- ಎಲ್‌ಎಸ್‌ಡಿ ಕನ್ನಡ ನಗೆನಾಟಕ ಪ್ರದರ್ಶನ
ಚಾಮರಾಜನಗರ : ನಾಟಕ ಸಮಾಜದ ಅಂಕುಡೊಂಕು ಸರಿಪಡಿಸುತ್ತದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು ಹೇಳಿದರು.
ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ರಂಗವಾಹಿನಿ ವತಿಯಿಂದ ಆಷಾಢ ರಂಗ ಸಂಭ್ರಮ ಅಂಗವಾಗಿ ಬೆಂಗಳೂರು ಥೇಮಾ ಅಭಿನಯಿಸುವ ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಮನುಷ್ಯನ ವ್ಯಕ್ತಿತ್ವವನ್ನು ಬೆಳೆಸುತ್ತದೆ. ನಾಟಕದಿಂದ ಸಮಾಜದ ಅಂಕುಡೊಂಕು ತಿದ್ದುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ.ಎಸ್ ಎಲ್ ಡಿ ನಗೆ ನಾಟಕ ಕೂಡ ಮನರಂಜನೆ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಅಂಶಗಳನ್ನು ಒಳಗೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಕರ್ ಮುನ್ನಾ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಕಲಾವಿದರ ತವರೂರಾಗಿದ್ದು, ಜಿಲ್ಲೆಯಲ್ಲಿ ನಾಟಕಗಳು ನಶಿಸಿಹೋಗದಂತೆ ಯುವಪೀಳಿಗೆಯು ಶಾಲಾ-ಕಾಲೇಜುಗಳಲ್ಲಿ ನಾಟಕಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಉದ್ಯಮಿ ಶ್ರೀನಿಧಿಕುದರ್ ಮಾತನಾಡಿ, ಜಿಲ್ಲೆಯಲ್ಲಿ ಜನಿಸಿದ ಡಾ.ರಾಜ್ ಕುಮಾರ್ ಅವರು ರಂಗಭೂಮಿ ಕಲೆಯಿಂದ ಕನ್ನಡ ಚಿತ್ರರಂಗದಲ್ಲಿ ಮೇರುನಟರಾಗಿ ಬೆಳೆದು ದೇಶದಲ್ಲಿ ಹೆಸರು ಮಾಡಿದರು. ಅಂತಹವರ ಹೆಸರಿನ ರಂಗಮಂದಿರಕ್ಕೆ ಎಸಿ ಸೇರಿದಂತೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಆಯೋಜಕ, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಮನರಂಜನೆ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುತ್ತದೆ. ಇದು ಮೈಸೂರಿನಲ್ಲಿ ಪ್ರದರ್ಶನವಾಗಿತು. ಚಾಮರಾಜನಗರ ಜಿಲ್ಲೆಯ ಜನತೆ ನೋಡಬೇಕು ಎಂಬ ಆಶಯದಲ್ಲಿ ಇಂದು ನಾಟಕ ಪ್ರದರ್ಶನ ಮಾಡಲಾಯಿತು. ನಾಟಕಗಳನ್ನು ನೋಡುವ ಮೂಲಕ ಪ್ರತಿಯೊಬ್ಬರೂ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಎಂದು ಮನವಿ ಮಾಡಿದರು.
ಪ್ರೇಕ್ಷಕರಿಂದ ಮೆಚ್ಚುಗೆ : ಕಲಾವಿದರಾದ ಸುನೇತ್ರಾ ಪಂಡಿತ್, ಸ್ನೇಹಾಕಪ್ಪಣ್ಣ, ಡಾ.ಸುಷ್ಮಾ ಎಸ್.ವಿ. ಅಭಿನಯದ ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಉತ್ತಮವಾಗಿ ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು.
ರೋಟರಿ ಅಧ್ಯಕ್ಷ ಅಬ್ದುಲ್‌ಅಜೀಜ್ ದೀನಾ, ಬಿಎಸ್‌ಐ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಶಿಲ್ಪ, ಉಪನ್ಯಾಸಕ ನಂಜುಂಡಯ್ಯ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಲ್.ಸುರೇಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿದರು.ಆಹಾರ ನಿರೀಕ್ಷಕ ಪ್ರಸಾದ್, ಜೆಬಿ ಮಹೇಶ್ ಇತರರು ಭಾಗವಹಿಸಿದ್ದರು.