ಭೋಗಾಪುರ ಎಸ್ ಸಿ/ಎಸ್ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಾಕಿ ಕಾಮಗಾರಿ ಪೂರ್ಣ ಗೂಳಿಸಲು ಕ್ರಮ:  ಸಿ.ಪುಟ್ಟರಂಗಶೆಟ್ಟಿ

  • ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೆಡ್ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ವಿವಿಧ ಚಟುವಟಿಕೆಗಳ 2025-26 ನೇ ಸಾಲಿನ ಸಮಾರೋಪ ಸಮಾರಂಭ

ಚಾಮರಾಜನಗರ: ತಾಲೂಕಿನ ಭೋಗಾಪುರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಕೆಲಸಗಳನ್ನು ಮಾಡಿಕೊಡುವುದಾಗಿ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
 ತಾಲೂಕಿನ ಭೋಗಾಪುರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್,
, ರೆಡ್ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ವಿವಿಧ ಚಟುವಟಿಕೆಗಳ 2025-26 ನೇ ಸಾಲಿನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ
ಬೇಡಿಕೆಯಂತೆ ಸುತ್ತುಗೋಡೆ, ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಬಾಕಿ ಕಾಮಗಾರಿ ಆದಷ್ಟು ಬೇಗ ಮಾಡಲಾಗುವುದು. ಅಲ್ಲದೇ
  ಎಂಎಸ್ಐಎಲ್ ವತಿಯಿಂದ ಕಾಲೇಜಿಗೆ ಸದ್ಯದಲ್ಲೇ 50 ಡೆಸ್ಕ್ ಗಳು, ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಡಲಾಗುವುದು ಇದೊಂದು ಸುಸಜ್ಜಿತ ಕಾಲೇಜು ಆಗಲಿದೆ ಎಂದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತ ನೀಡಲಾಗುತ್ತಿದೆ.  ಶಿಕ್ಷಣದಿಂದ ಮಾತ್ರ ಎಲ್ಲವೂ ಸಾಧ್ಯವಾಗಿದೆ. ಆಗಾಗಿ ಸರ್ಕಾರದಿಂದ ದೊರೆಯುವ ಎಲ್ಲ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ಓದಬೇಕು. ಪಠ್ಯ ದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಬೇಕು ಎಂದರು.
   ಸಿಡಿಎಸ್ ಸದಸ್ಯ ನಾಗೇಂದ್ರ ಭೋಗಾಪುರ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ
ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ ತಂದು ಕೊಡುವ ಮೂಲಕ  ಶಾಸಕರಿಗೆ, ಕಾಲೇಜಿಗೆ, ಭೋಗಾಪುರಕ್ಕೆ ಕೀರ್ತಿ ತಂದು ಕೊಡಬೇಕು ಎಂದು ಸಲಹೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಾಹಿತಿ ಮಹದೇವ ಶಂಕನಪುರ ಸಮಾರೋಪ ಭಾಷಣದಲ್ಲಿ ಮಾತನಾಡಿ, ಜಿಲ್ಲೆಯ ಮಂಟೇಸ್ವಾಮಿ, ಮಹದೇಶ್ಚರ ಕಾವ್ಯ ಗಳು ಜಾಗತಿಕ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿವೆ.ಇವುಗಳ ಬಗ್ಗೆ ಜಿಲ್ಲೆಯ ಯುವ ಜನಾಂಗ, ವಿದ್ಯಾರ್ಥಿಗಳು ಅಧ್ಯಯನ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಎಂ.
ನಂಜುಂಡಯ್ಯ  ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು,ವಿದ್ಯಾರ್ಥಿ ಕ್ಷೇಮ ಪಾಲನೆ ಸಂಚಾಲಕ ಡಾ.ವಿ.ಆರ್.ರಮೇಶ್ ಬಾಬು,  ಐಕ್ಯೂಎಸಿ , ಎನ್ ಎಸ್ಎಸ್, ರೆಡ್ ಕ್ರಾಸ್ ಸಂಚಾಲಕ ಆರ್.ರಂಗಸ್ವಾಮಿ, ಯುಯುಸಿಎಂ ಮತ್ತು ಐಟಿ ಸಂಚಾಲಕ ಟಿ.ಆರ್.ಗಿರೀಶ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಮನೋಜ್ ಕುಮಾರ್, ರಮೇಶ್ ಹಾಜರಿದ್ದರು.

Leave a Reply

Your email address will not be published. Required fields are marked *