ಜಿಲ್ಲೆಯ ಬರ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಉಗ್ರ ಹೋರಾಟ: ನವೀನ್ ಕುಮಾರ್

  • ಜಿಲ್ಲಾ ರೈತಮೋರ್ಚಾದಿಂದ ಕೃಷಿ ಇಲಾಖೆ ಉಪನಿರ್ದೇಶಕರಿಗೆ ಮನವಿ
  • ಜಿಲ್ಲೆಯನ್ನು ಬರ ಎಂದು ಘೋಷಿಸಲು ಸಿ.ಎಸ್.ನಿರಂಜನ್ ಕುಮಾರ್ ಒತ್ತಾಯ

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಸಮಯದಲ್ಲಿ ಬರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಜಿಲ್ಲಾ ರೈತಮೋರ್ಚಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಉಪನಿರ್ದೇಶಕಿ ಸುಷ್ಮಾ ಅವರಿಗೆ ಮನವಿ ಸಲ್ಲಿಸಲಾಯಿತು.
    ರಾಜ್ಯದಲ್ಲಿ ಮುಂಗಾರು ಮಳೆ ಅಭಾವದ ಮುನ್ಸೂಚನೆ ಹಾಗೂ ಅಂತರ್ಜಲ ಮಟ್ಟದ ತೀವು ಕುಸಿತದ ವರದಿಗಳು ಆತಂಕಕಾರಿಯಾಗಿದೆ. ಮುಂಗಾರು ಕೊರತೆಯ ದುಷ್ಪರಿಣಾಮಗಳು ರೈತರು ಹಾಗೂ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಳೆಯ ಅನಿಸ್ಥಿತೆಯ ಲಾಭ ಪಡೆದು ರೈತರನ್ನು ಲೂಟಿ ಮಾಡಲು ಕಾಳಸಂತೆಕೋರರು ಹೊಂಚುಹಾಕುತ್ತಿದ್ದಾರೆ. ಕೂಡಲೇ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ತಕ್ಷಣವೇ ತಾಲ್ಲೂಕ ಮಟ್ಟದಲ್ಲಿ ಮೇವು ಬ್ಯಾಂಕ್ ಗಳನ್ನು ಸಕ್ರೀಯಗೊಳಿಸಬೇಕು. ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ಮಾರಾಟಮಾಡುವಂತ ಸ್ಥಿತಿ ನಿರ್ಮಾಣವಾಗಬಾರದು. ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಇಳುವರಿ ಕುಂಟಿತಗೊಳ್ಳುವ ಸಾಧ್ಯತೆ ಇದ್ದು ಸರ್ಕಾರ ಈಗಲೇ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಕ್ರಿಯಾ ಯೋಜನೆ ರೂಪಿಸಿ ಅನ್ನದಾತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ರೈತರಿಗೆ ಮಳೆ ಅಭಾವದಿಂದ ಯಾವ ರೀತಿಯೂ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಇಲಾಖೆಗೆ ಗೊತ್ತಿರುವ ವಿಚಾರ. ಆದರೇ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ರಾಜ್ಯ ಬಿಜೆಬಿ ರೈತ ಮೋರ್ಚಾ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಡಾ.ನವೀನ್ ಕುಮಾರ್,  ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಎಸ್.ಬಸವಣ್ಣ ಎಚ್ಚರಿಸಿದ್ದಾರೆ.
ರೈತ ಮೋರ್ಚಾದ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಅದಷ್ಟುಬೇಗ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳಬೇಕು. ರಾಜ್ಯದ ಕೃಷಿ ಸಚಿವರಾದ ಚೆಲುವನಾರಾಯಣಸ್ವಾಮಿ ಅವರು ಹೆಚ್ಚು ಜಾಗೃತಿಯಿಂದ ಕೆಲಸ ಮಾಡಬೇಕು. ಬರ, ರಸಗೊಬ್ಬರ… ಬಿತ್ತನೆಬೀಜ, ಬರದಿಂದಾಗುವ ಸಮಸ್ಯೆಗಳ ಬಗ್ಗೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯನ್ನು ಬರಕ್ಕೊಳಗಾಗಿರುವ ಜಿಲ್ಲೆ ಎಂದು ಘೋಷಿಸಬೇಕು ಇಲ್ಲದಿದ್ದರೆ ರೈತಮೋರ್ಚಾ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ. ಎಸ್.ನಿರಂಜನ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮಳೆ ವಿಳಂಬ ಆಗಿದೆ. ರೈತಾಪಿ ವರ್ಗ ಬಹಳ ಕಂಗಾಲಾಗಿದ್ದಾರೆ. ಈಗ ಬರಪರಿಸ್ಕೃತಿ ಬ೦ದಿದೆ. ಆಗಾಗಿ ಕೂಡಲೇ ಸರ್ಕಾರ ಕ್ರಮವನ್ನು ತೆಗೆದುಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಜಿಲ್ಲಾ ಮಂತ್ರಿಗಳಿಗಾಗಲಿ, ಶಾಸಕರಿಗಾಗಲಿ, ಬರದ ಬಗ್ಗೆ ಗಮನ ಇಲ್ಲ. ಯಾವುದೇ ತರದ ತಯಾರಿಗಳು ಆಗಿಲ್ಲ. ಅಧಿಕಾರಿಗಳಿಗೆ ಎಚ್ಚರಿಸುವ ಕೆಲಸ ಮಾಡುತ್ತಿಲ್ಲ ಈ ಕೂಡಲೇ ರೈತಪರವಾಗಿ ನಿಲ್ಲಬೇಕು. ಎಲ್ಲ ಕ್ರಮಗಳನ್ನು ಕೈಗೊಂಡು ರೈತರಿಗೆ ಅನುಕೂಲಗಳನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್  ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್,  ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳ ಕುಮಾರ್,
ಜಿಲ್ಲಾ ರೈತ ಮೋರ್ಚಾದಿಂದ ಜಿಲ್ಲಾಧ್ಯಕ್ಷ ಬಿ.ಎಸ್.ಬಸವಣ್ಣ,  ಪ್ರಧಾನ ಕಾರ್ಯದರ್ಶಿ ಗಳಾದ ಚಂದ್ರಶೇಖರ್, ಪುರುಷೋತ್ತಮ, ಉಪಾಧ್ಯಕ್ಷ ಎಂ.ಮಹಾದೇವಸ್ವಾಮಿ,  ಚಂದ್ರಶೇಖರಪ್ಪ, ಬಸವಣ್ಣ,
ಕಾರ್ಯದರ್ಶಿ ಮಹೇಶ್ ಮರಿಯಾಲ, ಮುಖಂಡರಾದ ರಮೇಶ್, ಸಿದ್ದರಾಜು, ಅಗರರಾಜು, ಶ್ರೀಕಂಠಪ್ಪ,  ರಾಮಣ್ಣ ಹಾಜರಿದ್ದರು.

Leave a Reply

Your email address will not be published. Required fields are marked *