ಶಾಸ್ತ್ರೀಯ ಪರಂಪರೆ ಉಳಿಸುವ ಬೆಳೆಸುವ ಕೆಲಸವನ್ನು ಎಐಎಂಡಿಎ ಮಾಡುತ್ತಿದೆ : ಸಾಯಿನಾರಾಯಣ ಕಲ್ಮಡ

ಚಾಮರಾಜನಗರ: ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘವು ಇಡೀ ಭಾರತದಲ್ಲಿ ಸನಾತನ ಪರಂಪರೆಯನ್ನು ಬೆಳಸಲು, ನಮ್ಮ ಮಕ್ಕಳು ಶಾಸ್ತ್ರೀಯ ಸಂಗೀತ ನೃತ್ಯ ಅಭ್ಯಾಸ ಮಾಡಬೇಕು ಎಂಬ ದೃಷ್ಟಿಯಿಂದ ದೇಶ ಎಲ್ಲ ದೇವಸ್ಥಾನಗಳಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಭಾರತ ಸಂಗೀತ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ಸಾಯಿನಾರಾಯಣಕಲ್ಮಡ್ಕ ಹೇಳಿದರು.
ಮೈಸೂರಿನ ವಿಜಯನಗರ ಶ್ರೀಸಪ್ತ ಮಾತೃಕೆ ದೇವಸ್ಥಾನದಲ್ಲಿ
ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘ ಮೈಸೂರು ವಿಭಾಗದ ಶುಭಾರಂಭ ಹಾಗೂ ವಾರದ ಸಾಂಸ್ಕೃತಿಕ ಸೇವಾ ವೇದಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಮೈಸೂರು ವಿಭಾಗ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಈ ಜಿಲ್ಲೆಗಳಲ್ಲಿ… ದೇವಸ್ಥಾನಗಳನ್ನು ಸಂಪರ್ಕ ಮಾಡಿಕೊಂಡು ನಮ್ಮ ಶಾಸ್ತ್ರೀಯ ನೃತ್ಯ ಕಲಾವಿದರಿಗೆ ವೇದಿಕೆ ಓದಗಿಸಿಕೊಡುವ ಮೂಲಕ ಪ್ರೋತ್ಸಾಹ ಮಾಡುತ್ತಿದೆ ಎಂದರು.
ಶಿಸ್ತುಬದ್ಧವಾಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮುಂದಿನಗಳಲ್ಲಿ ಎಲ್ಲ… ಶಾಸ್ತ್ರೀಯ ಪರಂಪರೆ ಉಳಿಸುವ ಬೆಳೆಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಅದಕ್ಕಾಗಿ ಮೈಸೂರು ವಿಭಾಗೀಯ ಸಮಿತಿಯನ್ನು ಅಭಿನಂದಿಸುತ್ತೇನೆ. ಇದು ಇದು ಜಿಲ್ಲೆಗಳಲ್ಲಿ ಅಲ್ಲ ಇದು ಅಖಿಲ ಭಾರತ ಮಟ್ಟದು.ದೇಶದಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಅದೇ ರೀತಿ ಒರಿಸ್ಸಾ, ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಬಿಹಾರ ಸೇರಿದಂತೆ ದೇಶದ 9 ರಾಜ್ಯಗಳಲ್ಲಿ ಒಕ್ಕೂಟ ಇದ್ದು ಸುಮಾರು 32 ಲಕ್ಷ ಕಲಾವಿದರ ಜೊತೆಗೂಡುವಿಕೆಯಿಂದ ಈ ಕಾರ್ಯಕ್ರಮಗಳ ಪ್ರತಿವಾರ ನಿರಂತರವಾಗಿ ಕನ್ಯಾಕುಮಾರಿಯಿಂದ ಅಯೋಧ್ಯವರೆಗೂ ಕಾರ್ಯಕ್ರಮ ನಡೆಯುತ್ತದೆ. ಒಕ್ಕೂಟಕ್ಕೆ ಹೆಮ್ಮೆ ಇದೆ ಮುಂದಿನ ದಿನಗಳಲ್ಲಿ ಕಲಾವಿದರನ್ನು ಒಟ್ಟಿಗೆ ಸೇರಿಸುತ್ತೇವೆ ಎಂದರು.
ಸನ್ಮಾನ : ಮೈಸೂರಿನ ಹಿರಿಯ ಸಂಗೀತ, ಸಾಹಿತ್ಯ ಕಲಾವಿದರಾದ ವಿದುಷಿ ಭಾರತಿಮಂಜುನಾಥ್, ವಿದುಷಿ ಎಂ.ಎಲ್.ಭಾರತಿ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಸಂಘ ಮೈಸೂರು ವಿಭಾಗದ ಅಧ್ಯಕ್ಷೆ ವಿದುಷಿ ಡಾ.ಚಿತ್ರಾ ಬಿಳಿಗಿರಿ ಪ್ರಾಸ್ತಾವಿಕವಾಗಿ
ಕಲೆಗಾಗಿ ಹಾಗೂ ಕಲಾವಿದರ ಉಳಿವಿಗಾಗಿ ಸನಾತನ ಸಂಸ್ಕೃತಿಯ ಸಂಪತ್ತಿಗಾಗಿ ಈ ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ಮೈಸೂರು ವಿಜಯನಗರ ಶ್ರೀಸಪ್ತ ಮಾತೃಕೆ ದೇವಸ್ಥಾನದ ಅಧ್ಯಕ್ಷ ಎಸ್.ಕೆ.ಭಾಸ್ಕರ್, ಎಐಎಂಡಿಎ ಗೌರವ ಅಧ್ಯಕ್ಷ ಜಿ.ವಿ.ಶ್ರೀನಿವಾಸರಾವ್, ರಾಜ್ಯ ಗೌರವಾಧ್ಯಕ್ಷ ಕೆ.ಎಸ್‌.ಮೋಹನ್‌ಕುಮಾರ್, ವಿದುಷಿ ಗೀತಾ, ಹಾಜರಿದ್ದರು. 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಬ್ಬರು ಸಂಗೀತ ಕಲಾವಿದರಿಗೆ ಸಂಗೀತ ವಿದ್ಯಾನಿಧಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *