ಹಳದಿ ಮತ್ತು ಕೆಂಪು ಬಣ್ಣದ ಬಾವುಟ ಕನ್ನಡಿಗರ ಸ್ವಾಭಿಮಾನ : ಶಾ. ಮುರಳಿ

ಚಾಮರಾಜನಗರ : ಹಳದಿ ಮತ್ತು ಕೆಂಪು ಬಣ್ಣದ ಬಾವುಟ ಕನ್ನಡಿಗರ ಸ್ವಾಭಿಮಾನ, ಏಕತೆ, ಭಾಷಾಭಿಮಾನ ಸಂಸ್ಕೃತಿಯ ಪ್ರತೀಕವೆಂದು ಹಿರಿಯ ಕನ್ನಡ ಚಳುವಳಿಗಾರ ಶಾ ಮುರಳಿರವರು ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡದ ಬಾವುಟ ಮತ್ತು ಇತಿಹಾಸದ ಮಹತ್ವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಕನ್ನಡ ಬಾವುಟಕ್ಕೆ ಭದ್ರಬುನಾದಿ ಹಾಕಿದವರು ಕನ್ನಡದ ಶ್ರೇಷ್ಠ ಕನ್ನಡ ಸೇನಾನಿಯಂದೆ ಪ್ರಸಿದ್ಧಿಯಾಗಿದ್ದ ಮ. ರಾಮಮೂರ್ತಿ ರವರು. ಇಡೀ ವಿಶ್ವದ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆ ಮತ್ತು ಭಾಷಾಭಿಮಾನಕ್ಕೆ ಪ್ರತ್ಯೇಕವಾಗಿ ಕನ್ನಡ ಧ್ವಜವು ಇಂದು ಎಲ್ಲೆಡೆ ರಾರಾಜಿಸುತ್ತಿದೆ. ಕನ್ನಡದ ಧ್ವಜ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ.

ಹಳದಿ ಮತ್ತು ಕೆಂಪು ಬಣ್ಣದ ಬಾವುಟ ಕನ್ನಡಿಗರ ಹೋರಾಟ, ಸಾಂಸ್ಕೃತಿಕ ಹಿನ್ನೆಲೆ, ಪರಂಪರೆಯ ಗೌರವದ ಪ್ರತೀಕವಾಗಿ ವಿಶ್ವದ ಎಲ್ಲ ಕನ್ನಡಿಗರಲ್ಲಿ ಸ್ಪೂರ್ತಿಯನ್ನು ತುಂಬುತ್ತಿದೆ. ಕನ್ನಡ ಚಳುವಳಿ ಮತ್ತು ಕನ್ನಡ ಸಾಹಿತ್ಯ ರಚನಕಾರರ ಸ್ಥಿತಿ ಬಹಳ ಗಂಭೀರವಾಗಿದೆ. ಕನ್ನಡ ಚಳುವಳಿಗಾರರಿಗೆ ನೂರಾರು ದೂರುಗಳು ದಾಖಲಾಗಿದೆ. ಕನ್ನಡ ಹೋರಾಟಗಾರರು ಮತ್ತು ಸಾಹಿತಿಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.

ಕನ್ನಡ ಹೋರಾಟಗಾರರಾದ ಚಾರಂ ಶ್ರೀನಿವಾಸ್ ಗೌಡ ಮಾತನಾಡಿ ಮ ರಾಮ ಮೂರ್ತಿಯವರು ಶ್ರೇಷ್ಠ ಪತ್ರಕರ್ತರು, ಕಾದಂಬರಿ ಕಾರರು,ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದವರು. ಕನ್ನಡ ಸೇನಾನೀ ಆಗಿದ್ದ ಮಾ ರಾಮಮೂರ್ತಿ ರವರು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಎರಡು ಬಣ್ಣದ ಧ್ವಜವನ್ನು ನೀಡಿ ಶಾಂತಿ, ಸಮೃದ್ಧಿ, ಸಕಾರಾತ್ಮಕತೆ, ಧೈರ್ಯ,ಶಕ್ತಿ,ತ್ಯಾಗ,ವಿಜಯದ ಪ್ರತಿಕವಾಗಿ ಕನ್ನಡಿಗರಿಗೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಬಾವುಟದ ಇತಿಹಾಸ ಮತ್ತು ಮಹತ್ವದ ಕುರಿತು ಕಾರ್ಯಕ್ರಮ ರೂಪಿಸಿರುವುದು ಬಹಳ ಮೆಚ್ಚುಗೆಯ ಸಂಗತಿ. ಕನ್ನಡ ಸೇನಾ ಮಾ ರಾಮಮೂರ್ತಿ ರವರ ಹೆಸರಿನಲ್ಲಿ ಪ್ರತಿವರ್ಷ ಕನ್ನಡ ಬಾವುಟದ ಗೌರವದ ಪ್ರತೀಕವಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕು. ಕನ್ನಡ ಬಾವುಟದ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಋಗ್ವೇದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಇಡೀ ವಿಶ್ವದ ಎಲ್ಲೆಡೆ ಕೆಂಪು ಮತ್ತು ಹಳದಿಯ ಬಾವುಟ ಮತ್ತು ಶಲ್ಯವನ್ನು ಧರಿಸಿದಾಗ ಕನ್ನಡಿಗರ ಗುರುತನ್ನು ಪ್ರತಿನಿಧಿಸುತ್ತದೆ. ಕನ್ನಡಿಗರು ಸದಾ ಕಾಲ ಶಾಂತಿಪ್ರಿಯರು. ಧೈರ್ಯದ ಪ್ರತೀಕ. ಕನ್ನಡದ ರಾಜ್ಯ ಸ್ಥಾಪಕರು ಇಡೀ ಭಾರತವಲ್ಲದೆ ನೇಪಾಳದಲ್ಲೂ ಕನ್ನಡದ ನೆಲದ ಮೂಲಕ ಆಳ್ವಿಕೆ ನಡೆಸಿದ ಇತಿಹಾಸ ಇದೆ. ಇಡೀ ದಕ್ಷಿಣ ಭಾರತದಲ್ಲಿ ಅತ್ಯುನ್ನತ ದೇವಾಲಯಗಳ ನಿರ್ಮಾಣ ಮಾಡಿದ ಶ್ರೀ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸ ಎಂಬುದು ಹೆಮ್ಮೆ. ಕನ್ನಡದ ತಾಯಿ ಭುವನೇಶ್ವರಿ ಮತ್ತು ಕನ್ನಡ ಧ್ವಜಗಳು ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ. ಕನ್ನಡ ಧ್ವಜದ ಇತಿಹಾಸದ ಮಹತ್ವ ಮತ್ತು ಅದರ ಅನಿವಾರ್ಯತೆಯನ್ನು ಕನ್ನಡಿಗರಿಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ವಿವರಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಯಲ್ಲಿ 522 ಕಾರ್ಯಕ್ರಮಗಳನ್ನು ಸರ್ಕಾರದ ಯಾವುದೇ ಅನುದಾನವಿಲ್ಲದೆ ಸರಳವಾಗಿ ಆಚರಿಸಿ ಒಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ವಿವಿಧ ವಿಚಾರ ಸಂಕಿರಣ, ಸಂವಾದ ಅರಿವು ಮತ್ತು ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರಿಗೆ ಹಾಗೂ ಕನ್ನಡ ಸಂಘಟನೆಗಳ ಎಲ್ಲಾ ನಾಯಕರಿಗೆ ಚಾಮರಾಜನಗರದ ಎಲ್ಲಾ ಕನ್ನಡದ ಬಂಧುಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸಿದರು.

ಕನ್ನಡ ಸಂಘಟನೆಗಳ ಪರವಾಗಿ ಹರದನಹಳ್ಳಿಯ ಜನಪದ ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ, ಶಾ ಮುರಳಿ ಹಾಗೂ ಶ್ರೀನಿವಾಸ್ ಗೌಡ ರವರು ಸುರೇಶ್ ಋಗ್ವೇದಿಯವರ ಕನ್ನಡದ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುರೇಶ್ ನಾಗ್ ಹರದನಹಳ್ಳಿ, ತಮಿಳು ಸಂಘದ ಜಗದೀಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ, ಸರಸ್ವತಿ, ಮೈಸೂರಿನ ರಾಮೋಹನ್, ಮಹೇಶ್, ಮಂಜು, ಸುಂದರ್, ನಾಗರಾಜು, ರಂಗಸ್ವಾಮಿ ಇತರರು ಇದ್ದರು.

Leave a Reply

Your email address will not be published. Required fields are marked *