- ಗಾಳೀಪುರ ಬಡಾವಣೆಯ ಬೀಡಿ ಕಾಲೋನಿಯಲ್ಲಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಉದ್ಘಾಟಿಸಿದ ಚುಡಾ ಅಧ್ಯಕ್ಷ ಅಭಿಮತ
ಚಾಮರಾಜನಗರ: ಸೋಮವಾರ ರಾಜ್ಯಸರ್ಕಾರ ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರ(ಚುಡಾ) ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ) ಸಲಹೆ ನೀಡಿದರು.
ನಗರಸಭೆ ವ್ಯಾಪ್ತಿಯ ಗಾಳೀಪುರ ಬಡಾವಣೆಯ ಬೀಡಿಕಾಲೋನಿಯಲ್ಲಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲಾರಂಭ ಕಾರ್ಯಕ್ರಮವನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲೇ ಪ್ರಥಮಬಾರಿಗೆ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೌಲಾನಾ ಆಜಾದ್ ಪಬ್ಲಿಕ್
ಶಾಲೆ ಆರಂಭವಾಗುತ್ತಿದೆ, ಎಲ್‌ಕೆಜಿಯಿಂದ ೮ ನೇ ತರಗತಿಯವರಗೆ ಶಿಕ್ಷಣ ನೀಡಲಾಗುತ್ತದೆ, ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಬೋಧನೆ ಮಕ್ಕಳಿಗೆ ಸಿಗಲಿಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಆರಂಭಿಸುವAತೆ ಶಾಸಕರು ಹಾಗೂ ತಾವು ಕೆಡಿಪಿ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದೆವು, ಆ ಒಂದು ಶ್ರಮದ ಫಲವೆ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಮಂಜೂರಾಯಿತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲೇ ಮೊದಲಬಾರಿಗೆ ಉರ್ದು ಮಾಧ್ಯಮದ ಶಾಲೆಯಲ್ಲಿ ಕೆಪಿಎಸ್ ಮಾದರಿಯ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಆರಂಭವಾಗಿದ್ದು, ¸ಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ. ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರದ ಸವಲತ್ತು ಕೊಡಿಸುವ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಕೆ.ಎಸ್.ಮಾದಪ್ಪ, ತಾಲ್ಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಬಿ,ಆರ್,ಸಿ ರಾಜೀವ್, ಬಿಐಇಆರ್‌ಟಿ ರೆಬೆಲ್, ಮಾಜಿ ನಗರಸಭಾ ಸದಸ್ಯ ಕಲೀಲ್ ಉಲ್ಲಾ. ಎಸ್‌ಡಿಎಂಸಿ ಅಧ್ಯಕ್ಷೆ ಯೊಸ್ಮಿನ್,ತಾಜ್, ಮುಖ್ಯಶಿಕ್ಷಕಿ ಅಜೀರಾಬೇಗಂ,ಬಿಆರ್‌ಸಿ ಶಿಕ್ಷಕಎಂ,ಮುರುಗೇಶ್‌ಕುಮಾರ್, ಸೇರಿದಂತೆ ಶಿಕ್ಷರ ವೃಂz, ಪೋಷಕರು, ಸಿಆರ್‌ಪಿ, ಬಿಆರ್‌ಪಿ, ಬಡಾವಣೆ ನಿವಾಸಿಗಳು ಹಾಜರಿದ್ದರು,