ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಮಾದರಿ : ಎ.ಎನ್.ರವಿ

ಚಾಮರಾಜನಗರ ಸಿವಿಲ್ ಗುತ್ತಿಗೆದಾರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ
ಚಾಮರಾಜನಗರ: ಚಾಮರಾಜನಗರ ಸಿವಿಲ್ ಗುತ್ತಿಗೆದಾರ ಸಂಘದ ಕಚೇರಿಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿ ಯನ್ನು ಆಚರಿಸಲಾಯಿತು.
ನಗರದ ಪಿಡಬ್ಲ್ಯೂಡಿ ಕಚೇರಿಯ ಪಕ್ಕದಲ್ಲಿರುವ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಸಂಘ ಅಧ್ಯಕ್ಷ ಎ.ಎನ್.ರವಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ.ಅಂಬೇಡ್ಕರ್ ಅವರು ದೇಶಕ್ಕೆ ಪವಿತ್ರವಾದ ಸಂವಿಧಾನ ಬರೆದುಕೊಡುವ  ಮೂಲಕ  ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಗಣೇಶ ಪ್ರಸಾದ್, ಕಾರ್ಯದರ್ಶಿ ಡಿ.ಪಿ.ಪ್ರಕಾಶ್, ಸಹ ಕಾರ್ಯದರ್ಶಿ ಅಬ್ದುಲ್ ಅಜೀಜ್, ವೈ.ಪಿ.ರಾಜೇಂದ್ರ ಪ್ರಸಾದ್,ಕಾಗಲವಾಡಿ ಚಂದ್ರು, ನಾರಾಯಣಸ್ವಾಮಿ,ನಂಜುಂಡಸ್ವಾಮಿ, ನಟರಾಜು, ಬಿ.ಎಲ್.ಮಹಾದೇವಸ್ವಾಮಿ, ರೇವಣ್ಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *