ಅಂಬೇಡ್ಕರ್ ಜಯಂತಿ : ಚಾಮರಾಜನಗರದಲ್ಲಿ ಪಾನಕ, ಮಜ್ಜಿಗೆ ವಿತರಣೆ

ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಅರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಇಂಚರ ಗ್ರೂಪ್ ವತಿಯಿಂದ ಸಾರ್ವಜನಿಕ ಪಾನಕ, ಮಜ್ಜಿಗೆ ವಿತರಿಸಲಾಯಿತು.
ನಗರದ ಜೋಡಿರಸ್ತೆಯಲ್ಲಿರುವ ಇಂಚರ ಹೋಟಲ್ ಮುಂಭಾಗದಲ್ಲಿ  ಸಾರ್ವಜನಿಕರಿಗೆ ಪಾನಕ‌, ಮಜ್ಜಿಗೆ ವಿತರಿಸಲಾಯಿತು.
ಇಂಚರ ಹೋಟಲ್ ಮಾಲೀಕ ಸ್ಟೈಲ್ ಮಂಜುನಾಥ್ ಮಾತನಾಡಿ, ಶೋಷಿತ ಸಮುದಾಯ ಗಳ ಆಶಾಕಿರಣ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ
ಪಾನಕ, ಮಜ್ಜಿಗೆ ವಿತರಿಸಲಾಯಿತು. ಅಂಬೇಡ್ಕರ್ ರವರು ಮಹಾಪುರುಷರ ಬುದ್ದ, ಬಸವೇಶ್ವರ ಹಾದಿಯಲ್ಲಿ ಸಾಗಿ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಸಂವಿಧಾನ ದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಅದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್ ಕುದರ್, ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ರಾಧಾಕೃಷ್ಣ, ಪೋಸ್ಟ್‌ ಬಸವರಾಜಪ್ಪ,
ಈಶ್ವರ್ ರಕ್ಷಿತ್, ಎಪಿಎಂಸಿ ಮಾಜಿ ನಿರ್ದೇಶಕ ಶಿವಕುಮಾರ್, ನಾಗೇಂದ್ರ, ಕೋಟಂಬಳ್ಳಿ ಮಹೇಶ್ ಇತರರು.

Leave a Reply

Your email address will not be published. Required fields are marked *