- ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಚಾಮರಾಜನಗರ : ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಹಿರಿಮೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ, ಸಾಹಿತ್ಯ ಕಲಾ ಪರಂಪರೆಯನ್ನು ಒಳಗೊಂಡಿದೆ ಎಂದು ತಹಸೀಲ್ದಾರ್ ನವೀನ್ಕುಮಾರ್ ಹೇಳಿದರು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಡಿಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ದೊಡ್ಡಮಟ್ಟದಲ್ಲಿ ಕನ್ನಡ ಕೆಲಸ ಹೆಚ್ಚಾಗಿ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಕಾಲೂಕು ಆಡಳಿತದಿಂದ ಕನ್ನಡ ಸಂಘಟನೆಗಳ ಬೆಳವಣಿಗೆ ಸಹಕಾರ ನೀಡಲಾಗುವುದು. ನಮ್ಮ ಅವಧಿಯಲ್ಲಿ ಕಾಲೂಕಿನ ಒಳ್ಳೆಯ ಕೆಲಸಗಳು ಆಗಬೇಕೆಂಬುವುದು ನಮ್ಮ ಆಶಯವಾಗಿದೆ ಹಂತಹಂತವಾಗಿ ತಾಲೂಕು ಅಭಿವೃದ್ಧಿ ಆಗಬೇಕು ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಪ್ರವಾಸೋದ್ಯಮ ಬಹಳ ಹಿಂದುಳಿದಿದೆ. ಅಭಿವೃದ್ಧಿ ಆಗಬೇಕು ಎಂದು. ಹೇಳಿದ್ದೀರಿ, ಜಿಲ್ಲೆ, ತಾಲೂಕಿನಲ್ಲಿ ಪ್ರವಾಸದ್ಯಮಕ್ಕೆ ಜಲಾಶಯ ಅರಣ್ಯ ಪ್ರದೇಶ, ದೇವಾಲಯಗಳಿವ ಜಿಲ್ಲೆ ಪ್ರವಾಸದ್ಯಮದ ಬಗ್ಗೆ ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ವಾಜಪೇಯಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದರೆ. ಮೊಟ್ಟಮೊದಲು ಹೋರಾಟ ಆರಂಭವಾಗುವುದು ಗಡಿಜಿಲ್ಲೆಯಲ್ಲಿ ನಮ್ಮ ಹೋರಾಟದ ಫಲದಿಂದಾಗಿ ಕನ್ನಡ ಗಟ್ಟಿಯಾಗಿದೆ. ಜಿಲ್ಲೆಯಾಗಿ 28 ವರ್ಷಗಳು ಆಗಿದೆ. ಇನ್ನೂ ಅಭಿವೃದ್ಧಿ ಆಗಿಲ್ಲ. ಇದು ವಿಷಾದಕರ ಸಂಗತಿಯಾಗಿದೆ.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ ಶ್ರೀನಿವಾಸಗೌಡ ಮಾತನಾಡಿ, ರಾಜ್ಯದಲ್ಲಿ 19 ಗಡಿಜಿಲ್ಲೆಗಳಿದ್ದು, ಚಾಮರಾಜನಗರ ಬೀದರ್,ಬಿಜಾಪುರ, ಬೆಳಗಾವಿ, ಬಾಗಲಕೋಟೆ, ಕುಮಕೂರು ಇವೆಲ್ಲವೂ ಗಡಿಜಿಲ್ಲೆಯಾಗಿವೆ ಇವುಗಳ ಪೈಕಿಯಲ್ಲಿ ಕನ್ನಡ ಒಳ್ಳೆಯ ಸ್ಥಿತಿಯಲ್ಲಿರುವುದು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಸಾಧ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಪಣ್ಯದ ಹುಂಡಿರಾಜು, ಯನಂಜಶೆಟ್ಟಿ ನಾಗುರಮೇಶ್, ಅರುಣಕುಮಾರ್ ಗೌಡ
ಇತರರು ಹಾಜರಿದ್ದರು.
