ಚಾಮರಾಜನಗರ: ಹಿಂದುಳಿದ ವರ್ಗಗಳ ಆಯೋಗ ಜಾರಿ ಮಾಡಿ ಸಮಸಮಾಜ ನಿರ್ಮಾಣ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಅಹಿಂದ ಚಳವಳಿ ರಾಜ್ಯ ಸಂಚಾಲಕ ಅಣ್ಣಯ್ಯ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ಆಯೋಗ ರಚನೆಯಿಂದ ಆಯೋಗದ ವರದಿಗೆ ಮುಖ್ಯಮಂತ್ರಿಗಳು ಸಾರ್ವಜನಿಕ ಹಣವನ್ನು ವೆಚ್ಚ ಮಾಡಿ 2015ರಿಂದಲ್ಲೂ ಆಯೋಗ ನೇಮಕ ಮಾಡಿಕೊಂಡು ಬಂದಿದ್ದಾರೆ. ಮೊದಲನೆಯದಾಗಿ 150 ಕೋಟಿ ವೆಚ್ಚ ಕಾಂತರಾಜು ವರದಿ ಪಡೆಯಲಾಯಿತು. ಆದರೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅವಧಿ ಮುಗಿದಿತ್ತು. 2019ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆ ನೇತೃತ್ವದಲ್ಲಿ ಸಿದ್ಧಪಡಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಕೂಡ ಸರ್ಕಾರ ಜಾರಿಗೆ ತರಲಿಲ್ಲ. ಆನಂತರ 2025 ರಲ್ಲಿ ಮಧುಸೂದನ್ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಿ ಅವರ ನೇತೃತ್ವದಲ್ಲಿ ಸಮೀಕ್ಷೆ ಮಾಡಿ ವರದಿ ತೆಗೆದಕೊಳ್ಳುತ್ತೇವೆ ಭರವಸೆ ಕೊಟ್ಟು ಮತ್ತೊಮ್ಮೆ ಸಾರ್ವಜನಿಕರ ನೂರಾರು ಕೋಟಿ
ಹಣವನ್ನು ವೆಚ್ಚ ಮಾಡಿ ವರದಿ ತರಿಸಿಕೊಂಡು ಅದನ್ನು ಕೂಡ ಜಾರಿಗೆ ತರುವುದಿಲ್ಲ. ಮತ್ತೆ 2026ರಲ್ಲಿ ಮಧುಸೂದನ್ ಅವರ ಆರ್ಥಿಕ, ಶೈಕ್ಷಣಿಕ, ಸಮಸಮಾಜದ ವರದಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಗಮಿಸುವ ಮೊದಲು ಪಡೆದು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಅದನ್ನು ಅನುಷ್ಠಾನ ಮಾಡಲಿಲ್ಲ. ಆಗಾಗಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಜಾರಿಗೆ ತಂದು ಸಮಸಮಾಜ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಅಹಿಂದ ಚಳವಳಿ ಜಿಲ್ಲಾಧ್ಯಕ್ಷ ಎಸ್. ಸೋಮನಾಯಕ ಮಾತನಾಡಿ, ಅಹಿಂದವನ್ನು ಮೂರು ಗುಂಪುಗಳಾಗಿ ಮಾಡಿದ್ದಾರೆ. ಸರ್ಕಾರ ಅಹಿಂದ ವರ್ಗಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪಾಳ್ಯ ಕೃಷ್ಣ, ಹರದನಹಳ್ಳಿ ಶಿವಣ್ಣ, ಅಮಚವಾಡಿ ರಾಜು,ಯಾನಗಳ್ಳಿ ರಂಗಸ್ವಾಮಿ, ಕಿಲಗೆರೆ ಜಯಕುಮಾರ್, ಹರದನಹಳ್ಳಿ ಬಂಗಾರು ಇತರರು ಹಾಜರಿದ್ದರು.
