ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಪಿ.ಮಧುರವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.

ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆ ಹಾಗೂ ವಂದೆಮಾತರಂ ಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಲಾಯಿತು.
ಡಾ.ಸಿ.ಪಿ.ಮಧುರವರು ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಸ್ವಾತಂತ್ರ್ಯ ಮತ್ತು ಸಂವಿಧಾನದ ಮೌಲ್ಯಗಳು, ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶಸೇವೆ ಮಾಡಿ ನಿವೃತ್ತರಾಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರುಗಳಾದ ಸುಬೇದಾರ್ ಮೇಜರ್ ಟಿ.ಎಸ್. ಶಿವಶಂಕರ್, ಹವಲ್ದಾರ್‍ಗಳಾದ ಶ್ರೀ ಹೇಮಂತ್‍ಕುಮಾರ್, ಶ್ರೀ ಗಣೇಶ್, ಶ್ರೀ ದೇವರಾಜ್‍ರವರಿಗೆ ಗೌರವಿಸಲಾಯಿತು ಹಾಗೂ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಭದ್ರತಾ ಸಿಬ್ಬಂದಿಗಳನ್ನು ಗುರುತಿಸಿ ಅವರಿಗೆ ಪ್ರಶಂಸಾಪತ್ರ ಮತ್ತು ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ದಿ ವಿಭಾಗದ ನಿದೇಶಕರಾದ ಶ್ರೀ ರೇವಣ್ಣಸ್ವಾಮಿ ಕೆ.ಎಲ್. ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಶಾಂತಮಲ್ಲಪ್ಪ, ಪ್ರಭಾರ ಆಡಳಿತಾಧಿಕಾರಿಯಾದ ಶ್ರೀ ಭಾನುಮೂರ್ತಿ, ನರ್ರ್ಸಿಗ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಾನೆಟ್ ಮತಿಯಾಸ್, ಸಹಾಯಕ ಆಡಳಿತಾಧಿಕಾರಿಯಾದ ಶ್ರೀ ಚಂದ್ರಶೇಖರ್ ಎಂ.ಹೆಚ್, ಸಾರ್ವಜನಿಕ ಸಂಬಂಧಗಳ ವ್ಯವಸ್ಥಾಪಕರಾದ ಶ್ರೀ ಜೀವನ್‍ಎಸ್, ಹಾಗೂ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಕುಮಾರಿ ಭುವನಾ ನಿರೂಪಿಸಿದರು.
