ಚಾಮರಾಜನಗರ: ಗಾಂಧಿಜಯಂತಿ ಅಂಗವಾಗಿ ನಗರಸಭೆ, ಎಸ್‌ಬಿಐ ಬ್ಯಾಂಕ್ ನೌಕರರು ಸಾಮೂಹಿಕ ಶ್ರಮದಾನದ ಮೂಲಕ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಐತಿಹಾಸಿಕ ಪುಟ್ಟಮ್ಮಣಿ ಉದ್ಯಾನವನ ಸ್ವಚ್ಚಗೊಳಿಸಿದರು.

ಇಂದು ಮುಂಜಾನೆ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು ನಗರದ ಭುವನೇಶ್ವರಿ ವೃತ್ತ ಹಾಗೂ ಕಾರ್‌ಸ್ಟ್ರೀಟ್‌ನ ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕರು, ನೌಕರರು ಸಾಮೂಹಿಕ ಶ್ರಮದಾನ ಮಾಡಿ ಉದ್ಯಾನವನ ಸ್ವಚ್ಚಗೊಳಿಸಿ, ಸ್ವಚ್ಛತೆಯ ಜಾಗೃತಿ ಮೂಡಿಸಿದರು.
ನಗರಸಭಾ ಪೌರಾಯುಕ್ತ ಪರಶುರಾಮು ಛಲವಾದಿ ಮಾತನಾಡಿ, ಗಾಂಧಿಜಯಂತಿ ಅಂಗವಾಗಿ ಸ್ವಚ್ಚಹೀ ಸೇವಾ ಅಭಿಯಾನದಡಿಯಲ್ಲಿ ಒಂದು ದಿನ ಒಂದು ಗಂಟೆ ಶ್ರಮದಾನ, ಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಇಂದು ನಗರಸಭೆ, ಎಸ್‌ಬಿಐ ಬ್ಯಾಂಕ್ ನೌಕರರ ಸಹಯೋಗದಲ್ಲಿ ನಗರದ ಐತಿಹಾಸಿಕ ಪುಟ್ಟಮ್ಮಣಿ ಉದ್ಯಾನವನದಲ್ಲಿ ಸಾಮೂಹಿಕ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಭುವನೇಶ್ವರಿ ವೃತ್ತದ ಎಸ್‌ಬಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಎ.ಆರ್.ಕುಮಾರಸ್ವಾಮಿ ಮಾತನಾಡಿ, ಗಾಂಧಿಜಯಂತಿ ಅಂಗವಾಗಿ ನಮ್ಮ ಬ್ಯಾಂಕ್‌ನ ವ್ಯವಸ್ಥಾಪಕರು, ನೌಕರರು ನಗರಸಭೆಯೊಂದಿಗೆ ಜೊತೆಗೂಡಿ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಒಂದು ದಿನ ಒಂದು ಗಂಟೆ ಶ್ರಮದಾನದಡಿಯಲ್ಲಿ ಐತಿಹಾಸಿಕ ಪುಟ್ಟಮ್ಮಣಿ ಉದ್ಯಾನವನದಲ್ಲಿ ಸಾಮೂಹಿಕ ಶ್ರಮದಾನ ಮಾಡಿ ಸ್ವಚ್ಚಗೊಳಿಸಲಾಗಿದೆ ಎಂದರು.
ಶ್ರಮದಾನದಲ್ಲಿ ಕಾರ್‌ಸ್ಟ್ರೀಟ್ ಎಸ್‌ಬಿಐ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಶ್ರೀನಾಥ್,ಆಫೀಸರ್ ಸಚಿನ್, ನಾಗರಾಜು, ಮನು, ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್, ಸಹಾಯಕ ಕಾರ್ಯಪಾಲಕ (ಪರಿಸರ) ಎಲ್.ರೂಪ, ಜೆಇ ಶಿವಶಂಕರ್ಆರಾಧ್ಯ, ಮಣಿಕಂಠ, ಸಿ.ಡಿ.ವೆಂಕಟೇಶ್, ನಿತಿನ್ ಕುಮಾರ್, ಸಮುದಾಯ ಸಂಚಾಲಕರಾದ ಕಾವ್ಯ, ರಾಜೇಶ್ವರಿ, ಶೈಲಜಾ, ಪೌರಕಾರ್ಮಿಕರು ಇತರರು ಭಾಗವಹಿಸಿದ್ದರು,
