- ಕರಿನಂಜನಪುರದಲ್ಲಿ ಭಗವಾನ್‌ಬುದ್ಧ, ಅಂಬೇಡ್ಕ ರ್ಜಯಂತಿ ಆಚರಣೆ
ಚಾಮರಾಜನಗರ: ಸಮಾನತೆಗಾಗಿ ಶ್ರಮಿಸಿದ ಬುದ್ಧ, ಅಂಬೇಡ್ಕರ್ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಭೋಗಾಪುರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪಿ.ದೇವರಾಜು ಹೇಳಿದರು.
ನಗರದ 10ನೇ ವಾರ್ಡನ ಕರಿನಂಜನಪುರ ಬಡಾವಣೆಯ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗದದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರತೆ ಹಾಗೂ 2570ನೇ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವರನ್ನು ಒಳಗೊಂಡ ಸಮಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ವೀಡಿರುವ ಜೀವನ ಸಂದೇಶ, ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಪರಿಶ್ರಮ ಅಧ್ಯಯನ ಶೀಲತೆ, ಸಾಧನೆಯ ಜೀವನ ಮಾದರಿಯಾಗಿದೆ ಎಂದರು.ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಅಡಿಪಾಯ. ಸಂವಿಧಾನದಿಂದ ಭಾರತದ ಪ್ರಜಾಪ್ರಭುತ್ವದ… ಬೇರುಗಳು ಬಲವಾಗಿವೆ. ದೇಶದಲ್ಲಿರುವವಷ್ಟು ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲೂ ಇಲ್ಲ… ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಘನತೆಯನ್ನು ಅಂಬೇಡ್ಕರ್ ಅವರು ಬರೆದಿರುವ ಕೊಟ್ಟಿರುವ ಸಂವಿಧಾನ ಎತ್ತಿ ಹಿಡಿದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಸಿ.ಎನ್.ಉಮೇಶ್‌ಕುದರ್ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೇರೆಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದೇಶಕ್ಕೆ ಒಂದು ಶ್ರೇಷ್ಠ ಸಂವಿಧಾನವನ್ನು ಬರೆದುಕೊಡುವ ಮೂಲಕ ದೇಶದಲ್ಲಿ ವಾಸಿಸುವ ಪ್ರತಿ ನಾಗರಿಕನಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಚಿಂತಕ ಡಾ.ಬಿ.ಆರ್.ಕೃಷ್ಣಕುಮಾರ್ ಮಾತನಾಡಿ,ಡಾ. ಬಿ.ಆರ್. ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ನಾಗ್ಪುರದಲ್ಲಿ ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳನ್ನು ಒಳಗೊಂಡಿದ್ದರಿಂದ ಅವರು ಬೌದ್ಧ ಧರ್ಮವನ್ನು ಆರಿಸಿಕೊಂಡರು. ಬುದ್ದ, ಅಂಬೇಡ್ಕರ್ ಅವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡರೆ ನೆಮ್ಮದಿ ಜೀವನ ಸಾಧ್ಯ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಪ್ಪ,
ಸ್ವಾಗತಿಸಿದರು. ಅರಣ್ಯ ಇಲಾಖೆ ವಲಯಾಧಿ ಕಾರಿ ರಾಜೇಂದ್ರ, ಯಜಮಾನರಾದ ಶಿವಮೂರ್ತಿ ಮಹೇಶ್, ಮಂಟಯ್ಯ, ಮುಖಂಡರಾದ ಪರಮೇಶ್, ಬಸವಣ್ಣ, ಚಿನ್ನಸ್ವಾಮಿ, ನಾರಾಯಣ್, ಸಿದ್ದಯ್ಯ
, ಡಾ.ಬಿ.ಆರ್.ಅಂಬೇಡ್ಕರ್ ಯವಕರ ಸಂಘದವರು, ಸರ್ಕಾರಿ ನೌಕರರು, ಮಹಿಳಾ ಸಂಘದವರು, ಗ್ರಾಮಸ್ಥರು ಭಾಗವಹಿಸಿದ್ದರು.