- ಚಾಮರಾಜನಗರದಲ್ಲಿ ಆದಾಯ ತೆರಿಗೆ ದಿನಾಚರಣೆ
ಚಾಮರಾಜನಗರ: ದೇಶದ ಅಭಿವೃದ್ಧಿ ಹಾಗೂ ಸದೃಢ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ತೆರಿಗೆ ಪಾವತಿದಾರ ಆದಾಯ ತೆರಿಗೆ ಪಾವತಿಸಬೇಕು ಎಂದು ಚಾಮರಾಜನಗರ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ.ವೆಂಕಟೇಶ್ ತಿಳಿಸಿದರು.
ನಗರದ ಆದಾಯ ತೆರಿಗೆ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಆದಾಯ ತೆರಿಗೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಹಳ ವರ್ಷಗಳ ಹಿಂದೆ ಆದಾಯ ತೆರಿಗೆ ಮಿತಿ ಶೇಕಡಾ 90 ಇತ್ತು ಆಗ ತೆರಿಗೆ ಕೇಳುವ ಆಗುತ್ತಲೇ ಇತ್ತು.ಆದಾಯ ತೆರಿಗೆ ಪಾವತಿದಾರ ಎಂದರೆ ಅವರು ಸಿರಿವಂತ ಎಂದು ಭಾವಿಸಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮಾಧ್ಯಮ ವರ್ಗದವರು ಕೂಡ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ.ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚು ಮಾಡಿ ಯಾರಿಗೂ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಆದಾಯ ತೆರಿಗೆ ಅಧಿಕಾರಿ ದಿವಾಕರ ರಾವ್.ಜೆ ಮಾತನಾಡಿ ಆದಾಯ ತೆರಿಗೆ ಎಂದರೆ ಭಯ ಪಡುವ ಅಗತ್ಯವಿಲ್ಲ . ಆರ್ಥಿಕ ವರ್ಷ2025-26 ಕ್ಕೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷದ ವರೆಗೆ ಹೆಚ್ಚು ಮಾಡಿದೆ.ಇದರಿಂದ ತೆರಿಗೆ ಪಾವತಿ ದಾರರಿಗೆ ಅನುಕೂಲವಾಗಲಿದೆ ಎಂದರು.
ಆದಾಯ ತೆರಿಗೆಯನ್ನು ಮೂರು ತಿಂಗಳಿಗೊಮ್ಮೆ ಮುಂಗಡ ತೆರಿಗೆ ಪಾವತಿಸಿ ವರ್ಷಕ್ಕೊಮ್ಮೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸ ಬೇಕಾಗುತ್ತದೆ.ಇದನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕೊಳ್ಳೇಗಾಲದಲ್ಲಿ ಕಳೆದ ಐವತ್ತು ವರ್ಷಗಳಿಂದ ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಲೆಕ್ಕ ಪರಿಶೋಧಕರಾದ ಸನಾವುಲ್ಲ ಹಾಗೂ ಚಾಮರಾಜನಗರ ಆದಾಯ ತೆರಿಗೆಯಲ್ಲಿ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಪುಟ್ಟ ಮಾದಪ್ಪ , ಎನ್.ಸಿ.ಪ್ರಕಾಶ್, ನವೀನ್, ಮಣಿಕಂಠ ಸ್ವಾಮಿ, ಬಾಲು, ರಾಜೇಶ್, ಶಂಭುಲಿಂಗಯ್ಯ, ಶಿವರಾಜ್, ಚಂದ್ರು, ಶಿವಮೂರ್ತಿ, ಕಮಲ್ ರಾಜ್, ಮಹೇಂದ್ರ ಪ್ರಸಾದ್ ಎಂ. ಕಾಮರಾಜ್ ಇತರರು
ಹಾಜರಿದ್ದರು.