
ಚಾಮರಾಜನಗರ:- ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ ವೃತ್ತಿ ಯನ್ನು ಅಳವಡಿಸಿ ಕೊಳ್ಳವುದರಿಂದ ಅರ್ಥಿಕ ಸದೃಡತೆಯೊಂದಿಗೆ ಸ್ವವಲಂಭನೆ ಬದುಕ ಸಾಗಿಸಲು ಸಹಕಾರಿ ಯಾಗಲಿದೆ ಎಂದು ಚಾಮುಲ್ ನಿರ್ದೇಶಕ ಸದಾಶಿವ ಮೂರ್ತಿ ಹೇಳಿದರು.
ಚಾಮರಾಜನಗರ ತಾಲ್ಲೂಕಿನ ಹಳ್ಳಿಕೆರೆ ಹುಂಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಚಾಮುಲ್ ನಿರ್ದೇಶಕ ಹೆಚ್.ಎಸ್. ಬಸವರಾಜಪ್ಪ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರು ನಮ್ಮ ಒಕ್ಕೂಟದಿಂದ ಬರುವ ಮಾಹಿತಿಯನ್ನು ಅರಿತು ಸಂಘದಲ್ಲಿ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿದ ಕೊಳ್ಳಬೇಕಿದೆ, ರೈತರು ಅಕಾಲಿಕ ಸಂಕಷ್ಟ ಸಿಲಿಕಿದಾಗ ವಿಮಾ ಸೌಲಭ್ಯ ಜಾರಿಯಲ್ಲಿತ್ತವೆ ಪ್ರತಿಯೊಬ್ಬರೂ ಜಾನುವಾರುಗಳಿಗೆ ಹಾಗೂ ತಮಗೂ ವಿಮಾ ಸೌಲಭ್ಯ ನೊಂದಾಯಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳ ಲ್ಲಿ ದೊರೆಯುವ ಪಶುಆಹಾರವನ್ನು ಸಕಾಲದಲ್ಲಿ ನೀಡಿ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಹಾಲು ಉತ್ಪಾದಕರು ಅಧಿಕ ಲಾಭಂಶ ಪಡೆದು ಅರ್ಥಿಕ ಸಬಲರಾಗಲು ಸಹಕಾರಿಯಾಗಿದೆ ಎಂದರು.
ಜಾನುವಾರುಗಳಿಗೆ ಹಾಗಾಗ ಸಹಕಾರ ಸಂಘಗಳಲ್ಲಿ ನಡೆಯುವ ಪಶು ಆಹಾರ ಶಿಬಿರದಲ್ಲಿ ಭಾಗವಹಿಸಿ ಪಶು ಆಹಾರ ಸಂರಕ್ಷಣಾ ಜೊತೆಗೆ ಆದರ ಆರೋಗ್ಯ ಕ್ಷೇಮದ ಕಡೆ ಗಮನಹರಿಸಬೇಕಿದೆ,
ಪಶುಗಳಿಗೆ ಉಚಿತ ಲಸಿಕೆ ಗಳನ್ನು ತಪ್ಪದೇ ಹಾಕಿಸಿ ರೋಗಬಾದೆಯನ್ನು ನಿಯಂತ್ರಿಸಲು
ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಡೇರಿ ಸಂಘದ ಅಧ್ಯಕ್ಷ ಶಿವಸ್ವಾಮಿ, ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಚಾಮುಲ್ ವಿಸ್ತರಣಾಧಿಕಾರಿ ಲಕ್ಷ್ಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿನ್ನಬುದ್ದಿ, ಸಂಘದ ಉಪಾಧ್ಯಕ್ಷ ಹಾಗೂ ನಿರ್ದೇಶಕ ಗಳು ಮತ್ತು ಕಚೇರಿ ಸಿಬ್ಬಂದಿ ಗಳು ಸೇರಿದಂತೆ ಇತರರು ಇದ್ದರು.
