ನಂಜನಗೂಡು : ಕಲಿಗಾಲ ವಾರಪತ್ರಿಕೆ ವಾರ್ಷಿಕೋತ್ಸವ ಸಮಾರಂಭ

ನಂಜನಗೂಡು: ನಗರದ ಶ್ರೀ ನೀಲಕಂಠೇಶ್ವರ ಶಾಲೆ ಅವರಣದಲ್ಲಿ ಕಲಿಗಾಲ ವಾರ ಪತ್ರಿಕೆ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅತಿಥಿಗಳ ಮೂಲಕ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಂತರ ಸಮಾರಂಭದಲ್ಲಿದ್ದ ಮಾಜಿ ಶಾಸಕರು ಹಾಗೂ ಸಚಿವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜ ಕ್ಷೇತ್ರದಲ್ಲಿ ಸೇವೆ ಮಾಡಿದ ಹಲವು ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಿದರು. ಬಡವರು ಪರ ಸಮಾಜ ಕ್ಷೇತ್ರ ರೈತಪರ ಹೋರಾಟ ದಲ್ಲಿ ಸಾಧನೆ ಮಾಡಿದಂತಹ ಡಾಕ್ಟರ್ ಅಬ್ದುಲ್ ಶುಕುರ್ ಗುರೂಜಿ ಇವರಿಗೆ ಕಲಿಗಾಲ ವಾರ ಪತ್ರಿಕೆಯ ವತಿಯಿಂದ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಸೋಮಶೇಖರ್, ನಿರೂಪಕಿ ನಂದಿನಿ, ರಾಜ್ಯ ಅಂಬೇಡ್ಕರ್ ಪ್ರಶಸ್ತಿ ವಿಜೇತರಾದ ವೆಂಕಟರಾಮಣ್ಣಸ್ವಾಮಿ ಹಾಗೂ ರಾಜಕೀಯ ನಾಯಕರು ಸಮಾಜ ಸೇವಕರು ಪತ್ರಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎ.ಎಸ್.ಟಿವಿ ವರದಿಗಾರ ಸತ್ಯನಾರಾಯಣ ಪ್ರಸಾದ್ ಪ್ರಾರ್ಥನೆ ಪ್ರಾರ್ಥನೆ ಸಲ್ಲಿಸಿದರು.

Leave a Reply

Your email address will not be published. Required fields are marked *