
ಡಾ. ಡಿ . ಸಿ. ರಾಮಚಂದ್ರ
ಶ್ರೀ ಕ್ಷೇತ್ರ ಆದಿಚುಂಚನಗಿರಿ
ಭಾರತದ ರಾಷ್ಟ್ರಪಿತ, ಸ್ವಾತಂತ್ರ ಹೋರಾಟಗಾರ, ಬಾಪೂಜಿ ಎಂದ ಕೂಡಲೇ ಭಾರತದ ಪ್ರತಿಯೊಬ್ಬ ಪ್ರಜೆಗೆ ನೆನಪಿಗೆ ಬರುವುದು ಮೋಹನದಾಸ್ ಕರಮಚಂದ ಗಾಂಧಿ ಅಥವಾ ಮಹಾತ್ಮ ಗಾಂದಿ, ಪುಟ್ಟ ಮಕ್ಕಳಿಂದ ಹಿಡಿದು ಯಾವುದೇ ವಯಸ್ಸಿನವರಾದರೂ ಗಾಂಧೀಜಿಯ ಯಶೋಗಾಥೆಯ ಬಗ್ಗೆ ಭಾವುಕರಾಗುತ್ತಾರೆ. ಅಂತಹ ಅದ್ಭುತ ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯವರದ್ದು.
ಮಹಾತ್ಮ ಗಾಂಧಿ ಒಬ್ಬ ಪ್ರಮುಖ ಸ್ವಾತಂತ್ರ‍್ಯ ಹೋರಾಟಗಾರರು. ಹಾಗೂ ಪ್ರಬಲ ರಾಜಕೀಯ ನಾಯಕರಾಗಿದ್ದರು, ಅವರು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು, ಗಾಂಧೀಜಿ ದೇಶದ ಪಿತಾಮಹ ಎಂದೇ ಕರೆಯಲ್ಪಡುತ್ತಾರೆ. ಅವರು ಭಾರತದ ಬಡ ಜನರ ಜೀವನವನ್ನು ಸುಧಾರಿಸುವಲ್ಲಿ ಶತಾಯಗತಾಯ ಶ್ರಮಿಸಿದ್ದರು. ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಅವರ ಜನ್ಮದಿನವನ್ನು ಪ್ರತಿವರ್ಷ ಗಾಂಧಿ ಜಯಂತಿಯAದು ಆಚರಿಸಲಾಗುತ್ತದೆ. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಅನೇಕರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.ಕೇವಲ ಭಾರತದಲ್ಲಿ ಮಾತ್ರವಲ್ಲ ಇತರ ಹಲವಾರು ದೇಶಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅಳವಡಿಸಿ ಕೊಂಡಿರುವ ಉದಾಹರಣೆಗಳಿವೆ. ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಈ ತತ್ವಗಳನ್ನು ಅಳವಡಿಸಿಕೊಂಡು ವಿಜಯವನ್ನು ಸಾಧಿಸಿದ್ದಾರೆ.
ಮನುಷ್ಯನ ನಡೆ, ನುಡಿ ಆಚಾರ, ಆದರ್ಶ ಚಾರಿತ್ರ‍್ಯಗಳೆ ಅವನ ಶ್ರೇಷ್ಠತೆಯ ಮಾನದಂಡ ಆಗುತ್ತದೆ. ಇಂಥಾ ಮಾನವೀಯ ಉನ್ನತ ಮೌಲ್ಯಗಳನ್ನು ತಮ್ಮ ಜೀವಮಾನದಲ್ಲಿ ಪಾಲಿಸಿದ ಗಾಂಧೀಜಿ ಮಹಾತ್ಮರಾದರು. ಭಾರತಕ್ಕೆ ಸ್ವಾತಂತ್ರ‍್ಯ ದೊಕಿಸಲು ಅಹಿಂಸೆಯ ಅಸ್ತ್ರ ಹಿಡಿದು, ಇಡÃ ರಾಷ್ಟ್ರವನ್ನೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ಎಲ್ಲವೂ ಭಗವಂತನ ಕೃಪÉ ಎಂದು ತಮ್ಮ ಸರಳ ಬದುಕನ್ನು ಮುಂದುವರÉಸಿದ್ದ ಈ ಮಹಾನ್ ಚೇತನ ಇಂದಿಗೂ ಯುವ ಪೀಳಿಗÉ ಮಾದರಿ.
ರವೀಂದ್ರನಾಥ ಠಾಗೋರ್ ಅವರು ʼಮಹಾತ್ಮʼ ಎಂದು ಸಂಬೋಧಿಸುವವರÉಗೂ ಮೋಹನದಾಸ ಕರಮಚಂದ್ ಗಾಂಧಿ ʼನಾವುʼ ಎಂದೇ ಕರÉಯಲ್ಪಡುತ್ತಿದ್ದರು. ಅಷ್ಟೇ ಅಲ್ಲ, ಮುಂದೆ ʼರಾಷ್ಟ್ರಪಿತʼರೂ ಆದರು. ಹೀಗÉಂದು ಮಹಾತ್ಮ ಗಾಂಧಿಯನ್ನು ಮೊದಲ ಬಾರಿಗÉ ಕರÉದವರು ನೇತಾಜಿ ಸುಭಾಷ್ ಚಂದ್ರಬೋಸ್. 1945ರಲ್ಲಿ ರಂಗೂನ್ ನಲ್ಲಿದ್ದತಮ್ಮ ʼಇಂಡಿಯನ್ ನ್ಯಾಷನಲ್ ಆರ್ಮಿ ʼವತಿಯಿಂದ ಬ್ರಿಟಿಷ್ ಇಂಡಿಯಾದ ಮೇಲೆ ದಾಳಿ ಮಾಡಲು ಮುಂದಾಗಿದ್ದ ಬೋಸ್, ಬಾನುಲಿ ಸಂದೇಶವೊAದನ್ನು ಗಾಂಧೀಜಿಯವರಿಗÉ ಪ್ರಸಾರ ಮಾಡಿದರು. ʼಪಾಧರ್ ಆಫ್ ಅವರ್ ನೇಷನ್ ʼ ಎಂದು ಗಾಂಧಿಯನ್ನು ಮೊದಲ ಬಾರಿಗÉ ಕರÉದು ʼನಮ್ಮ ಈ ಹೋರಾಟದಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿʼ ಎಂದು ಕೇಳಿ ಕೊಂಡಿದ್ದರು. ಭಾರತ ಸ್ವಾತಂತ್ರ‍್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಗಾಂಧೀಜಿ ಅವರು ಇಡÃ ದೇಶವನ್ನು ತನ್ನೊಟ್ಟಿಗÉ ಕರÉದುಕೊಂಡು ಹೋದ ಅಪ್ರತಿಮ ನಾಯಕ, ಸಮಾಜದ ಎಲ್ಲಾ ವರ್ಗದ ಜನರೊಂದಿಗÉ ಅವರು ಮುಕ್ತವಾಗಿ ಬÉರÉಯುತ್ತಿದ್ದರು. ಎಲ್ಲರ ಬಗ್ಗೆ ಕಾಳಜಿ ವಹಿಸಿದ್ದರು. ಇಡÃ ವಿಶ್ವದಲ್ಲಿಯೇ ಅತೀ ಕಷ್ಟಕರ.
ರಾಮರಾಜ್ಯ ಪರಿಕಲ್ಪನೆಯ ಇಂತಹ ಆದರ್ಶ ಪುರುಷರÉನಿಸಿದ ಗಾಂಧೀಜಿ ವಿಚಾರಧಾರÉಯತ್ತ ಗಮನಹರಿಸಿದರÉ, ನಿಜಕ್ಕೂ ಅಚ್ಚರಿಯಾಗುತ್ತದೆ. ಧರ್ಮಶ್ರದ್ಧÉ ಗಾಂಧೀಜಿ ಅವರ ಪ್ರಮುಖ ಗುಣಗಳಲ್ಲೊಂದು. ಹಾಗೇಯೇ ಕ್ಷಮೆ ನಿಮ್ಮ ಶತ್ರುಗಳನ್ನು ಕ್ಷಮಿಸಿ ಎಂದು ಹೇಳುವ ಮೂಲಕ ಕ್ಷಮಾದಾನದ ಉನ್ನತ ಗುಣ ಪ್ರತಿಯೊಬ್ಬರಿಗೂ ಸಂದೇಶವೇ ಆಯಿತು. ಗಾಂಧೀಜಿ ಅವರ ಮತ್ತೊಂದು ಗುಣವೆಂದರÉ ನಿರ್ಭೀತಿ, ಅವರ ಮಾನಸಿಕ ಧೈರ್ಯವೂ ಅಭೂತಪೂರ್ವವಾದುದು. ತಮ್ಮನ್ನು ದ್ವೇಷಿಸುವವರ ನಡುವೆಯೂ ಪ್ರೀತಿ, ವಿಶ್ವಾಸದ ಭರವಸೆ ಮೂಡಿಸಿದರು. ಆ ಮೂಲಕ ದ್ವೇಷವನ್ನು ಸೋಲಿಸಿ ಪ್ರೀತಿಯನ್ನು ಪ್ರೀತಿಯಿಂದಲೇ ಗÉಲ್ಲಿಸಿದ್ದಾರÉ. ಮಾನವೀಯತೆಯನ್ನು ಮೆರÉಸಿದ್ದಾರÉ. ಮನುಷ್ಯತ್ವವನ್ನು ಬತ್ತಿದ್ದಾರÉ. ತಮ್ಮ ಸರಳತೆ, ಉನ್ನತ ವಿಚಾರಗಳನ್ನು ಬದುಕಿನಲ್ಲಿ ಅನುಸರಿಸಿದ ರೀತಿಯಿಂದ ಅವರು ಇಂದಿಗೂ ಎಂದೆAದಿಗೂ ಪ್ರಸ್ತುತ್ತ.
1869 ಅಕ್ಟೋಬರ್ 2 ರಂದು ಗುಜಾರಾತ್ ನ ಪೋರಬಂದರಿನಲ್ಲಿ ಕರಮಚಂದ್ ಗಾಂಧಿ ಹಾಗೂ ಪುತಲೀಬಾಯಿ ದಂಪತಿ ಪುತ್ರನಾಗಿ ಗಾಂಧೀಜಿ ಜನಿಸಿದರು ʼಗಾಂಧಿʼ ಮನೆತನದ ಹೆಸರು. ಅವರ ಪೂರ್ಣ ಹೆಸರು ಮೋಹನದಾಸ ಕರಮಚಂದ್ ಗಾಂಧಿ. ಪ್ರಾಥಮಿಕ ಶಿಕ್ಷಣವನ್ನು ಪೋರಬಂದರಿನಲ್ಲಿ, ಮಾಧ್ಯÄಮಿಕ ಹಾಗೂ sಫ್ರೌಢ ಶಿಕ್ಷಣವನ್ನು ರಾಜಕೋಟ್ ಮತ್ತು ಭಾವ ನಗರದಲ್ಲಿ ಮುಗಿಸಿದರು. ತಾನು ನೋಡಿದ ಸತ್ಯ ಹರಿಶ್ಚಂದ್ರ ನಾಟಕ ಹಾಗೂ ಓದಿದ ಶ್ರವಣನ ಮಾತಾ ಪಿತೃಭಕ್ತಿ, ತಾಯಿಯಿಂದ ಕೇಳಿ ತಿಳಿದ ಪುರಾಣ ಪುಣ್ಯ ಕಥÉಗಳಿಂದ ತುಂಬಾ ಪ್ರಭಾವಿತರಾದರು. ಅಂದಿನ ಬಾಲ್ಯವಿವಾಹ ಪದ್ದತಿಯ ಅನ್ವಯ ಗಾಂಧೀಜಿ ಅವರಿಗÉ ಹಿರಿಯರು ಮೆಚ್ಚಿ ಕಸ್ತÆರ ಬಾ ಅವರೊಡನೆ 1883ರಲ್ಲಿ ವಿವಾಹವಾಯಿತು. ಆಗ ಅವರಿಗÉ ವಯಸ್ಸು 14. ಗಾಂಧೀಜಿ 1888ರಲ್ಲಿ ಬ್ಯಾರಿಸ್ಟರ್ ವಿದ್ಯಾಭ್ಯಾಸಕ್ಕಾಗಿ ಇಂಗ್ಲÉAಡ್ ಗÉ ತೆರÉಳಿದರು. ಅಲ್ಲಿ ಪದವಿ ಪಡೆದ ಬಳಿಕ ವಕÃಲಿ ವೃತ್ತಿ ಆರಂಭಿಸಿದರು. ನಂತರ ಪ್ರಕರಣವೊಂದರ ನಿಮಿತ್ತ 1893ರಲ್ಲಿ ದಕ್ಷಿಣ ಆಫ್ರಿಕಾಕ್ಕÉ ತರÉಳಿದರು. ಆದರÉ ಅಲ್ಲಿನ ವರ್ಣಭೇದ ನೀತಿ ಹೋರಾಟಕ್ಕÉ ಪ್ರೇರೇಪಿಸಿತು. ಅದನ್ನು ತೊಡೆದು ಹಾಕಬೇಕು ಎಂದು ಸಂಕಲ್ಪ ಮಾಡಿ, ಅಹಿಂಸಾ ಮಾರ್ಗದಲ್ಲಿ ವರ್ಣಭೇದ ನೀತಿ ವಿರುದ್ದ ಹೋರಾಟ ಆರಂಭಿಸಿದರು. ಅದೇ ವೇಳÉಗÉ ಭಾರತದಲ್ಲಿ ಸ್ವಾಂತ್ರ‍್ಯ ಹೋರಾಟ ತೀವ್ರಗೊಂಡಿದ್ದರಿAದ ವರ್ಣಭೇದ ನೀತಿ ವಿರುದ್ದ ತಾತ್ಕಲಿಕವಾಗಿ ಹೋರಾಟವನ್ನು ಕೈ ಬಿಟ್ಟು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕÉ ಮರಳಿದರು.
ಭಾರತಕ್ಕÉ ಬಂದ ಕೋಡಲೇ ತಮ್ಮ ವಕÃಲಿ ವೃತ್ತಿಯನ್ನು ತ್ಯಜಿಸಿ, ಸ್ವಾತಂತ್ರ‍್ಯ ಚಳವಳಿಯಲ್ಲಿ ಧುಮುಕಿ, ಅದರ ನೇತೃತ್ವ ವಹಿಸಿಕೊಂಡು ಸತ್ಯ ಹಾಗೂ ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ವಿರುದ್ದ ಹೋರಾಡಿದರು.
1920-22 ಅಸಹಕಾರ ಚಳವಳಿ, 1930ರಲ್ಲಿ ಉಪ್ಪಿನ ಸತ್ಯಾಗ್ರಹ, 1942ರಲ್ಲಿ ʼ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ, (ಕ್ವಿಟ್ ಇಂಡಿಯಾ ಚಳುವಳಿ ) ಎಂಬ ಹೋರಾಟ ನಡೆಸಿದರು. ಭಾರತದ ಸ್ವಾತಂತ್ರ‍್ಯಕ್ಕಾಗಿ ಹಲವು ಬಾರಿ ಬ್ರಿಟಿಷರಿಂದ ಬಂಧನಕ್ಕೊಳಗಾದರು. ಜೈಲು ವಾಸ ಅನುಭವಿಸಿದರು. ಆದರೂ ಎದೆಗುಂದದೆ ಗಾಂಧೀಜಿ ಸತ್ಯ, ಅಹಿಂಸಾ ಮಾರ್ಗದಲ್ಲಿ 27ವರ್ಷ ಅವಿಶ್ರಾಂತವಾಗಿ ನಡೆಸಿದ ಸ್ವಾತಂತ್ರ‍್ಯ ಚಳವಳಿಯ ಪರಿಣಾಮ ಭಾರತಕ್ಕÉ 1947 ಆಗಸ್ಟ್ 15ರ ಮಧ್ಯರಾತ್ರಿ ಸ್ವಾತಂತ್ರ‍್ಯ ದೊರÉಯಿತು. ತಾಯಿ ಭಾರತಿ ಬ್ರಿಟಿಷರಿಂದ ಬಂಧ ಮುಕ್ತ ಗೊಂಡಳು. ಗುಲಾಮಗಿರಿಯಿಂದ ಉಸಿರು ಕಟ್ಟಿಕೊಂಡಿದ್ದ ಇಡÃ ದೇಶ ಸ್ವಾತಂತ್ರ‍್ಯ ದ ಗಾಳಿ ಕುಡಿದು ಸಂಭ್ರಮದಿಂದÀ ಕುಣಿದಾಡಿತ್ತು. ರಾಷ್ಟ್ರಪಿತ ಗಾಂಧೀಜಿಯ ಅಹಿಂಸಾ ಮಾರ್ಗದಲ್ಲಿ ಇಡÃ ಜಗತ್ತು ಜಯ ಜಯ ಎಂದು ಜೈಕಾರ ಹಾಕಿತ್ತು. ಗಾಂಧೀಜಿ ಸರ್ವೋದಯದ ಕನಸುಗಾರರಾಗಿದ್ದರು. ಸರ್ವರ ಉದ್ಧಾರವೇ ಅವರ ತಾರಕ ಮಂತ್ರವಾಗಿತ್ತು. ಸ್ವಚ್ಚ ಭಾರತ, ಅಭಿವೃದ್ದಿಯ ಭಾರತ, ಮನುಷ್ಯತ್ವದ ಭಾರತ ಅವರ ತುಡಿತವಾಗಿತ್ತು. ಇನ್ನು ಭ್ರಷ್ಟಚಾರ, ಲಂಚಾವತಾರ ಇನ್ನಿತರ ಸಾಮಾಜಿಕ ಅನಿಷ್ಟಗಳ ಕುರಿತಾಗಿ, ಗಾಂಧೀಜಿ ಅವರ ಅಭಿಪ್ರಾಯ ಆದರ್ಶ ಸಮಾಜದ ಪರಿಕಲ್ಪನೆಯ ಭದ್ರ ಬುನಾದಿಗÉ ನಾಂದಿ ಹಾಡಿದೆ. ಅನ್ಯಾಯ ಮಾರ್ಗಗಳಿಂದ ಸಂಪಾದಿಸಿ ಧನಿಕನಾದ ಮನುಷ್ಯ ಡಕಾಯಿತರುಗಳಿಂದ ಕಡಿಮೆ ಇಲ್ಲ. ಮರ್ಯಾದೆಯ ಮುಖವಾಡದಿಂದ ತನ್ನ ಅವಶ್ಯಕತೆಗಿಂತ ಮೀರಿ ಹಣ, ಆಸ್ತಿ, ಸಂಪಾದಿಸುವವನು ಸಾಮಾನ್ಯ ಕಳ್ಳನಿಗಿಂತ ಹೆಚ್ಚಿನ ಶಿಕ್ಷೆಗÉ ಅರ್ಹನು. ದೇವರು ಧರ್ಮ ಪ್ರಾರ್ಥನೆಗಳನ್ನು ಕುರಿತು ಅಪಹಾಸ್ಯ ಮಾಡುವವರಿಗÉ ಗಾಂಧೀಜಿಯವರ ಹಿತನುಡಿಯೆಂದರÉ,ʼ ನಾನೇ ಬುದ್ದಿವಂತ, ವಿಚಾರವಂತನೆAಬ ಹಮ್ಮಿನಿಂದ ಇನ್ನೊಬ್ಬರ ಭಾವನೆಗಳ ಜೊತೆ ಆಟ ಆಡಬೇಡಿ. ಜೀವನದ ಆದಿ ಮತ್ತು ಅಂತ್ಯ ಪಾಠಗಳೇ. ಪ್ರಾರ್ಥನೆ, ಪ್ರೀತಿ, ದಯೆ, ತ್ಯಾಗವೇ ಧರ್ಮ , ಪ್ರಾರ್ಥನೆಯನನು ಸರಿಯಾಗಿ ತಿಳಿದು ಸಲ್ಲಿಸಿದರÉ ಅದು ಅತ್ಯಂತ ಸಮರ್ಥವಾದ ಕಾರ್ಯೋಪಕರಣವಾಗುತ್ತದೆ. ಹೀಗÉ ಗಾಂಧೀಜಿಯವರ ವಿಚಾರಧಾರÉಗಳು, ದೇಶದ ಜನರ ಸಾಮಾಜಿಕ, ಆರ್ಥಿಕಹಾಗೂ ಧಾರ್ಮಿಕ ವಿಷಯಗಳ ಕುರಿತು ತನ್ನದೇ ಆದ ಮಹೋನ್ನತ ಹಾಗೂ ಉಜ್ವಲ ಬÉಳಕಿನ ಉನ್ನತ ಭಾವನೆಗಳನ್ನು ಹೊಂದಿದ್ದು, ಕಳಕಳಿಯ ಸಂಕೇತವಾಗಿತ್ತು. ಇಂತಹ ಉನ್ನತ ವ್ಯಕ್ತಿತ್ವ ಹೊಂದಿದ್ದುದರಿAದಲೇ ಗಾಂಧೀಜಿಯವರು ರಾಷ್ಟ್ರಪಿತನಾಗಿ, ದೇಶ ಮಾತ್ರವಲ್ಲ ವಿಶ್ವದಾದ್ಯಂತ ಗುರುತಿಸಲ್ಪಟ್ಟಿದ್ದಾರÉ.
1948 ಜನವರಿ 30ರಂದು ಶುಕ್ರವಾರ ಗಾಂಧೀಜಿ ಪ್ರಾರ್ಥನಾ ಸಭÉಗÉ ಹೋಗುತ್ತಿದ್ದ ವೇಳÉ ನಾಥರಾಂ ವಿನಾಯಕ ಗೋಡ್ ಸೆ ಎಂಬಾತ ಗಾಂಧೀಜಿ ಎದೆಗÉ ಗುಂಡು ಹಾರಿಸಿದ ʼಹೇ ರಾಮ್ ʼ ಎನ್ನುತ್ತಾ ಗಾಂಧೀಜಿ ಪ್ರಾಣ ಬಿಟ್ಟರು.
ಮಹಾತ್ಮ ಗಾಂಧೀಜಿಯವರ ಕೆಲವು ವಿಶೇಷತೆಗಳು
ಜಗತ್ತಿನ 100ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ಪೋಸ್ಟಲ್ ಸ್ಟಾಂಪ್‌ಗಳನ್ನು ಬಿಡುಗಡೆ ಮಾಡಿವೆ. ಮೊಟ್ಟ ಮೊದಲು ಬಿಡುಗಡೆಗೊಳಿಸಿದ ದೇಶ ಪೋಲಂಡ್. ಭಾರತದ ಅಂಚೆ ಇಲಾಖೆಯು ಇಲ್ಲಿವರಗೂ 40ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ವಿವಿಧ ಬಗÉಯ ನಾಣ್ಯಗಳನ್ನು ಬಿಡುಗಡೆಗೊಳಿಸಿವೆ. ಸುಮಾರು 30ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ವಿವಿಧ ರೀತಿಯ ಪ್ರತಿಮೆಗಳಿವೆ. ಗಾಂಧೀಜಿಯವರ ಹೆಸರಿನ ರಸ್ತÉಗಳು ಸುಮಾರು 40ಕ್ಕೂ ಹೆಚ್ಚು ದೇಶಗಳಲ್ಲಿವೆ. ಗಾಂಧೀಜಿ ಮರಣ ಹೊಂದಿದ ದಿನ ಶ್ರೀಲಂಕಾ ಸರಕಾರವು ಶೋಕಾಚರಣÉ ಮಾಡಿ ತನ್ನ ರೇಡಿಯೋ ಪ್ರಸಾರವನ್ನು 24ಗಂಟೆಗಳ ಕಾಲ ಬಂದ್ ಮಾಡಿತ್ತು. ಗಾಂಧೀಜಿಯವರು ಬದುಕಿದ್ದಾಗಲೇ ಅವರ ಜೀವನ ಚರಿತ್ರÉ ನೊಬಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರೋಮನ್ ರೋಲ್ಯಾಂಡ್ ಅವರಿಂದ ಬರÉಯಲ್ಪಟ್ಟಿತ್ತು.
ಗಾಂಧೀಜಿಯವರು ತಮ್ಮ ಎರಡು ಕೈಗಳಿಂದ ಬರÉಯುತ್ತಿದ್ದರು. ಹಿಂದ್ ಸ್ವರಾಜ್ ಪುಸ್ತಕದ ಕೆಲವು ಪುಟಗಳನ್ನು ಎಡಗÊಯಿಂದ ಬರÉದಿದ್ದರು ಗಾಂಧೀಜಿಯವರು ತಮ್ಮ ಜೀವಮಾನದಲ್ಲೇ ವಿಮಾನದಲ್ಲಿ ಒಂದು ಸಾರಿಯೂ ಪ್ರಯಾಣಿಸಲಿಲ್ಲ. ಗಾಂಧೀಜಿಯವರು ತಮ್ಮ ಸಮಕಾಲೀನ ಜಗತ್ತಿನ ನಾಯಕರಲ್ಲೇ ಅತ್ಯಂತ ಹೆಚ್ಚು ಫೋಟೋಗ್ರಾಫ್ ಗಳನ್ನು ಹೊಂದಿದ ವ್ಯಕ್ತಿ. ಗಾಂಧೀಜಿ ತಮ್ಮ ಜೀವಮಾನದಲ್ಲೇ ಒಮ್ಮೆಯೂ ಅಮೇರಿಕಕ್ಕÉ ಭೇಟಿ ನೀಡಲಿಲ್ಲ. ಆದರÉ ಅಮೇರಿಕಾ ಒಂದರಲ್ಲೇ ಗಾಂಧೀಜಿಯವರ 30 ಕ್ಕೂ ಹೆಚ್ಚು ಪ್ರತಿಮೆಗಳಿವೆ.1999ರಲ್ಲಿ ಟೈಮ್ಸ್ ಮ್ಯಾನ್ಸನ್ ನಡೆಸಿದ ʼ ಶತಮಾನದ ವ್ಯಕ್ತಿʼ ಸ್ವರ್ಧÉಯಲ್ಲಿ ಗಾಂಧೀಜಿಗÉ 2ನೇ ಸ್ಥಾನ. ಮೊದಲ ಸ್ಥಾನ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿದ ಅಲ್‌ಬರ್ಟ್ ಐನ್ ಸ್ಟೀನ್ .
ಗಾಂಧೀಜಿಯವರಿಗÉ ಮುಂದಿನ ಎರಡು ಹಲ್ಲುಗಳು ಹರÉಯದಲ್ಲÉ ಬಿದ್ದು ಹೋಗಿದ್ದವು. ತಿನ್ನುವುದಕ್ಕಾಗಿ ಎರಡು ಹಲ್ಲುಗಳ ಸೆಟ್ ಒಂದನ್ನು ಮಾಡಿಸಿಕೊಂಡಿದ್ದರು. ( ದ.ಆಫ್ರಿಕಾದಲ್ಲಿ ಬಿಳಿಯರಿಂದ ದಾಳಿಗೊಳಗಾದಾಗ ಎರಡು ಹಲ್ಲುಗಳು ಉದಿರಿದ್ದವು). ಯಾವುದೇ ಅಧಿಕಾರದಲ್ಲಿಲ್ಲದ ಗಾಂಧೀಜಿ ತೀರಿಕೊಂಡಾಗ ವಿಶ್ವಸಂಸ್ಥೆಯು ತನ್ನ ಎಲ್ಲ 55 ಸದಸ್ಯ ರಾಷ್ಟ್ರಗಳ ಧ್ವಜವನ್ನು ಅರ್ದಕ್ಕÉ ಇಳಿಸಿ ಶೋಕಾಚರಣÉ ಮಾಡಿತ್ತು. ಇದು ಇತಿಹಾಸದಲ್ಲÉ ಮೊದಲ ಬಾರಿ ಮತ್ತು ಕೊನೆಯ ಬಾರಿ ನಡೆದ ಘಟನೆ. ಮತ್ತೊಬ್ಬರಿಗÉ ಈ ರೀತಿ ಗೌರವ ಸಿಕ್ಕಿಲ್ಲ.
ಗಾಂಧೀಜಿಯವರು ಯಾವ ದೇಶದ ವಿರುದ್ದ ಜೀವಮಾನವಿಡಿ ಹೋರಾಡಿದರೋ ಅದೇ ದೇಶದ (ಇಂಗ್ಲÉAಡಿನ ಲಂಡನ್ ಸೈರ್) ಪಾರ್ಲಿಮೆಂಟ್ ಮುಂದೆ ಗಾಂಧೀಜಿಯ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ. ಜಗತ್ತಿನಲ್ಲೇ ವಿಶ್ವಸಂಸ್ಥೆಯು ಆಚರಿಸಲ್ಪಡುವ ಜನ್ಮದಿನ ಕೇವಲ ʼಗಾಂಧಿ ಜನ್ಮದಿನʼ ಮಾತ್ರ ವಿಶ್ವಸಂಸ್ಥೆ ಗಾಂಧೀ ಜನ್ಮದಿನವನ್ನು ʼವಿಶ್ವ ಅಹಿಂಸಾ ದಿನ” ಎಂದು ಘೋಷಿಸಿದೆ.
“ಗಾಂಧಿ ಜಯಂತಿಯ ಮಹತ್ವ” ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಹಬ್ಬ ಗಾಂಧಿಜಯAತಿ.ಎಲ್ಲಾ ಶಾಲೆಗಳಲ್ಲಿ,ಸರ್ಕಾರಿ ಕಛೇರಿಗಳಲ್ಲಿ ಗಾಂಧೀಜಿ ಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧೀಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಬೇಗನೆ ಎದ್ದು ಸ್ನಾನ ಮಾಡಿ ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ.
ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇಧಿಸಿರುವುದು ಹೆಮ್ಮೆಯ ಸಂಗತಿಯೂ ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಅವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು.
ಗಾಂಧೀಜಿಯಿAದ ಪ್ರೇರಣÉಗೊಂಡು ನಾಲ್ಕು ಖಂಡಗಳ ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಹೋರಾಟಗಳು ನಡೆದಿವೆ. ಸುಮಾರು 6 ಬಾರಿ ನೊಬÉಲ್ ಸಂಸ್ಥೆ ಈ ವಿಷಯವಾಗಿ ಕ್ಷಮೆ ಕೇಳಿʼ ಅವರು ನೊಬÉಲ್ ಗಿಂತ ದೊಡ್ಡವರುʼ ಎಂದು ಹೇಳಿತು. ಗಾಂಧೀಜಿಯವರನ್ನು ಒಮ್ಮೆಯೂ ಭೇಟಿಯಾಗದ ನೆಲ್‌ಸನ್ ಮಂಡೆಲಾ (ದ.ಆಫ್‌ರೀಕಾದ ಗಾಂಧಿ) ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (ಅಮೇರಿಕಾ ಗಾಂಧಿ) ಅವರಿಗÉ ನೊಬÉಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ. ದ.ಆಫ್ರಿಕಾದ ಜೈಲಿನಲ್ಲಿ ನೇಕಾರ ಕೆಲಸ ಆರಿಸಿಕೊಂಡ ಗಾಂಧೀಜಿಯವರು ಎರಡು ತುದಿ ಚೂಪಾಗಿರುವ ಟೋಪಿ ಒಂದನ್ನು ಹೊಲಿಸಿದರು. ಅದೇ ಮುಂದೆ ಗಾಂಧಿ ಟೋಪಿ ಎಂದು ಪ್ರಸಿದ್ಧವಾಗಿ ಈಗಲೂ ಚಾಲ್‌ತಿಯಲ್ಲಿದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಅವರ ಸಾವಿರಾರು ಸಹಚರರು ತಮ್ಮ ಪ್ರಸಿದ್ದ ವಾಷಿಂಗ್‌ಟನ್ ಯಾತ್ರÉಯಲ್ಲಿ ಗಾಂಧಿ ಟೋಪಿ ಧರಿಸಿ ಹೋರಾಟಕ್ಕÉ ಇಳಿದಿದ್ದರು. ಇದೇ ಗಾಂಧಿ ಮಹಾತ್ಯೆ!.