ಛತ್ರಪತಿ ಶಾಹುಮಹಾರಾಜ್ ಸೇವೆ ಅಪಾರವಾದದ್ದು: ಪುಟ್ಟಸ್ವಾಮಿ ರಾಮಸಮುದ್ರ

ಚಾಮರಾಜನಗರ: ಛತ್ರಪತಿ ಶಾಹುಮಹಾರಾಜ್ ಸೇವೆ ಅಪಾರವಾದದ್ದು ಎಂದು ಬಿಎಸ್ ಪಿ ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ಜಿಲ್ಲಾ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಅವರು ತಿಳಿಸಿದರು.

ನಗರದ ಹೌಸಿಂಗ್ ಬೋರ್ಡ್ ನ ಅಂಬೇಡ್ಕರ್ ಪಾರ್ಕ್ ಹತ್ತಿರ ಇರುವ ಪರಿವರ್ತನಾ ಅಧ್ಯಯನ ಕೇಂದ್ರದಲ್ಲಿ ಬಿಎಸ್ಪಿ ಜಿಲ್ಲಾ ಸಮಿತಿ ವತಿಯಿಂದ ಛತ್ರಪತಿ ಶಾಹುಮಹಾರಾಜ್ ರವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಛತ್ರಪತಿ ಸಾಹುಮಹಾರಾಜ್ ರವರು 1874 ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕಾಗಲ್ ನಲ್ಲಿ ಜನಿಸಿದರು. ಈ ದೇಶದ ಪ್ರಥಮ ಮೀಸಲಾತಿ ಜನಕ ಎಂದು ಹೇಳಬಹುದು. ಇವರು 50%ರಷ್ಟು ಮೀಸಲಾತಿಯನ್ನು ಅಸ್ಪೃಶ್ಯರಿಗೆ ನೀಡುತ್ತಾರೆ. ಸುಮಾರು 18 ಶಾಲೆಗಳನ್ನು ಪ್ರತ್ಯೇಕವಾಗಿ ತೆರೆಯುತ್ತಾರೆ, ಶೂದ್ರರಿಗೆ 22 ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಸತಿ ಸಹ ಗಮನ ಪದ್ದತಿ, ಬಾಲ್ಯವಿವಾಹ ವಿರೋಧದ ಕಾನೂನುಗಳನ್ನ ಜಾರಿಮಾಡುತ್ತಾರೆ, ಹಲವಾರು ಸಾಮಾಜಿಕ ಮೌಢ್ಯ ಆಚರಣೆಯನ್ನು ವಿರೋಧಿಸಿ ಕಾನೂನುಗಳನ್ನು ಜಾರಿಮಾಡುತ್ತಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸ್ಕಾಲರ್ ಶಿಪ್ ನೀಡಿ ಅವರಿಗೆ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಾರೆ ಅಲ್ಲದೆ ಇನ್ನು ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಇದೆ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಹಾಗೂ ಇತರರು ಮಾತನಾಡಿದರು

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೊಳ್ಳೇಗಾಲ ಮಣಿ, ರಾಜ್ಯ ಕಾರ್ಯಕರಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಉಸ್ತುವಾರಿ ವಕೀಲರಾದ ರಾಮಸಮುದ್ರ ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ,ಜಿಲ್ಲಾ ಉಪಾಧ್ಯಕ್ಷ ಕಿಲಿಗೆರೆ ಬಸವಣ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಚವಾಡಿ ಪ್ರಕಾಶ್, ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ್,ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಶಂಕರ್ ಚೇತನ್, ಯಳಂದೂರು ಬ್ಲಾಕ್ ಸಮಿತಿ ಅಧ್ಯಕ್ಷ ಮಲ್ಲಿಕ್ ಬಹುಜನ್, ಸಂತೇಮರಳ್ಳಿ ಬ್ಲಾಕ್ ಸಮಿತಿ ಅಧ್ಯಕ್ಷ ಚಾಟೀಪುರ ಲಿಂಗರಾಜು,ಹನೂರು ಜಿಲ್ಲಾ ಕಾರ್ಯದರ್ಶಿ ಸುರೇಶ್, ಕೊಳ್ಳೇಗಾಲ ಪ್ರಧಾನ ಕಾರ್ಯದರ್ಶಿ ಶಿವು ಉತ್ತಂಬಳ್ಳಿ, ಕೊಳ್ಳೇಗಾಲ ಟೌನ್ ಅಧ್ಯಕ್ಷ ಶಶಿಧರ್, ಟೌನ್ ಅಧ್ಯಕ್ಷ ರಂಗಸ್ವಾಮಿ, ಟೌನ್ ಉಸ್ತುವಾರಿ ರಂಗಸ್ವಾಮಿ ಮುಡುಗುಂಡ, ಚಾ.ನಗರ ತಾಲ್ಲೂಕು ಉಪಾಧ್ಯಕ್ಷ ಶಿವಪುರ ಮಹೇಶ್ ಟೌನ್ ಉಪಾಧ್ಯಕ್ಷ ಕೊಳ್ಳೇಗಾಲ ಚಂದನ್ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *