- ಚಂದಕವಾಡಿಯಲ್ಲಿ ಜಾಬ್ ಕಾರ್ಡ್ ಮೇಳ, ಅಭಿಯಾನ
ಚಾಮರಾಜನಗರ:ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಸಿದ್ದರಾಜು ಹೇಳಿದರು.
ತಾಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಕವಾಡಿ ಗ್ರಾಮದ ಸಂಜೀವಿನಿ ಸುಗಂಧ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಿಳಾ ಸ್ವ-ಸಹಾಯ ಸಂಘಕ್ಕೆ ಭೇಟಿ ನೀಡಿ ಅವರು ವಿಬಿಜಿ ರಾಮ್‌ಜಿ ಯೋಜನೆ ಕುರಿತು ಮಾತನಾಡಿ, ಆ. 15 ರಿಂದ ಸೆ. 15 ರ ವರಗೆ ಜಾಬ್ ಕಾರ್ಡ್ ಮೇಳ. ಅಭಿಮಾನ ನಡೆಯುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು,
ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ ಮಿಷನ್ ಗ್ರಾಮೀಣ ಯೋಜನೆಯು ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಾಗಿದ್ದು, ಪ್ರತಿ ಗ್ರಾಮೀಣ ಕುಟುಂಬಕ್ಕೆ ದಿನ 382 ರೂ. ಕೂಲಿಯಂತೆ ವಾರ್ಷಿಕವಾಗಿ ಕನಿಷ್ಠ 125 ದಿನಗಳ ಉದ್ಯೋಗವನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಯೋಜನೆಯಡಿಯಲ್ಲಿ 318 ಹೊಸ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗಿದೆ. ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ಕುಟುಂಬಗಳಿಗೆ. ತಲುಪಿಸುವ ಉದ್ದೇಶದಿಂದ ಮನೆಮನೆ ಭೇಟಿ, ಐಇಸಿ ಚಟುವಟಿಕೆಗಳು, ಕೆಲಸದ ಭೇಡಿಕೆಗಳಿಗೆ ಅರ್ಜಿಗಳ ವಿತರಣೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎನ್‌ಆರ್‌ಎಲ್ ಎಂ ತಂಡದ, ಬಿಎಫ್‌ಟಿ ಮತ್ತು ಇತರರು ಹಾಜರಿದ್ದರು.
