ಚಾಮರಾಜನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಟೋ ರಾಜ ಶಂಕರ್ ನಾಗ್ ರವರ ಪುಣ್ಯಸ್ಮರಣೆ ಹಾಗೂ ಕೊಡುಗೆಗಳ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿಮಾತನಾಡಿದ ಜಿಲ್ಲಾ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಿರ್ದೇಶನ, ತಂತ್ರಜ್ಞಾನ ಹಾಗೂ ನಟನೆಯ ಮೂಲಕ ಕನ್ನಡದ ಕೀರ್ತಿ ಯನ್ನು ಬೆಳಗಿಸಿದವರು ಶಂಕರ್ ನಾಗ್. 35 ವರ್ಷಗಳ ಹಿಂದೆ ಅಪಘಾತದಲ್ಲಿ ಶಂಕರ್ ನಾಗ್ ಸ್ವರ್ಗಸ್ಥರಾಗಿದ್ದು ಅವರ ಕೊಡುಗೆಗಳ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಶಂಕರ್ ನಾಗ್ ಭಾರತೀಯ ಚಿತ್ರರಂಗದ ಅಪರೂಪದ ವ್ಯಕ್ತಿ. ನಟನೆ ಮತ್ತು ನಿರ್ದೇಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಯನ್ನು ನೀಡಿ ಸಮಾಜಮುಖಿ ಕಾರ್ಯದಲ್ಲು ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರ ದೂರದೃಷ್ಟಿಯ ಫಲವೇ ಮೆಟ್ರೋ ರೈಲು. ಇಂದು ಬೆಂಗಳೂರು ಸೇರಿದಂತೆ ರಾಷ್ಟ್ರದ ವಿವಿಧ ಕಡೆ ಮೆಟ್ರೋ ಸೇವೆಯ ಮೂಲಕ ಜನರ ಜೀವನ, ಬದುಕು ಹಾಗೂ ಸಮಯನಿರ್ವಹಣೆ, ಸುರಕ್ಷತೆಯ. ಪ್ರಯಾಣದಿಂದ ನಾಗರಿಕರು ಸಂತೋಷ ಗೊಂಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶಂಕರ್ ನಾಗ್ ರವರು ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ, ದೂರದೃಷ್ಟಿ, ಜ್ಞಾನ ದೃಷ್ಟಿಯ, ಚಿಂತಕ ಹಾಗು ನಟ. ಚಲನಚಿತ್ರಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಕಟ್ಟಿದವರು. ಇವರ ಆಟೋರಾಜ ಸದಾ ಕಾಲ ಚಿರಸ್ಮರಣೀಯ. ಲಕ್ಷಾಂತರ ಆಟೋ ಮಾಲೀಕರಿಗೆ ಮತ್ತು ಆಟೋ ಚಾಲಕರಿಗೆ ಗೌರವವನ್ನು ಹಾಗೂ ಸಾಮಾಜಿಕ ಪ್ರೀತಿ ಘನತೆಯಿಂದ ತಂದು ಕೊಟ್ಟವರೇ ಶಂಕರ್ ನಾಗ್. ಇಂದು ರಾಷ್ಟ್ರದ ಎಲ್ಲಾ ಕಡೆ ಶಂಕರ್ ನಾಗ್ ರವರ ಭಾವಚಿತ್ರವನ್ನು ಆಟೋಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆಟೋ ಚಾಲಕರ ಸಾಮಾಜಿಕ ಕಳಕಳಿ ಹಾಗೂ ನೊಂದವರಿಗೆ ಸಹಾಯ ಹಾಗೂ ರಕ್ಷಣೆಯನ್ನು ನೀಡುವ ಆಟೋ ಚಾಲಕರಿಗೆ ಗೌರವ ತರುವ ಕಾರ್ಯವನ್ನು ಎಲ್ಲರೂ ಮಾಡೋಣ.
ನವಂಬರ್ 9 ಶಂಕರ್ ನಾಗ್ ಜನ್ಮದಿನ. ಅಂದು ಆಟೋ ದಿನವಾಗಿ ಆಚರಿಸಿ ಪ್ರತಿ ಊರಿನಲ್ಲೂ ಶಂಕರ್ ನಾಗ್ ಮತ್ತು ಆಟೋ ಚಾಲಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡುವುದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿ ಅವರ ಒಂದಾನೊಂದು ಕಾಲದಲ್ಲಿ, ಒಂದು ಮುತ್ತಿನ ಕಥೆ, ಮಾಲ್ಗುಡಿ ಚಿತ್ರಗಳು, ಸೀತಾರಾಮ, ಮಿಂಚಿನ ಓಟ,ಸಾಂಗ್ಲಿಯಾನ, ಸಿಬಿಐ ಶಂಕರ್, ಭಾರತೀಯ ಚಿತ್ರರಂಗದಲ್ಲಿ ವೈಶಿಷ್ಟ್ಯ ಪೂರ್ಣ ಚಿತ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬರಹಗಾರ ಲಕ್ಷ್ಮಿ ನರಸಿಂಹ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಕಾವೇರಿ ಶಿವಕುಮಾರ್, ಮಾಜಿ ನಗರಸಭಾಧ್ಯಕ್ಷರಾದ ಚಿನ್ನಮ್ಮ ಸಿದ್ದರಾಮಯ್ಯ ರಾಮಸಮುದ್ರ ಜಯರಾಜ್,, ಕಾರ್ ಕುಮಾರ್ ನಾರಾಯಣ, ನಾಗೇಶ್ ಇದ್ದರು.
ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ, ಎಲ್.ಶಿವಲಿಂಗ ಮೂರ್ತಿ, ರವಿಚಂದ್ರ ಪ್ರಸಾದ್, ಮಹಮ್ಮದ್ ಗೌಸ್, ಕಾವೇರಿ ಶಿವಕುಮಾರ್, ದೊಡ್ಡ ರಾಯಪೇಟೆ ಮಹಾಲಿಂಗ ಮುಂತಾದವರು ಶಂಕರ್ ನಾಗ್ ರವರ ಚಲನಚಿತ್ರ ಗೀತೆಗಳನ್ನು ಹೇಳುವ ಮೂಲಕ ಗೌರವ ನಮನ ಸಲ್ಲಿಸಿದರು.
