವಹಿಸಿದ್ದರು.
