ನಂಜನಗೂಡು: ದಕ್ಷಿಣಕಾಶಿ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸತತವಾಗಿ 30 ವರ್ಷಗಳಿಗೂ ಹೆಚ್ಚು ಕಾಲ ಸಿಪಾಯಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮರಿದಾಸ್ ಅವರನ್ನು ದೇವಸ್ಥಾನದ ಸಿಬ್ಬಂದಿ, ಸ್ನೇಹಿತರು, ಶ್ರೀಕಂಠೇಶ್ವರ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಭೂಮಾಪನ ಇಲಾಖೆಯ ಸೂಪರ್ ವೈಸರ್ ಗಳಾದ ಮಲ್ಲಿಕಾರ್ಜುನ ( ಪಾಪಣ್ಣ)ಪ್ರದೀಪ್, ಮಹದೇವ, ನಗರಸಭೆ ಮಾಜಿ ಸದಸ್ಯ ಶಿವಸ್ವಾಮಿ, ದಲಿತ ಸಂಘರ್ಷ ಸಮಿತಿಯ ಮುಖಂಡ ರಾಜಶೇಖರ್(ಶೇಕಿ), ಪತ್ರಕರ್ತ ಶೇಖರ್ ಕಿರುಗುಂದ, ಗೋಪಾಲ್ ಶ್ರೀಕಂಠೇಶ್ವರ ದೇವಸ್ಥಾನದ ಆಗಮಿಕರಾದ ನಾಗಚಂದ್ರ ದೀಕ್ಷಿತ್, ಪಾರುಪತ್ತೇದಾರ್ ಸೋಮಶೇಖರ್, ಶ್ರೀಕಂಠೇಶ್ವರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್, ರಾಕೇಶ್ ಕುಮಾರ್, ಪ್ರತಾಪ್ ಸೇರಿದಂತೆ ಇತರರು ಇದ್ದರು.