ಯುವಕರು ಧಾರ್ಮಿಕ ಕೇಂದ್ರಗಳು, ಇತಿಹಾಸ ಪ್ರಸಿದ್ಧ ಸ್ಥಳಗಳ ಅಧ್ಯಯನ ಮಾಡಬೇಕು : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಭಾರತದಲ್ಲಿರುವ ಧಾರ್ಮಿಕ ಕೇಂದ್ರಗಳು, ಇತಿಹಾಸ ಪ್ರಸಿದ್ಧ ಸ್ಥಳಗಳ ಸಂದರ್ಶನ ಮತ್ತು ಅಧ್ಯಯನವನ್ನು ಯುವಕರು ಮತ್ತು ವಿದ್ಯಾರ್ಥಿಗಳು ಮಾಡಬೇಕು ಎಂದು ಸಂಸ್ಕೃತಿ ಚಿಂತಕ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಹೇಳಿದರು.

ಅವರು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ವತಿಯಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಅಯೋಧ್ಯೆ ಪ್ರಯಾಣ ಮಾಡಿ ಹಿಂದಿರುಗಿ ಬಂದ ಬ್ಯಾಡ ಮೂಡ್ಲು ಗ್ರಾಮದ ಕರ್ಣ ರವರನ್ನು ಸನ್ಮಾನಿಸುವ ಸಮಾರಂಭದಲ್ಲಿ ಮಾತನಾಡುತ್ತ ಯುವಕ ಕರ್ಣ ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮತ್ತು ಭಾರತದ ಶ್ರದ್ಧಾ ಕೇಂದ್ರವಾದ ಶ್ರೀ ರಾಮನ ಅಯೋಧ್ಯೆಗೆ ಸುಮಾರು 5000 ಕಿ ಮೀ .ದೂರದ ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿ ಭಕ್ತಿಯಿಂದ, ಶ್ರದ್ದೆಯಿಂದ ಪ್ರವಾಸ ಮಾಡಿ ಬಂದ ಗಡಿ ಭಾಗದ ಯುವಕ.

ಧರ್ಮ ಮತ್ತು ಭಕ್ತಿ ಮತ್ತು ಪ್ರವಾಸ ಕಾರ್ಯಗಳು ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಕಾರಣವಾಗುತ್ತದೆ.

ಪ್ರತಿಯೊಬ್ಬ ಯುವಕರು ಪ್ರತಿ ಗ್ರಾಮದ ದೇಶದ ಇತಿಹಾಸ ಅಧ್ಯಯನ, ದೇವಾಲಯಗಳ ಸಂರಕ್ಷಣೆ, ಪ್ರಾಚೀನ ಗುಡಿ ಗೋಪುರಗಳ ನಿರ್ವಹಣೆ, ಪ್ರತಿ ಗ್ರಾಮದಲ್ಲೂ ವಿಶೇಷವಾದ ಜಾಗೃತಿಯನ್ನು ಮಾಡಬೇಕು. ಯುವ ಮಿತ್ರ ಕರ್ಣ ಧೈರ್ಯ ಸಾಹಸ ಹಾಗೂ ಭಕ್ತಿಯಿಂದ ಅಯೋಧ್ಯೆ ತಲುಪಿ ಶ್ರೀರಾಮನಾ ದರ್ಶನವನ್ನು ಮಾಡಿ ಆಗಮಿಸಿದ ಸಂದರ್ಭದಲ್ಲಿ ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದವರು ಸನ್ಮಾನಿಸುತ್ತಿರುವುದು ಹೆಮ್ಮೆ ಮತ್ತು ಗೌರವವನ್ನು ತರುತ್ತದೆ. ಯುವಕರು ವ್ಯಸನಿಗಳಾಗದೆ ಪ್ರತಿ ಗ್ರಾಮಗಳಲ್ಲೂ ಯುವಕರ ಪಡೆ ನಿರ್ಮಾಣವಾಗಿ, ಧರ್ಮ ಸಂಸ್ಕೃತಿ, ಪರಿಸರ, ಪರಂಪರೆ ಉಳಿಸುವ ಕಾರ್ಯವನ್ನು ಮಾಡುವುದು ಎಂದು ಅನಿವಾರ್ಯವಾಗಿದೆ. ಪ್ರತಿಯೊಬ್ಬರಿಗೂ ಭಗವಂತ ಎಲ್ಲವನ್ನು ನೀಡಿರುವಾಗ ಭಗವಂತನಿಗೆ ಅರ್ಪಿಸುವ ಕಾರ್ಯವನ್ನು ಧೈರ್ಯದಿಂದ ಮಾಡೋಣ. ಪ್ರವಾಸಕ್ಕೆ ಹೋಗುವ ಯುವಕರು ಧೈರ್ಯ ಮತ್ತು ಭಕ್ತಿಯಿಂದ ಎಲ್ಲಾ ಕಡೆ ಹೋಗಿ ಬರುವಂತಹ ವಾತಾವರಣ ಇಂದು ದೇಶದಲ್ಲಿ ನಿರ್ಮಾಣವಾಗಿದೆ.

ಉತ್ತಮ ರಸ್ತೆಗಳು,ವ್ಯವಸ್ಥೆ ಮತ್ತು ಇತರ ಶ್ರದ್ಧಾ ಕೇಂದ್ರಗಳು ಬಹಳ ಉತ್ತಮವಾಗಿ ನಿರ್ವಹಣೆ ಆಗುತ್ತಿದೆ.
ಇದರ ಸಂದರ್ಶನ ಮತ್ತು ಇತಿಹಾಸವನ್ನು ತಿಳಿಯೋಣ ಎಂದರು.

ಸಮಾಜ ಸೇವಕ ವೆಂಕಟ ನಾಗಪ್ಪ ಶೆಟ್ಟಿ ಮಹೇಶ್, ಸುರೇಶ್ ರವರು ಪ್ರವಾಸಿಗ ಕರ್ಣ ರವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಿದರು.

ಕನ್ನಡ ಚಳುವಳಿಯ ಹಿರಿಯ ಹೋರಾಟಗಾರರಾದ ಶಾ ಮುರಳಿ, ರಾಜಗೋಪಾಲ್, ಆನಂದ್ ಭಗೀರಥ,. ಸುವರ್ಣ ಬೆಳಕು ಪತ್ರಿಕೆ ಉಪ ಸಂಪಾದಕ ಸಿ.ಎಸ್.ನಾಗರಾಜ್, ಕಾಂತರಾಜು, ಸುರೇಶ್ ನಾಗ್ ಹರದನಹಳ್ಳಿ, ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ಬಂಡಿಗಾರ್ ಮಹೇಶ್, ಸುರೇಶ್, ರಂಗಸ್ವಾಮಿ, ಸ್ವಾಮಿ, ಪ್ರಜ್ವಲ್, ಚೆನ್ನೀಪುರದ ಮೋಳೆ ಜಯಕುಮಾರ್, ನಾರಾಯಣ, ನಾಗೇಶ್, ವಿಶ್ವಾಸ್, ಕುಮಾರ್ ಕನ್ನಡ , , ಶಿವಲಿಂಗ ಮೂರ್ತಿ, ನಂಜಪ್ಪ ಶೆಟ್ಟಿ, ಆರಾಧ್ಯ, ಜಗದೀಶನ್, ಇದ್ದರು.

Leave a Reply

Your email address will not be published. Required fields are marked *