- ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಎಡಿಸಿ ಜವರೇಗೌಡರ ಮುಖಾಂತರ ಸಿಎಂ, ಶಿಕ್ಷಣ ಇಲಾಖೆ ಸಚಿವರಿಗೆ ಮನವಿ
ಚಾಮರಾಜನಗರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಲಾಗುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಬಿ.ಇಡಿ., ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್) ವಿದ್ಯಾರ್ಥಿಗಳಿಗೂ ಸಹ ಅವಕಾಶ ಕಲ್ಪಿಸಿಕೊಡುವಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಮುಖಾಂತರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮುಖ್ಯಮಂತ್ರಿ ಗಳಿಗೆ , ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಈ ಸಾರಿ ೧೫ ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಬಹಳ ವರ್ಷಗಳಿಂದ ಈ ಹಿಂದಿನ ಸರ್ಕಾರಗಳು ಮಾಡಲಾಗದಂತಹ ಶಿಕ್ಷಕರ ನೇಮಕಾತಿಯನ್ನು ತಾವು ಮಾಡಲು ಹೊರಟಿರುವ ನಿಮ್ಮ ಘನ ಸರ್ಕಾರಕ್ಕೆ ಅಭಿನಂದನೆಗಳು. ಅದರಂತೆಯೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಶಿಕ್ಷಕರ ನೇಮಕಾತಿಗಳ ಅರ್ಜಿಯನ್ನು ತಾವು ಈಗಾಗಲೇ ಕರೆದಿದ್ದು ಇದಕ್ಕೆ ಪೂರಕವಾಗಿ ಪರೀಕ್ಷೆಗಳನ್ನು ತಾವು ನಡೆಸಲು ಉದ್ದೇಶಿಸಿರುತ್ತೀರಿ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಿ.ಇಡಿ. ಅಂತಿಮ ಸೆಮಿಸ್ಟರ್ (೪ನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ನವೆಂಬರ್‌ನಲ್ಲಿ ಈ ನಾಲ್ಕನೇ ಸೆಮಿಸ್ಟರ್‌ನ ಬಿ.ಇಡಿ. ಪರೀಕ್ಷೆಯೂ ಸಹ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಈ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅವರು ಸಹ ಅರ್ಜಿಗಳನ್ನು ಹಾಕಲು ತಾವು ಅವಕಾಶ ಮಾಡಿಕೊಡಬೇಕು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಹೊಮ್ಮ ಲೋಕೇಶ್, ಜಗದೀಶ್, ಮಂಗಲದ ಹೊಸೂರು ಶಿವಣ್ಣ, ರಾಚಪ್ಪ, ಆಟೋ ಲಿಂಗರಾಜು, ಮುತ್ತು ಇತರರು ಹಾಜರಿದ್ದರು.
